ಮನು ಭಾಕರ್, ಡಿ. ಗುಕೇಶ ಸೇರಿ ನಾಲ್ವರು ʼಖೇಲ್ ರತ್ನʼ ಪ್ರಶಸ್ತಿಗೆ ಆಯ್ಕೆ

ನವದೆಹಲಿ: ಡಬಲ್ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಚೆಸ್ ವಿಶ್ವ ಚಾಂಪಿಯನ್ ಡಿ ಗುಕೇಶ ಸೇರಿದಂತೆ ನಾಲ್ವರು ಅಥ್ಲೀಟ್‌ಗಳನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಗುರುವಾರ ಅಂತಿಮಗೊಳಿಸಿದೆ.
18 ವರ್ಷದ ಗುಕೇಶ ಅವರು, ವಿಶ್ವ ಚೆಸ್ ಚಾಂಪಿಯನ್‌ ಶಿಪ್‌ನಲ್ಲಿ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು.
22 ವರ್ಷದ ಭಾಕರ್ ಆಗಸ್ಟ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕಂಚು ಗೆದ್ದ ಪ್ರದರ್ಶನದೊಂದಿಗೆ ಒಂದೇ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲೀಟ್ ಆದರು. ಅದೇ ಗೇಮ್ಸ್‌ನಲ್ಲಿ ಹರ್ಮನ್‌ಪ್ರೀತ್ ಭಾರತ ಹಾಕಿ ತಂಡವನ್ನು ತನ್ನ ಸತತ ಎರಡನೇ ಕಂಚಿನ ಪದಕ ಗೆದ್ದ ತಂಡದ ನೇತೃತ್ವ ವಹಿಸಿದ್ದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಟಿ64 ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡ ಪ್ಯಾರಾ ಹೈ-ಜಂಪರ್ ಪ್ರವೀಣಕುಮಾರಸಹ ಖೇಲ್‌ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. T64 ವರ್ಗೀಕರಣವು ಮೊಣಕಾಲಿನ ಕೆಳಗೆ ಒಂದು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಮತ್ತು ಓಟಕ್ಕಾಗಿ ಪ್ರಾಸ್ಥೆಟಿಕ್ ಲೆಗ್ ಅನ್ನು ಅವಲಂಬಿಸಿರುವ ಕ್ರೀಡಾಪಟುಗಳಿಗೆ ಸಂಬಂಧಿಸಿದೆ. ಖೇಲ್ ರತ್ನ ಪ್ರಶಸ್ತಿಯು ಭಾರತದ ಕ್ರೀಡಾ ಪಟುಗಳಿಗೆ ನೀಡುವ ಅತ್ಯುನ್ನತ ಕ್ರೀಡಾ ಗೌರವವಾಗಿದೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

ಕ್ರೀಡಾ ಸಚಿವಾಲಯವು 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ 32 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಿದೆ.
ಜನವರಿ 17 ರಂದು (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2024
ಗುಕೇಶ ಡಿ.- ಚೆಸ್
ಹರ್ಮನ್‌ಪ್ರೀತ್ ಸಿಂಗ್-ಹಾಕಿ
ಪ್ರವೀಣಕುಮಾರ-ಪ್ಯಾರಾ-ಅಥ್ಲೆಟಿಕ್ಸ್
ಮನು ಭಾಕರ್- ಶೂಟಿಂಗ್
ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿ-2024
ಜ್ಯೋತಿ ಯರ್ರಾಜಿ-ಅಥ್ಲೆಟಿಕ್ಸ್
ಅನ್ನು ರಾಣಿ-ಅಥ್ಲೆಟಿಕ್ಸ್
ನೀತು-ಬಾಕ್ಸಿಂಗ್
ಸವೀತಿ- ಬಾಕ್ಸಿಂಗ್
ವಂತಿಕಾ ಅಗರವಾಲ್-ಚೆಸ್
ಸಲೀಮಾ ಟೆಟೆ-ಹಾಕಿ
ಅಭಿಷೇಕ-ಹಾಕಿ
ಸಂಜಯ-ಹಾಕಿ
ಜರ್ಮನ್‌ಪ್ರೀತ್ ಸಿಂಗ್-ಹಾಕಿ
ಸುಖಜೀತ್ ಸಿಂಗ್-ಹಾಕಿ
ರಾಕೇಶಕುಮಾರ-ಪ್ಯಾರಾ ಆರ್ಚರಿ
ಪ್ರೀತಿ ಪಾಲ್-ಪ್ಯಾರಾ ಅಥ್ಲೆಟಿಕ್ಸ್
ಜೀವನಜಿ ದೀಪ್ತಿ-ಪ್ಯಾರಾ ಅಥ್ಲೆಟಿಕ್ಸ್
ಅಜೀತ ಸಿಂಗ್-ಪ್ಯಾರಾ ಅಥ್ಲೆಟಿಕ್ಸ್
ಸಚಿನ್ ಸರ್ಜೆರಾವ್ ಖಿಲಾರಿ-ಪ್ಯಾರಾ ಅಥ್ಲೆಟಿಕ್ಸ್
ಧರಂಬೀರ್- ಪ್ಯಾರಾ ಅಥ್ಲೆಟಿಕ್ಸ್
ಪ್ರಣವ ಸೂರ್ಮಾ-ಪ್ಯಾರಾ ಅಥ್ಲೆಟಿಕ್ಸ್
ಎಚ್. ಹೊಕಾಟೊ-ಸೆಮಾ ಪ್ಯಾರಾ ಅಥ್ಲೆಟಿಕ್ಸ್
ಸಿಮ್ರಾನ್-ಪ್ಯಾರಾ ಅಥ್ಲೆಟಿಕ್ಸ್
ನವದೀಪ -ಪ್ಯಾರಾ ಅಥ್ಲೆಟಿಕ್ಸ್
ನಿತೇಶಕುಮಾರ -ಪ್ಯಾರಾ ಬ್ಯಾಡ್ಮಿಂಟನ್
ತುಳಸಿಮತಿ ಮುರುಗೇಶನ್-ಪ್ಯಾರಾ ಬ್ಯಾಡ್ಮಿಂಟನ್
ನಿತ್ಯಶ್ರೀ ಸುಮತಿ ಶಿವನ್-ಪ್ಯಾರಾ ಬ್ಯಾಡ್ಮಿಂಟನ್
ಮನೀಶಾ ರಾಮದಾಸ್-ಪ್ಯಾರಾ ಬ್ಯಾಡ್ಮಿಂಟನ್
ಕಪಿಲ್ ಪರ್ಮಾರ್-ಪ್ಯಾರಾ ಜೂಡೋ
ಮೋನಾ ಅಗರ್ವಾಲ್-ಪ್ಯಾರಾ ಶೂಟಿಂಗ್
ರುಬಿನಾ ಫ್ರಾನ್ಸಿಸ್-ಪ್ಯಾರಾ ಶೂಟಿಂಗ್
ಸ್ವಪ್ನಿಲ್ ಸುರೇಶ ಕುಸಲೆ-ಶೂಟಿಂಗ್
ಸರಬ್ಜೋತ್ ಸಿಂಗ್-ಶೂಟಿಂಗ್
ಅಭಯ ಸಿಂಗ್-ಸ್ಕ್ವಾಷ್
ಸಜನ್ ಪ್ರಕಾಶ-ಈಜು
ಅಮನ್-ಕುಸ್ತಿ
ಅರ್ಜುನ ಪ್ರಶಸ್ತಿ- ಜೀವಮಾನದ ಸಾಧನೆ
ಸುಚಾ ಸಿಂಗ್-ಅಥ್ಲೆಟಿಕ್ಸ್
ಮುರಳಿಕಾಂತ ರಾಜಾರಾಮ ಪೇಟ್ಕರ್-ಪ್ಯಾರಾ ಈಜು
ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ-2024
ಸುಭಾಷ ರಾಣಾ ಪ್ಯಾರಾ-ಶೂಟಿಂಗ್
ದೀಪಾಲಿ ದೇಶಪಾಂಡೆ -ಶೂಟಿಂಗ್
ಸಂದೀಪ ಸಾಂಗ್ವಾನ್-ಹಾಕಿ
ಎಸ್. ಮುರಳೀಧರನ್ -ಬ್ಯಾಡ್ಮಿಂಟನ್
ಅರ್ಮಾಂಡೋ ಆಗ್ನೆಲೊ ಕೊಲಾಕೊ-ಫುಟ್ಬಾಲ್

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement