ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದುರಂತ ಘಟನೆಯೊಂದರಲ್ಲಿ, ತಮಿಳುನಾಡಿನ ರಾಣಿಪೇಟ್‌ನಲ್ಲಿ 9 ನೇ ತರಗತಿಯ ವಿದ್ಯಾರ್ಥಿ ತರಗತಿಯ ಸಮಯದಲ್ಲಿ ಪಾಠ ಕೇಳುತ್ತಿರುವಾಗ ಕುಳಿತಲ್ಲೇ ಕುಸಿದು ಸಾವಿಗೀಡಾಗಿದ್ದಾರೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಡಿಸೆಂಬರ್ 10ರಂದು ಬೆಳಿಗ್ಗೆ 11:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
14 ವರ್ಷದ ಮೃತ ವಿದ್ಯಾರ್ಥಿನಿ ಅದ್ವಿತಾ ತನ್ನ ತರಗತಿಯಲ್ಲಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ಆಕೆಯನ್ನು ಮೆಲ್ವಿಶಾರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ವೈದ್ಯರು ಆಕೆ ‘ಮೃತಪಟ್ಟಿದ್ದಾಳೆ’ ಎಂದು ಘೋಷಿಸಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವಿದ್ಯಾರ್ಥಿನಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ಕಾವೇರಿಪಾಕ್ಕಂ ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಮೃತದೇಹವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅದ್ವಿತಾ ಕುಸಿದು ಬೀಳುವ ಮೊದಲು ಸಹಪಾಠಿಯ ಭುಜದ ಮೇಲೆ ಕ್ಷಣಕಾಲ ವಿಶ್ರಾಂತಿ ಪಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಅದ್ವಿತಾ ಮೂರ್ಛೆ ಹೋಗಿದ್ದಾಳೆಂದು ಅರ್ಥವಾದ ನಂತರ ಗಾಬರಿಗೊಂಡ ಸಹಪಾಠಿ ತನ್ನ ಶಿಕ್ಷಕರನ್ನು ಕೂಗಿ ಕರೆದ್ದಾಳೆ. ಶಿಕ್ಷಕಿ ವಿದ್ಯಾರ್ಥಿನಿಗೆ ಸಹಾಯ ಮಾಡಲು ತಕ್ಷಣವೇ ಧಾವಿಸಿದ್ದಾಳೆ. ಕಾಣಬಹುದು. ಆಕೆಯ ಕೆಲವು ಸಹಪಾಠಿಗಳು ಸಹಾಯಕ್ಕಾಗಿ ಮೊರೆ ಇಡಲು ಹೊರಗೆ ಓಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement