ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆಗಳ ನಂತರ ಮಧ್ಯಪ್ರದೇಶದ ಬೆತುಲ್‌ನಲ್ಲಿ ನಡೆದ ಬ್ಯಾಂಕ್ ಆಫ್ ಮಹಾರಾಷ್ಟ್ರದ ದುರುಪಯೋಗ ಪ್ರಕರಣದ ತೀರ್ಪು ನೀಡಿದ್ದು, ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ನಮನ್ ಓಜಾ ಅವರ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
2013 ರಲ್ಲಿ, ಬೇತುಲ್‌ನ ಮುಲ್ತಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ 1.25 ಕೋಟಿ ರೂ.ಗಳ ದೊಡ್ಡ ವಂಚನೆ ಪತ್ತೆಯಾಗಿತ್ತು. ವಂಚನೆಯಲ್ಲಿ ಆರು ಮಂದಿ ಭಾಗಿಯಾಗಿರುವುದು ತನಿಖೆ ಬಳಿಕ ಬೆಳಕಿಗೆ ಬಂದಿತ್ತು. ನ್ಯಾಯಾಲಯದ ತೀರ್ಪನ್ನು ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ.
ಹಗರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂಗೆ ಗರಿಷ್ಠ ಶಿಕ್ಷೆ, 10 ವರ್ಷಗಳ ಜೈಲು ಶಿಕ್ಷೆ ಮತ್ತು 80 ಲಕ್ಷ ರೂ.ದಂಡ ವಿಧಿಸಿದೆ. ವಿನಯ್ ಓಜಾ ಅವರು ಆ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು, ಅವರು ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ವಿಧಿಸಿದೆ. ಇಬ್ಬರು ದಲ್ಲಾಳಿಗಳಾದ ಧನರಾಜ ಪವಾರ್ ಮತ್ತು ಲಖನ್ ಹಿಂಗ್ವೆ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ.ದಂಡ ವಿಧಿಸಿದೆ.
ಬ್ಯಾಂಕ್ ಅಧಿಕಾರಿಗಳ ಪಾಸ್‌ವರ್ಡ್‌ಗಳ ಮೂಲಕ ಅವ್ಯವಹಾರ ನಡೆದಿದೆ. ಅಭಿಷೇಕ್ ರತ್ನಂ ಅನೇಕ ನಕಲಿ ಖಾತೆಗಳನ್ನು ತೆರೆಯಲು ಮತ್ತು ಸಾವಿರಾರು ರೂಪಾಯಿಗಳನ್ನು ಹಿಂಪಡೆಯಲು ಅದನ್ನು ಬಳಸಿಕೊಂಡರು.
ಈ ಅವ್ಯವಹಾರವು ಬೆಳಕಿಗೆ ಬರುತ್ತಿದ್ದಂತೆ ಅಭಿಷೇಕ ರತ್ನಂ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಮನ್ ಓಜಾ ಅವರ ತಂದೆಯು 2022 ರಲ್ಲಿ ಬಂಧನಕ್ಕೊಳಗಾಗಿದ್ದರು.
ಇದೀಗ ಈ ಪ್ರಕರಣದಲ್ಲಿ ನಾಲ್ವರು ತಪ್ಪಿತಸ್ಥರೆಂದು ದೃಢವಾಗಿದೆ. ಹೀಗಾಗಿ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಭಿಷೇಕ್ ರತ್ನಂ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷಗಳ ಶಿಕ್ಷೆ ವಿಧಿಸಿದೆ.
ನಮನ್ ಓಜಾ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್. 2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಓಜಾ 1 ಟೆಸ್ಟ್, 1 ಏಕದಿನ ಮತ್ತು 2 ಟಿ20 ಪಂದ್ಯಗಳನ್ನಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ