ಮೆಕ್ಸಿಕನ್‌ ಅಧ್ಯಾತ್ಮಿಕ ಶುದ್ಧೀಕರಣ ಆಚರಣೆ ಸಮಯದಲ್ಲಿ ಅಮೆಜಾನಿಯನ್ ಕಪ್ಪೆ ವಿಷದ ಅಂಶ ಸೇವಿಸಿದ ನಂತರ ಸಾವಿಗೀಡಾದ ನಟಿ..!

ನಂಬಿಕೆಯು ಮಹತ್ತರವಾದ ಪ್ರಾಮುಖ್ಯತೆ ಹೊಂದಿದೆ, ಆದರೆ ಅದು ತರ್ಕಬದ್ಧ ಚಿಂತನೆ ಹೊಂದಿಲ್ಲದ ಕುರುಡು ನಂಬಿಕೆಯಾದರೆ ಅದು ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ ಎಂದೇ ಹೇಳಬಹುದು.
ಇದು ಮೆಕ್ಸಿಕನ್ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಅವರ ಪ್ರಕರಣವಾಗಿದೆ. ಅವರು ವಾಂತಿ ಮತ್ತು ಅತಿಸಾರದಿಂದ ಬಳಲಿದ ನಂತರ ಡಿಸೆಂಬರ್ 1 ರಂದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಅವರು ಕಾಂಬೋ ಎಂಬ ಆಧ್ಯಾತ್ಮಿಕ ಶುದ್ಧೀಕರಣದ ಆಚರಣೆಯಲ್ಲಿ ಭಾಗವಹಿಸಿದ ನಂತರ ಪ್ರಾಣ ಕಳೆದುಕೊಂಡಿದ್ದಾರೆ. ಈ ಆಚರಣೆಯು ಅಮೆಜೋನಿಯನ್ ದೈತ್ಯ ಮಂಕಿ ಕಪ್ಪೆಯ ನಂಜು (ವಿಷ) ಸೇವನೆಯನ್ನೂ ಒಳಗೊಂಡಿರುತ್ತದೆ.
ಯುವ ನಟಿ ಮೆಕ್ಸಿಕೋದಲ್ಲಿ ಹೀಲಿಂಗ್‌ ತರಬೇತಿ ಡಿಪ್ಲೊಮಾ ಕಾರ್ಯಕ್ರಮದ ಭಾಗವಾಗಿ ಅಧ್ಯಾತ್ಮಿಕ ಶುದ್ಧೀಕರಣ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಕೊಂಬೊ ಎಂಬ ಪಾನೀಯವನ್ನು ಸೇವಿಸಿದ್ದಾರೆ.

ದಕ್ಷಿಣ ಅಮೆರಿಕಾದ ಕಪ್ಪೆ ವಿಷಕಾರಿ ಅಂಶವನ್ನು ಹೊಂದಿರುವ ಈ ಪಾನೀಯವನ್ನು ಸಾಂಪ್ರದಾಯಿಕವಾಗಿ ಸ್ಥಳೀಯ ಸಮುದಾಯಗಳು ದೇಹದೊಳಗಿನ ನಂಜಿನ ಶುದ್ಧೀಕರಣಕ್ಕಾಗಿ ಬಳಸುತ್ತಾರೆ. ಆದರೆ ಇದನ್ನು ಹಲವಾರು ದೇಶಗಳಲ್ಲಿ ನಿಷೇಧಿಸಲಾಗಿದೆ.
ದಿ ಮೆಟ್ರೋ ಪ್ರಕಾರ, ರೊಡ್ರಿಗಸ್ ಅವರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ತೀವ್ರವಾದ ಅತಿಸಾರವನ್ನು ಹೊಂದಿದ್ದರು. ಇದು ದೇಹ ಶುದ್ಧೀಕರಣದ ಪ್ರತಿಕ್ರಿಯೆಗಳ ಭಾಗವಾಗಿದೆ. ಹೀಗಾಗಿ ನಟಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಮೊದಲು ಸಹಾಯವನ್ನು ನಿರಾಕರಿಸಿದ್ದಾರೆ. ಆದರೆ ಅಂತಿಮವಾಗಿ ಆಕೆಯ ಸ್ನೇಹಿತೆ ಅವರನ್ನು ನೋಡಲು ಬಂದಾಗ ಆಸ್ಪತ್ರೆಗೆ ಒಯ್ಯಲು ಸಮ್ಮತಿಸಿದ್ದಾರೆ. ರೋಡ್ರಿಗಸ್ ಅನ್ನು ರೆಡ್ ಕ್ರಾಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ನಟಿ ಚಿಕಿತ್ಸೆ ಫಲಿಸದೆ ಸಾವಿಗೀಡಾದರು ಎಂದು ಹೇಳಲಾಗಿದೆ.

ನಟಿ ಆಸ್ಪತ್ರೆಗೆ ಬರಲು ಎಷ್ಟು ಸಮಯ ತೆಗೆದುಕೊಂಡರು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಆಕೆಯನ್ನು ಮೆಕ್ಸಿಕನ್ ನಿರ್ಮಾಣ ಸಂಸ್ಥೆ ಮಾಪಾಚೆ ಫಿಲ್ಮ್ಸ್ ಗುರುತಿಸಿದೆ, ಅದು ನಟಿಗೆ ಗೌರವ ಸೂಚಿಸಲು ಇನ್ಸ್ಟಾಗ್ರಾಂ (Instagram)ನಲ್ಲಿ ಪೋಸ್ಟ್ ಮಾಡಿದೆ.
“ತೀವ್ರವಾದ ವಿಷಾದದೊಂದಿಗೆ, ನಮ್ಮ ಪ್ರೀತಿಯ ಸಹೋದ್ಯೋಗಿ ಮತ್ತು ಸ್ನೇಹಿತೆ ಮಾರ್ಸೆಲಾ ಅಲ್ಕಾಜರ್ ರೋಡ್ರಿಗಸ್ ಅವರ ಸಾವಿಗೆ ನಾವು ಶೋಕಿಸುತ್ತೇವೆ, ಎಂದು ಉತ್ಪಾದನಾ ಕಂಪನಿಯು ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿದೆ. ಅವರ ನಿಧನವು ನಮ್ಮ ಹೃದಯದಲ್ಲಿ ಮತ್ತು ನಮ್ಮ ವೃತ್ತಿಪರ ಸಮುದಾಯದಲ್ಲಿ ಅಪಾರ ನಿರ್ವಾತವನ್ನು ಉಂಟುಮಾಡಿದೆ. ಅವರ ಸಮರ್ಪಣೆ, ಸಂತೋಷ ಮತ್ತು ಬದ್ಧತೆ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕ ನಮ್ಮೆಲ್ಲರ ಮೇಲೆ ಅಳಿಸಲಾರದ ಗುರುತು ಬಿಟ್ಟಿದೆ ಎಂದು ಅದು ಹೇಳಿದೆ. ಈ ದುರದೃಷ್ಟಕರ ಘಟನೆಯು ಅಂತಹ ಸಾಂಪ್ರದಾಯಿಕ ಆಚರಣೆಗಳ ಅಪಾಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement