ಹುಬ್ಬಳ್ಳಿಯಲ್ಲಿದ್ದಾರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸಂಬಂಧಿಕರು..

ಹುಬ್ಬಳ್ಳಿ : ದೇಶ ಕಂಡ ಅಪರೂಪದ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾದರು. ಅಗಲಿದ ಮಾಜಿ ಪ್ರಧಾನಿಗೆ ಅನೇಕ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ದೇಶದ ಆರ್ಥಿಕ ಸುಧಾರಣೆಯ ಹರಿಕಾರ ಮನಮೋಹನ ಸಿಂಗ್ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲೂ ಇದ್ದಾರೆ.
ಮನಮೋಹನ ಸಿಂಗ್‌ ನಿಧನಕ್ಕೆ ಕುಟುಂಬ ದುಃಖ ವ್ಯಕ್ತಪಡಿಸಿದೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬದವರು ವಾಸವಿದ್ದಾರೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬವರನ್ನು ಹರ್ಪ್ರೀತ್ ಕೌರ್ ವಿವಾಹವಾಗಿದ್ದರು. ಅವರು ಮನಮೋಹನ ಸಿಂಗ್‌ ಪತ್ನಿ ಗುರುಶರಣ ಸಿಂಗ್‌ ಅವರ ತಂಗಿ. ಈ ಕಾರಣದಿಂದ ಮನಮೋಹನ್ ಸಿಂಗ್ ಅವರಿಗೂ ಹುಬ್ಬಳ್ಳಿಗೂ ವರ್ಷಗಳಿಂದಲೂ ನಂಟಿದೆ.
ಹುಬ್ಬಳ್ಳಿಯಲ್ಲಿರುವ ಮಾಜಿ ಪ್ರಧಾನಿ ಸಂಬಂಧಿಕರಾಗಿರುವ ಹರ್ನಾಮ್ ಸಿಂಗ್ ಕೊಹ್ಲಿ ಅವರಿಗೆ ನಗರದಲ್ಲಿ ಆಟೋಮೊಬೈಲ್ ಅಂಗಡಿಯಿದೆ. ಅಲ್ಲದೆ, ಹರ್ಪ್ರೀತ್ ಕುಟುಂಬಸ್ಥರಿಗೆ ಸಂಬಂಧಿಸಿದ ದಾಬಾ ಹುಬ್ಬಳ್ಳಿಯ ಹೊರವಲಯದಲ್ಲಿದೆ. ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ 14 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ಕುಟುಂಬದವರು ಮನಮೋಹನ್ ಸಿಂಗ್ ಅವರ ನಿಧನಕ್ಕೆ ಅವರು ಕಂಬನಿ ಮಿಡಿದಿದ್ದಾರೆ. ಹರಪ್ರೀತ್ ಕೌರ್ ಪುತ್ರ ಮನಮಿತ್ ಸಿಂಗ್‌ ಕೊಹ್ಲಿ ಅವರು, ಮನಮೋಹನ್ ಸಿಂಗ್ ಅಗಲಿಕೆ ಅತ್ಯಂತ ನೋವು ತಂದಿದೆ. ಅವರ ನಿಧನದಿಂದ ನಮಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜನಿವಾರ ವಿವಾದ | ವಿದ್ಯಾರ್ಥಿ ಸುಚಿವ್ರತಗೆ ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಉಚಿತ ಪ್ರವೇಶ; ಸಚಿವ ಈಶ್ವರ ಖಂಡ್ರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement