ಶರೋನ್ ರಾಜ್ ಹತ್ಯೆ ಪ್ರಕರಣ: ಪ್ರೇಯಸಿಗೆ ಮರಣದಂಡನೆ ಶಿಕ್ಷೆ ನೀಡಿದ ಕೋರ್ಟ್‌

ತಿರುವನಂತಪುರಂ : 2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್‌ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ ಆರೋಪದ ಮೇಲೆ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರದ 24 ವರ್ಷದ ಮಹಿಳೆಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ವಾದ ವಿವಾದ ಆಲಿಸಿದ ನಂತರ ನ್ಯಾಯಾಧೀಶರಾದ ಎ.ಎಂ. ಬಶೀರ್ ಅವರು ತೀರ್ಪು ನೀಡಿ, ಇದು ಅಪರೂಪದ ಪ್ರಕರಣ, ಇದು ಪೂರ್ವನಿಯೋಜಿತವಾಗಿ ನಡೆಸಿದ ಅಪರಾಧ ಕೃತ್ಯ ಎಂದು ತೀರ್ಮಾನಿಸಿದರು. ಆರೋಪಿಯು ಆಕೆಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಕಾರಣದಿಂದಾಗಿ ಯಾವುದೇ ವಿನಾಯ್ತಿಗೆ ಅರ್ಹಳಲ್ಲ. ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂಬುದು ಕಂಡುಬರುತ್ತಿದೆ ಎಂದರು.
ಕೊಲೆ, ಅಪಹರಣ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಹೊರಿಸಲಾದ ಎಲ್ಲಾ ಆರೋಪಗಳಲ್ಲಿ ಗ್ರೀಷ್ಮಾ ತಪ್ಪಿತಸ್ಥನೆಂದು ನ್ಯಾಯಾಲಯವು ಈ ಹಿಂದೆ ಘೋಷಿಸಿತ್ತು. ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

23 ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್, ಅಕ್ಟೋಬರ್ 14, 2022 ರಂದು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆತನ ಗೆಳತಿ ಗ್ರೀಷ್ಮಾ ಮಾರಕ ಮಿಶ್ರಣ ನೀಡಿದ ನಂತರ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ಯಾರಾಕ್ವಾಟ್ ಡೈಕ್ಲೋರೈಡ್ ನ್ನು ಆಯುರ್ವೇದ ಔಷಧದೊಂದಿಗೆ ಬೆರೆಸಿದ ವಿಷವನ್ನು ಸೇವಿಸಿದ ನಂತರ ಶರೋನ್ ನ ಯಕೃತ್ತು, ಮೂತ್ರಪಿಂಡ ಮತ್ತು ಶ್ವಾಸಕೋಶಗಳಿಗೆ ತೀವ್ರ ಹಾನಿಯಾಗಿತ್ತು. ಈ ಕುರಿತು ದೂರು ದಾಖಲಾಗಿತ್ತು.
ಪೊಲೀಸರು ತೀವ್ರ ತನಿಖೆ ನಡೆಸಿದಾಗ ನಾಗರಕೋಯಿಲ್‌ನ ಸೇನಾಧಿಕಾರಿಯನ್ನು ಮದುವೆಯಾಗುವ ಆಸೆಯಿಂದ ಗ್ರೀಷ್ಮಾ ಶರೋನ್‌ ಈ ರೀತಿ ಮಾಡಿದ್ದರು. ಶರೋನ್ ಮತ್ತು ಗ್ರೀಷ್ಮಾ ಮಧ್ಯೆ 2021ರಲ್ಲಿ ಪ್ರೀತಿ ಚಿಗುರೊಡೆದಿತ್ತು. ಅದಾಗಿ ಒಂದು ವರ್ಷದ ನಂತರ ಗ್ರೀಷ್ಮಾ ಸೇನಾಧಿಕಾರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಶರೋನ್ ಜೊತೆಗಿನ ಸಂಬಂಧವನ್ನು ಮುರಿಯಲು ಬಯಸಿದ್ದರು. ತನ್ನೊಂದಿಗೆ ಸಂಬಂಧ ಮುರಿದುಕೊಳ್ಳುವಂತೆ ಶರೋನ್ ನನ್ನು ಒತ್ತಾಯಿಸಿದ್ದಳು.

ಆದರೆ ಅದಕ್ಕೆ ಶರೋನ್ ಒಪ್ಪಿರಲಿಲ್ಲ. ಅಂತಿಮವಾಗಿ ಗ್ರೀಷ್ಮಾ ಆಗಸ್ಟ್ 2022 ರಲ್ಲಿ ‘ಜ್ಯೂಸ್ ಚಾಲೆಂಜ್’ ಎಂಬ ಆಟವಾಡುವ ನೆಪದಲ್ಲಿ ಶರೋನ್ ಅವರನ್ನು ಕೊಲ್ಲಲು ಪ್ರಯತ್ನಿಸಿದಳು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ವಿ ಎಸ್ ವಿನೀತಕುಮಾತ ನ್ಯಾಯಾಲಯದ ಮುಂದೆ ವಾದಿಸಿದ್ದರು. ಹಣ್ಣಿನ ಜ್ಯೂಸ್ ಗೆ 50 ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ಶರೋನ್‌ಗೆ ನೀಡಿದ್ದಳು. ಶರೋನ್ ಜ್ಯೂಸ್ ಕುಡಿದಾಗ ಕಹಿ ರುಚಿಯಿಂದಾಗಿ ಉಗುಳಿದನು. ಆಗ ನಡೆಸಿದ್ದ ಸಂಚು ಫಲ ಕೊಟ್ಟಿರಲಿಲ್ಲ.
ಅದಾಗಿ ಎರಡು ತಿಂಗಳ ನಂತರ, ಅಕ್ಟೋಬರ್‌ 2022ರಲ್ಲಿ ಗ್ರೀಷ್ಮಾ ಶರೋನ್ ಅವರನ್ನು ತನ್ನ ನಿವಾಸಕ್ಕೆ ಕರೆದೊಯ್ದು ವಿಷಕಾರಿ ಕಷಾಯವನ್ನು ಕುಡಿಯಲು ಕೊಟ್ಟಳು. ಶರೋನ್ ಅದನ್ನು ಸೇವಿಸಿದ ತಕ್ಷಣ ವಾಂತಿ ಮಾಡಲಾರಂಭಿಸಿದ್ದರು. ಮನೆಗೆ ವಾಪಾಸ್ ಬರುವಾಗಲು ವಾಂತಿಯಾಗಿತ್ತು. ಈ ಘಟನೆ ನಡೆಯುವಾಗ ಶರೋನ್ ಸ್ನೇಹಿತ ರೆಜಿ ಅಲ್ಲಿದ್ದರು, ಅವರನ್ನು ಸಾಕ್ಷಿಗಳಲ್ಲಿ ಒಬ್ಬನನ್ನಾಗಿ ಪೊಲೀಸರು ಹಾಜರುಪಡಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement