ಬಸ್ ಟಿಕೆಟ್ ದರ ಹೆಚ್ಚಳ ; ಇಂದಿನಿಂದಲೇ (ಜನವರಿ 5) ಜಾರಿ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಟಿಕೆಟ್‌ ದರದಲ್ಲಿ ಶೇ. 15ರಷ್ಟು ಏರಿಕೆ ಮಾಡಿದ್ದು, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು (ಜನವರಿ 5) ಮಧ್ಯರಾತ್ರಿಯಿಂದ ಶೇ 15ರಷ್ಟು ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿದೆ. ಈ ಮಧ್ಯೆ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಹಾಗೂ ಇತರ ಕೆಲ ನಗರಗಳಿಗೆ ವೇಗದೂತ ಸಾರಿಗೆ ಪ್ರಯಾಣ ದರಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟ ಮಾಡಿದೆ. ಇದರ ಪ್ರಕಾರ ಕೊಪ್ಪಳ ಹಾಗೂ ಬೀದರ್‌ ಜಿಲ್ಲೆಗೆ ಮಾತ್ರ ಶೇ. 14ರಷ್ಟು ಏರಿಕೆ ಮಾಡಿದ್ದರೆ, ಉಳಿದೆಲ್ಲಾ ಜಿಲ್ಲೆಗಳ ದರದಲ್ಲಿ ಶೇ. 15ರಷ್ಟು ದರ ಏರಿಕೆ ಮಾಡಿದೆ. ಟಿಕೆಟ್‌ ಏರಿಕೆ ಜನವರಿ‌ 5ರ ಮಧ್ಯರಾತ್ರಿ 12 ಗಂಟೆಯಿಂದಲೇ ನೂತರ ದರ ಜಾರಿಯಾಗಲಿದೆ.
ವೇಗದೂತ ಸಾರಿಗೆಗೆ ರಾಜ್ಯದಲ್ಲಿ ಟಿಕೆಟ್‌ ದರ 7 ರೂ.ಗಳಿಂದ 115 ರೂಪಾಯಿ ವರೆಗೆ ಹೆಚ್ಚಳವಾಗಿದೆ. ಬೀದರ್‌ ನಿಂದ ಬೆಂಗಳೂರಿಗೆ ಬರಬೇಕಾದರೆ 115 ರೂಪಾಯಿ ಹೆಚ್ಚಿಗೆ ನೀಡಬೇಕು. ಕಲಬುರಗಿಯಿಂದ ಬೆಂಗಳೂರಿಗೆ ಬರಬೇಕಾದರೆ 99 ರೂಪಾಯಿ ಹೆಚ್ಚು ನೀಡಬೇಕಿದೆ. ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಅತ್ಯಂತ ಕನಿಷ್ಠ ಕ್ರಮವಾಗಿ 7 ರೂ. ಹಾಗೂ ಹಾಗೂ 9 ರೂ. ಹೆಚ್ಚಿಗೆ ನೀಡಬೇಕಾಗುತ್ತದೆ. ಒ
ಕೆಎಸ್ಆರ್‌ಟಿಸಿಯಿಂದ ಪರಿಷ್ಕೃತ ದರದ ಪಟ್ಟಿ ಬಿಡುಗಡೆ

ಪ್ರಮುಖ ಸುದ್ದಿ :-   ರಾಜ್ಯದ ಜನತೆಗೆ `ಕರೆಂಟ್ʼ ಶಾಕ್’ : ಏಪ್ರಿಲ್ 1 ರಿಂದ ವಿದ್ಯುತ್ ದರ ಹೆಚ್ಚಳ...!

ಸಾರಿಗೆ ಬಸ್ಸುಗಳ ದರ ಪಟ್ಟಿ ಬಿಡುಗಡೆ

ಬೆಂಗಳೂರು-ಬೀದರ, ಹಿಂದಿನ ದರ- 775 , ಪರಿಷ್ಕೃತ ದರ-936 (115 ರೂಪಾಯಿ ಏರಿಕೆ)
ಬೆಂಗಳೂರು – ಕಲಬುರಗಿ, ಹಿಂದಿನ ದರ- 706, ಪರಿಷ್ಕೃತ ದರ- 805 ( 99 ರೂಪಾಯಿ ಏರಿಕೆ)
ಬೆಂಗಳೂರು- ಹಾವೇರಿ, ಹಿಂದಿನ ದರ 360 ರೂ.- ಪರಿಷ್ಕೃತ ದರ 474 ರೂ.(54 ರೂಪಾಯಿ ಏರಿಕೆ )
ಬೆಂಗಳೂರು-ಶಿವಮೊಗ್ಗ, ಹಿಂದಿನ ದರ- 288 ರೂ., ಪರಿಷ್ಕೃತ ದರ- 356 ರೂ. (44 ರೂಪಾಯಿ ಏರಿಕೆ )
ಬೆಂಗಳೂರು-ಮಂಗಳೂರು, ಹಿಂದಿನ ದರ – 367 ರೂ., ಪರಿಷ್ಕೃತ ದರ- 454 ರೂ.( 56 ರೂಪಾಯಿ ಏರಿಕೆ )
ಬೆಂಗಳೂರು-ಉಡುಪಿ, ಹಿಂದಿನ ದರ- 426 ರೂ., ಪರಿಷ್ಕೃತ ದರ 516 ರೂ. ( 64 ರೂಪಾಯಿ ಏರಿಕೆ )
ಬೆಂಗಳೂರು-ಬೆಳಗಾವಿ, ಹಿಂದಿನ ದರ – 530 ರೂ., ಪರಿಷ್ಕೃತ ದರ – 697 ರೂ. ( 80 ರೂಪಾಯಿ ಏರಿಕೆ )
ಬೆಂಗಳೂರು-ಹುಬ್ಬಳ್ಳಿ, ಹಿಂದಿನ ದರ- 426 ರೂ., ಪರಿಷ್ಕೃತ ದರ- 563 ರೂ. (64 ರೂಪಾಯಿ ಏರಿಕೆ )
ಬೆಂಗಳೂರು-ರಾಯಚೂರು, ಹಿಂದಿನ ದರ- 515 ರೂ., ಪರಿಷ್ಕೃತ ದರ- 638 ರೂ. ( 78 ರೂಪಾಯಿ ಏರಿಕೆ )
ಬೆಂಗಳೂರು-ಬಳ್ಳಾರಿ, ಹಿಂದಿನ ದರ 328 ರೂ., ಪರಿಷ್ಕೃತ ದರ- 424 ರೂ. ( 50 ರೂಪಾಯಿ ಏರಿಕೆ )
ಬೆಂಗಳೂರು-ಯಾದಗಿರಿ ಹಿಂದಿನ ದರ- 616 ರೂ., ಪರಿಷ್ಕೃತ ದರ 755 ರೂ. ( 93 ರೂಪಾಯಿ ಏರಿಕೆ )
ಬೆಂಗಳೂರು-ಶಿರಸಿ, ಹಿಂದಿನ ದರ-455 ರೂ., ಪರಿಷ್ಕೃತ ದರ-520 (65 ರೂ. ಏರಿಕೆ)
ಬೆಂಗಳೂರು-ಕಾರವಾರ, ಹಿಂದಿನ ದರ-614, ಪರಿಷ್ಕೃತ ದರ-699 ರೂ. (85 ರೂ.ಏರಿಕೆ)
ಬೆಂಗಳೂರು-ಗದಗ, ಹಿಂದಿನ ದರ,-525 ರೂ., ಪರಿಷ್ಕೃತ ದರ-593 ರೂ. (68 ರೂ.ಏರಿಕೆ)
ಬೆಂಗಳೂರು-ಹಾವೇರಿ, ಹಿಂದಿನ ದರ-420, ಪರಿಷ್ಕೃತ ದರ-474 (54 ರೂ.ಏರಿಕೆ)

ಪ್ರಮುಖ ಸುದ್ದಿ :-   48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement