ಹೈದರಾಬಾದ್: ತೆಲಂಗಾಣದ(Telangana) ಮೇದಕ್‌ನಲ್ಲಿ ಹೊಸ ವರ್ಷದ ಆಚರಣೆಗೆಂದು(New Year) ಮದ್ಯ ಕದಿಯಲು ಯತ್ನಿಸಿದ ಐನಾತಿ ಕಳ್ಳ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಘಟನೆ ವರದಿಯಾಗಿದೆ.
ಮದ್ಯವನ್ನು ಅಲ್ಲಿಯೇ ಕಂಠಪೂರ್ತಿ ಕುಡಿದು ಅಮಲೇರಿ ಅಂಗಡಿಯಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಾಲೀಕ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಕಳ್ಳ ಮದ್ಯದಂಗಡಿಯ ಚಾವಣಿಯ ಹೆಂಚುಗಳನ್ನು ಎಚ್ಚರಿಕೆಯಿಂದ ತೆಗೆದನಂತರ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದ. ನಂತರ ಡ್ರಾಯರ್‌ಗಳಲ್ಲಿದ್ದ ಹಣ ತೆಗೆದುಕೊಂಡ ನಂತರ ಕದ್ದುಕೊಂಡು ಹೋಗಲು ಅಲ್ಲಿದ್ದ ಮದ್ಯದ ಬಾಟಲಿಗಳನ್ನು ಪ್ಯಾಕ್ ಮಾಡಿದ್ದಾನೆ. ಅಲ್ಲಿಯವರೆಗೆ ಎಲ್ಲವೂ ಯೋಜನೆಯ ಪ್ರಕಾರ ನಡೆದಿದೆ. ಆದರೆ ಈ ಕಳ್ಳ ನಂತರ ಅಲ್ಲಿದ್ದ ಮದ್ಯ ಕುಡಿದೇ ಹೊರಡಬೇಕು ಎಂದು ತೀರ್ಮಾನಿಸಿದ.
ಆತ ಒಂದರ ನಂತರ ಮತ್ತೊಂದು ಮದ್ಯದ ಬಾಟಲಿ ಖಾಲಿ ಮಾಡುತ್ತ ಹೋದ. ಕೆಲವೇ ಸಮಯದಲ್ಲಿ ಆತ ಪ್ರಜ್ಞೆ ಕಳೆದುಕೊಂಡ. ಮರುದಿನ ಬೆಳಿಗ್ಗೆ ಅಂಗಡಿಯ ಸಿಬ್ಬಂದಿಗೆ ಮಲಗಿದ ಸ್ಥಿತಿಯಲ್ಲಿಯೇ ಪತ್ತೆಯಾದ. ನಗದು ಹಣ ಹಾಗೂ ಮದ್ಯದ ಬಾಟಲಿಗಳು ಆತನ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳ್ಳತನದ ವೇಳೆ ಆತನ ಮುಖದ ಮೇಲೆ ಸಣ್ಣ ಗಾಯವೂ ಆಗಿತ್ತು. ಕಂಠಪೂರ್ತಿ ಕುಡಿದಿರುವ ಕಳ್ಳನ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಆತನಿಗೆ ಪ್ರಜ್ಞೆಗೆ ಬರುವುದನ್ನೇ ಕಾಯುತ್ತಿದ್ದಾರೆ,
ನಿಮ್ಮ ಕಾಮೆಂಟ್ ಬರೆಯಿರಿ