ಬಾಸ್‌ ಜೊತೆ ಮಲಗಲು ನಿರಾಕರಿಸಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಗಂಡ..!

ಮುಂಬೈ: ಬಾಸ್‍ ಜೊತೆ ಮಲಗಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್(Talaq Case) ನೀಡಿದ ವಿದ್ಯಮಾನ ವರದಿಯಾಗಿದೆ. ಆರೋಪಿ ಪತಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದು, ಈತನ ವಿರುದ್ಧ ಮುಂಬೈನ ಕಲ್ಯಾಣ ಪ್ರಕರಣ ದಾಖಲಾಗಿದೆ. 45 ವರ್ಷದ ವ್ಯಕ್ತಿಯೊಬ್ಬ ತನ್ನ ಎರಡನೇ 28 ವರ್ಷದ ಪತ್ನಿಗೆ ಪಾರ್ಟಿಯಲ್ಲಿ ತನ್ನ ಬಾಸ್‍ನೊಂದಿಗೆ ಮಲಗಲು ಸೂಚಿಸಿದ್ದಾನೆ, ಆದರೆ ಆಕೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.
ನಂತರ, ಆತ ತನ್ನ ಮೊದಲ ಹೆಂಡತಿಗೆ 15 ಲಕ್ಷ ರೂ.ಗಳನ್ನು ನೀಡುವಂತೆ ಎರಡನೇ ಪತ್ನಿಗೆ ಬಲವಂತ ಮಾಡಿದ್ದಾನೆ. ಆದರೆ ಆತನ ಎರಡನೇ ಪತ್ನಿ ನಿರಾಕರಿಸಿದ್ದಾಳೆ. ಆಗ ಗಂಡ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಕುರಿತು ಪತ್ನಿ ದೂರು ದಾಖಲಿಸಿದ್ದಾಳೆ.
ಇದು 2019 ರಿಂದ ಕ್ರಿಮಿನಲ್ ಅಪರಾಧವಾಗಿದ್ದರಿಂದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (2), 351 (2), 351 (3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂ.ಗಳ ಅಗತ್ಯವಿದ್ದು, ಹೀಗಾಗಿ ಎರಡನೇ ಪತ್ನಿಗೆ ಆಕೆಯ ಪೋಷಕರಿಂದ ಹಣ ಪಡೆಯುವಂತೆ ಪೀಡಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ನಂತರ ಹಣಕ್ಕಾಗಿ ತನ್ನ ಬಾಸ್‍ನೊಂದಿಗೆ ಮಲಗಲು ಪತ್ನಿಗೆ ಹೇಳಿದ್ದಾನೆ. ಪತ್ನಿ ನಿರಾಕರಿಸಿದ ನಂತರ ಆತ ಆಕೆಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ತಲಾಖ್ ನೀಡಿ ನಂತರ ಅವನು ತನ್ನ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ.
ಈ ಘಟನೆಯ ನಂತರ, ಪತ್ನಿ ಡಿಸೆಂಬರ್ 19 ರಂದು ಪತಿಯ ವಿರುದ್ಧ ಸಂಭಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮರುದಿನ ಈ ಪ್ರಕರಣವನ್ನು ಕಲ್ಯಾಣದ ಬಜಾರ್ಪೇತ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement