ಇವಿಎಂ ಹೇಗೆ ತಿರುಚಬಹುದು ಎಂಬುದನ್ನು ತೋರಿಸಿ : ಒಮರ್‌ ಅಬ್ದುಲ್ಲಾ ನಂತರ ಕಾಂಗ್ರೆಸ್‌ ನಿಲುವು ಪ್ರಶ್ನಿಸಿದ ಟಿಎಂಸಿ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ಕಾಂಗ್ರೆಸ್ ನೇತೃತ್ವದ ಆರೋಪವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕಸದ ಬುಟ್ಟಿಗೆ ಹಾಕಿರುವ ಬೆನ್ನಲ್ಲೇ ಮತ್ತೊಂದು ಪ್ರಮುಖ ವಿಪಕ್ಷವು ಇವಿಎಂ ಸುತ್ತಲಿನ ಕಾಂಗ್ರೆಸ್‌ ಪ್ರಶ್ನೆಗಳನ್ನು ತಳ್ಳಿಹಾಕಿದೆ.
ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚುವ ಬಗ್ಗೆ ಯಾವುದೇ ಪುರಾವೆ ಇದ್ದರೆ ಅದನ್ನು ಚುನಾವಣಾ ಆಯೋಗಕ್ಕೆ ತೋರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
“ಇವಿಎಂ ಬಗ್ಗೆ ಪ್ರಶ್ನೆ ಎತ್ತುವವರು ತಮ್ಮ ಬಳಿ ಏನಾದರೂ ಇದ್ದರೆ ಅದನ್ನು ಚುನಾವಣಾ ಆಯೋಗಕ್ಕೆ ಡೆಮೊ ತೋರಿಸಬೇಕು. ಇವಿಎಂ ಯಾದೃಚ್ಛಿಕ ಸಮಯದಲ್ಲಿ ಸರಿಯಾಗಿ ಕೆಲಸ ನಡೆದಿದ್ದರೆ ಮತ್ತು ಬೂತ್‌ನಲ್ಲಿ ಕೆಲಸ ಮಾಡುವವರು ಅಣಕು ಮತದಾನದ ಸಮಯದಲ್ಲಿ ಹಾಗೂ ಎಣಿಕೆ ಸಮಯದಲ್ಲಿ ಅದನ್ನು ಪರಿಶೀಲಿಸುತ್ತಾರೆ. ಇದರ ನಂತರ ಈ ಆರೋಪದಲ್ಲಿ ಯಾವುದೇ ಹುರುಳಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಯಾರಾದರೂ ಭಾವಿಸಿದರೆ, ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಬೇಕು ಮತ್ತು ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು … ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಏನನ್ನೂ ಮಾಡಲಾಗುವುದಿಲ್ಲ …,” ಎಂದು ಅಭಿಷೇಕ ಬ್ಯಾನರ್ಜಿ ಹೇಳಿದ್ದಾರೆ.
ಈ ಟೀಕೆಗಳು ಬಹುತೇಕ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ ವಿರುದ್ಧ ನೀಡಿದ ಹೇಳಿಕೆಗಳ ನಂತರ ಬಂದಿದೆ. ನೀವು ಗೆದ್ದಾಗ ಸಂಭ್ರಮಿಸುತ್ತೀರಿ ಮತ್ತು ಸೋತಾಗ ಇವಿಎಂಗಳನ್ನು ದೂಷಿಸುತ್ತೀರಿ ಎಂದು ಎವಿಎಂ ಕುರಿತಾದ ಕಾಂಗ್ರೆಸ್‌ ನಿಲುವಿಗೆ ಅವರು ಟೀಕಿಸಿದ್ದರು. “ನೀವು ಅದೇ ಇವಿಎಂಗಳನ್ನು ಬಳಸಿಕೊಂಡು ಸಂಸತ್ತಿನ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಾಗ   ಅದನ್ನು ನಿಮ್ಮ ಪಕ್ಷಕ್ಕೆ ಒಂದು ರೀತಿಯ ವಿಜಯವೆಂದು  ಸಂಬ್ರಮಿಸಿದ ನೀವು, ಕೆಲವು ತಿಂಗಳ ನಂತರ ಚುನಾವಣಾ ಫಲಿತಾಂಶಗಳು ನಿಮ್ಮ ಪರವಾಗಿಲ್ಲ ಎಂಬ ಕಾರಣಕ್ಕೆ ಈ ಇವಿಎಂಗಳನ್ನು ನಂಬುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಒಮರ್‌ ಅಬ್ದುಲ್ಲಾ ಹೇಳಿದ್ದರು.

ಪ್ರಮುಖ ಸುದ್ದಿ :-   ನಲ್ಲಿ ನೀರು ವಿವಾದ: ಕೇಂದ್ರ ಸಚಿವರ ಇಬ್ಬರು ಸೋದರಳಿಯಂದಿರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಕಾಂಗ್ರೆಸ್ ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಮಹಾರಾಷ್ಟ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಎವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಕ್ಷವು ಚುನಾವಣಾ ಆಯೋಗವನ್ನು ಭೇಟಿ ಮಾಡಿತು.
“ಇವಿಎಂ ಚುನಾವಣಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇಡೀ ಚುನಾವಣಾ ಯಂತ್ರದಲ್ಲಿ ಸಮಸ್ಯೆಗಳಿವೆ ಮತ್ತು ಉದ್ದೇಶಿತ ಚಾಲಚಕ್ಯತೆ ನಡೆದಿದೆ… ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ರೀತಿಯ ಫಲಿತಾಂಶಗಳು ಅಸಾಧ್ಯ. ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ… ನಾವು ಇಡೀ ಚುನಾವಣಾ ಯಂತ್ರದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದೇವೆ. ಅದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ, ”ಎಂದು ಜೈರಾಮ ರಮೇಶ ಡಿಸೆಂಬರ್ 1 ರಂದು ಹೇಳಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement