ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತಾಲೂಕಿನ ನೀರ್ನಳ್ಳಿಯ ಮನೆಯೊಂದರ ಅಂಗಳಕ್ಕೇ ರಾತ್ರಿ ಸಮಯದಲ್ಲಿ ಚಿರತೆ ಬಂದಿದೆ ಎಂದು ವರದಿಯಾಗಿದೆ.
ಚಿರತೆಯ ಮನೆ ಅಂಗಳಿಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸುಮಾರು 12:30ರ ಸುಮಾರಿಗೆ ನೀರ್ನಳ್ಳಿಯ ರಾಮಚಂದ್ರ ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಚಿರತೆ ಬಂದಿದೆ ಎಂದು ವರದಿಯಾಗಿದೆ. ಆಕಡೆ ಈಕಡೆ ನೋಡುತ್ತ ಸಪ್ಪಳವಾಗದಂತೆ ಬೆಕ್ಕಿನಂತೆ ನಿಧಾನವಾಗಿ ಹೆಜ್ಜೆ ಇಡುತ್ತ ಚಿರತೆ ಕಂಪೌಂಡ್ ಒಳಕ್ಕೆ ಬಂದಿದೆ. ಮನೆಯ ಒಳಗಿದ್ದ ನಾಯಿ ಹಿಡಿಯಲು ಚಿರತೆ ಬಂದಿದೆ.
ಚಿರತೆಯನ್ನು ನೋಡಿದ ನಾಯಿ ಒಮ್ಮೆಗೇ ಜೋರಾಗಿ ಬೊಗಳಿದ್ದಕ್ಕೆ ಕಕ್ಕಾಬಿಕ್ಕಿಯಾದ ಚಿರತೆ ಅಲ್ಲಿಂದ ಕಾಲ್ಕಿತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮನೆಯವರು ಸಿಸಿ ಟಿವಿ ಕ್ಯಾಮರಕ್ಕೆ ಸೆನ್ಸಾರ್ ಸಹ ಅಳವಡಿಸಿದ್ದರಿಂದ ಮನೆಯ ಲೈಟ್ ಆನ್ ಆಗಿದೆ. ಇದನ್ನು ಗಮನಿಸಿದ ಮನೆಯವರು ಸಿಸಿ ಕ್ಯಾಮರಾ ನೋಡಿದಾಗ ಅವರಿಗೆ ಮನೆಯಂಗಕ್ಕೆ ಚಿರತೆ ಬಂದಿರುವುದು ಗೊತ್ತಾಗಿದೆ. ನಂತರ ಅವರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ