2015-16 ರ ರಾಮ್ ಸ್ಲಾಮ್ T20 ಚಾಲೆಂಜ್ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟ್ ಆಟಗಾರರನ್ನು ಬಂಧಿಸಲಾಗಿದೆ.
ಮಾಜಿ ಅನುಭವಿ ಆಟಗಾರರಾದ ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಅವರನ್ನು ಬಂಧಿಸಲಾಗಿದೆ ಮತ್ತು ಅವರ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರು ದಕ್ಷಿಣ ಆಫ್ರಿಕಾ ತಂಡದ ಪರ
2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆಗಟ್ಟುವಿಕೆ ಮತ್ತು ಹೋರಾಟದ ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ಮೂವರು ಆಟಗಾರರ ಮೇಲೆ ಈಗ ಐದು ಆರೋಪಗಳನ್ನು ಮಾಡಲಾಗಿದೆ.
ಈ ಮೂವರ ಬಂಧನವು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಳೆಯ ಟಿ20 ಟೂರ್ನಮೆಂಟ್ ‘ರಾಮ್ ಸ್ಲಾಮ್’ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದೆ. ಈ ಮೂವರೂ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಮೂವರು ಆಟಗಾರರನ್ನು ಅಮಾನತುಗೊಳಿಸಿತ್ತು. ವರದಿಗಳ ಪ್ರಕಾರ, ಮಭಾಲಟಿ ಅವರನ್ನು ನವೆಂಬರ್ 18 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಯನ್ನು 20 ಫೆಬ್ರವರಿ 2025 ಕ್ಕೆ ಮುಂದೂಡಲಾಗಿದೆ. ಉಳಿದಂತೆ ನವೆಂಬರ್ 28 ರಂದು ಸೋಲೆಕಿಲ್ ಮತ್ತು ನವೆಂಬರ್ 29 ರಂದು ಸೋತ್ಸೋಬೆಯನ್ನು ಬಂಧಿಸಲಾಗಿದೆ.
ದಿಗ್ಗಜ ಆಟಗಾರ
ಎಡಗೈ ವೇಗದ ಬೌಲರ್ ಲೊನ್ವಾಬೊ ಸೋತ್ಸೋಬೆ ಎಲ್ಲಾ ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಆಡಿದ್ದಾರೆ. 61 ಏಕದಿನ ಪಂದ್ಯಗಳನ್ನಾಡಿರುವ ಸೋತ್ಸೋಬೆ 94 ವಿಕೆಟ್ ಪಡೆದಿದ್ದರು. ಈ 94 ವಿಕೆಟ್ಗಳ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿಯಂತಹ ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಹೆಸರು ಸೇರಿದೆ. ಆತ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಕಬಳಿಸಿದ್ದು, ಇದರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ವಿಕೆಟ್ಗಳು ಸೇರಿವೆ. ಇದಲ್ಲದೇ ಅವರು 23 ಟಿ20 ಪಂದ್ಯಗಳನ್ನಾಡಿದ್ದು 18 ವಿಕೆಟ್ ಪಡೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ