ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಮನೆ ಸೇರಿದಂತೆ ಹಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ED Raid ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಅಶ್ಲೀಲ ವೀಡಿಯೊ ರೆಕಾರ್ಡಿಂಗ್ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳು ಮುಂಬೈನ ಕುಂದ್ರಾ ಅವರ ಜುಹು ನಿವಾಸ, ಉತ್ತರಪ್ರದೇಶ ಸೇರಿದಂತೆ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವಿವಾದಾತ್ಮಕ ವೀಡಿಯೊಗಳ ಮೂಲಕ ಭಾರತದಲ್ಲಿನ ಹಣವನ್ನು ವಿದೇಶಕ್ಕೆ ವರ್ಗಾಯಿಸಲಾಗಿದೆ ಎಂಬ ಆರೋಪವನ್ನು ಈ ಪ್ರಕರಣ ಒಳಗೊಂಡಿದೆ. ಮೂಲಗಳ ಪ್ರಕಾರ, ಬಹು ವಹಿವಾಟುಗಳಲ್ಲಿ ಗಮನಾರ್ಹ ಪ್ರಮಾಣದ ಹಣವನ್ನು ಗಡಿಯಾಚೆಗೆ ವರ್ಗಾಯಿಸಲಾಗಿದೆ. ಇದು ಇ.ಡಿ.ತನಿಖೆ ನಡೆಸಲು ಕಾರಣವಾಯಿತು ಎಂದು ಹೇಳಲಾಗಿದೆ.
ಮೇ 2022 ರಲ್ಲಿ ಪ್ರಾರಂಭವಾದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಕುಂದ್ರಾ ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ಸಲ್ಲಿಸಿದ ಎರಡು ಎಫ್‌ಐಆರ್‌ಗಳು ಮತ್ತು ನಂತರದ ಆರೋಪಪಟ್ಟಿಗಳ ನಂತರ ಶುರುವಾಯಿತು. ಪೊಲೀಸರು ಕುಂದ್ರಾ ಮತ್ತು ಹಲವಾರು ಸಹಚರರನ್ನು ಬಂಧಿಸಿದ್ದರು, ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಅಶ್ಲೀಲ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಮತ್ತು ಸ್ಟ್ರೀಮಿಂಗ್ ಮಾಡಲು ಬಳಸಲಾಗಿದೆ ಎಂದು ವರದಿಯಾದ Hotshots ಹೆಸರಿನ ಅಪ್ಲಿಕೇಶನ್‌ನ ಬಳಕೆಯ ಸುತ್ತ ಆರೋಪಗಳಿವೆ. ಕುಂದ್ರಾ ಪದೇ ಪದೇ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಅಶ್ಲೀಲ ವೀಡಯೊಗಳ ನಿರ್ಮಾಣ ಅಥವಾ ವಿತರಣೆಗೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ