ವೀಕ್ಷಿಸಿ..| ಕುಡಿದು ಅಮಲೇರಿ ನಡೆಯಲಾಗದ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದ ಗೂಳಿ ; ವೀಡಿಯೊ ಭಾರಿ ವೈರಲ್‌

2024 ರ ವರ್ಷದ ಮುಕ್ತಾಯ ಹಾಗೂ 2025 ಅನ್ನು ಸ್ವಾಗತಿಸುವ ಸಂಭ್ರಮಾಚರಣೆಯು ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಗಳಿಂದ ತುಂಬಿತ್ತು, ತೆಲಂಗಾಣದ ಮದ್ಯದಂಗಡಿಯಲ್ಲಿ ದರೋಡೆಯ ಮಧ್ಯೆ ಪಾನಮತ್ತನಾಗಿ ಅಂಗಡಿಯಲ್ಲೇ ಮಲಗಿ ನಿದ್ದೆಹೋದ ನಂತರ ಸಿಕ್ಕಿಬಿದ್ದ ಕಳ್ಳನಿಂದ ಹಿಡಿದು ಮಹಾರಾಷ್ಟ್ರದ ರೇವದಂಡ ಬೀಚ್‌ನಲ್ಲಿ ಮರಳಿನಲ್ಲಿ ಸಿಲುಕಿದ್ದ ಫೆರಾರಿಯನ್ನು ಎತ್ತಿನ ಗಾಡಿಯೊಂದು ಎಳೆದು ಹೊತರುವವರೆಗೆ ಅನೇಕ ವಾಸ್ತವವಿಕ ಘಟನೆಗಳು ಕಾಲ್ಪನಿಕಕ್ಕಿಂತ ವಿಚಿತ್ರವಾಗಿ ಕಂಡುಬಂದವು.
ಅಸಾಮಾಮಾನ್ಯವಾದ ಆದರೆ ಹೃದಯಸ್ಪರ್ಶಿ ಘಟನೆಯೊಂದು ಬ್ರೆಜಿಲ್‌ನಲ್ಲಿ ನಡೆದಿರುವುದು ವೀಡಿಯೊದಲ್ಲಿ ಸೆರೆ ಸಿಕ್ಕಿದೆ. ಹೃದಯಸ್ಪರ್ಶಿ ವಿದ್ಯಮಾನದಲ್ಲಿ ಬೃಹತ್‌ ಗೂಳಿಯೊಂದು  ಕುಡಿದು ಅಮಲಿನಲ್ಲಿದ್ದ ತನ್ನ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದಿದೆ.

ಮಾಲೀಕನ ನಿಷ್ಠಾವಂತ ಗೂಳಿ ತನ್ನ ನಡೆಯಲಾರದೆ ಎಡವುತ್ತಿರುವ ಮಾಲೀಕರನ್ನು ರಸ್ತೆಯ ಉದ್ದಕ್ಕೂ ನಿಧಾನವಾಗಿ ತಳ್ಳಿಕೊಂಡು ಹೋಗಿ ಮನೆ ವರೆಗೂ ಕರೆದೊಯ್ದಿದೆ. ಅದು ತನ್ನ ಮಾಲೀಕನಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿಂದ ಆತನನ್ನು ತಳ್ಳುತ್ತ ಮನೆಗೆ ಕರೆದೊಯ್ದಿದೆ. ಗೂಳಿಯ ಈ ಅನಿರೀಕ್ಷಿತ ಬಿದ್ಧಿವಂತಿಕೆ ಮತ್ತು ನಿಷ್ಠೆಯು ಅಂತರ್ಜಾಲದಲ್ಲಿ ಧೂಳೆಬ್ಬಿಸಿದೆ. ಅನೇಕರು ಈ ಗೂಳಿಯನ್ನು ಮಾಲೀಕನ ನಿಜವಾದ ಒಡನಾಡಿ ಎಂದು ಹೊಗಳಿದ್ದಾರೆ. ಮಾಲೀಕ ಹಾಗೂ ಗೂಳಿಯ ಬಾಂಧವ್ಯ ನೆಟ್ಟಿಗರ ಮನ ಗೆದ್ದಿದೆ.
ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ವೀಡಿಯೊ 79 ಲಕ್ಷ ವೀಕ್ಷಣೆಗಳನ್ನು ಕಂಡಿದೆ ಹಾಗೂ ಅನೇಕರು ಕಾಮೆಂಟ್ಸ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ʼಇದಲ್ಲವೇ ನಿಜವಾದ ಪ್ರೀತಿ ಅಂದ್ರೆʼ ಎಂಬ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಗೂಳಿಗೆ ನಿಷ್ಠೆಗೆ ಬೆರಗಾಗಿದ್ದಾರೆ.

ಪ್ರಮುಖ ಸುದ್ದಿ :-   ಸರಕು ಹಡಗು -ತೈಲ ಟ್ಯಾಂಕರ್‌ ಹಡಗು ಡಿಕ್ಕಿ ; ಮತ್ತೆ ನಿಜವಾದ 'ಆಧುನಿಕ ನಾಸ್ಟ್ರಾಡಾಮಸ್' ಭವಿಷ್ಯವಾಣಿ : ಟ್ರಂಪ್‌ ಹತ್ಯೆ ಯತ್ನದ ಬಗ್ಗೆ ಹೇಳಿದ್ದ ಈತನಿಗಿದೆ ಭಾರತದ ನಂಟು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement