ವೀಡಿಯೊ…| ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ…

ಬಿಜೆಪಿ ಸಂಸದ ಎಟೆಲಾ ರಾಜೇಂದರ ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಪೋಚಾರಂನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಪ್ರದೇಶದಲ್ಲಿ ಬಡವರ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್‌ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ.
ಸ್ಥಳೀಯರು ಸಂಸದರ ಬಳಿ ತಮಗಾದ ಸಂಕಷ್ಟವನ್ನು ವಿವರಿಸಿದ ಬಳಿಕ ಈ ಘಟನೆ ನಡೆದಿದೆ. ಪೋಚಾರಂ ಪ್ರದೇಶದಲ್ಲಿ ಬಡ ಸ್ಥಳೀಯರಿಗೆ ಸೇರಿದ ಭೂಮಿಯನ್ನು ಬ್ರೋಕರ್ ಅಕ್ರಮವಾಗಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಬಂದ ನಂತರ, ರಾಜೇಂದರ ರಿಯಲ್ ಎಸ್ಟೇಟ್ ಏಜೆಂಟ್ ಅನ್ನು ಭೇಟಿಯಾದರು.

ವರದಿಗಳ ಪ್ರಕಾರ, ಭೂ ಒತ್ತುವರಿ ಮಾಡಲಾಗಿದೆ ಎಂದು ದೂರುಗಳನ್ನು ಸ್ವೀಕರಿಸಿದ ನಂತರ, ಬಿಜೆಪಿ ಸಂಸದರು ಮೇಡ್ಚಲ್ ಜಿಲ್ಲೆಯ ಪೋಚಾರಂ ಪುರಸಭೆಯ ಏಕಶಿಲಾ ನಗರಕ್ಕೆ ಭೇಟಿ ನೀಡಿದ್ದರು. ಬಡವರ ಜಮೀನನ್ನು ರಿಯಲ್ ಎಸ್ಟೇಟ್ ದಲ್ಲಾಳಿಗಳು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಕೋಪದಲ್ಲಿ ದಲ್ಲಾಳಿಯೊಬ್ಬನ ಕೆನ್ನೆ ಬಾರಿಸಿದ್ದಾರೆ. ಸಂಸದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ನಂತರ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ವ್ಯಕ್ತಿಗೆ ಥಳಿಸಿದ್ದಾರೆ.
ದಲ್ಲಾಳಿ ದಾಖಲೆಗಳನ್ನು ತಿದ್ದಿದ್ದಾರೆ, ಸ್ಥಳೀಯರನ್ನು ಬೆದರಿಸಲು ಗೂಂಡಾಗಳನ್ನು ಕರೆತಂದಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ವರ್ಷಗಳಿಂದ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಈ ಬಗ್ಗೆ ಸ್ಥಳೀಯರು ಮನವಿ ಮಾಡಿಕೊಂಡ ನಂತರ ರಾಜೇಂದರ ಅವರು ಈ ಬಗ್ಗೆ ಸಾರ್ವಜನಿಕ ಸಭೆ ನಡೆಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು. ಅವರು ಸ್ಥಳಕ್ಕೆ ಆಗಮನದ ನಂತರ, ಆ ಪ್ರದೇಶದಲ್ಲಿ ಬ್ರೋಕರ್ ಮತ್ತು ಆತನ ಸಹಚರರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಥಳೀಯರು ದೂರಿದರು. ಸ್ಥಳೀಯರಿಗೆ ಬ್ರೋಕರ್ ಬೆದರಿಕೆ ಹಾಕಿದ್ದರಿಂದ ಕೋಪಗೊಂಡ ರಾಜೇಂದರ ಆತನೊಂದಿಗೆ ತೀವ್ರ ವಾಗ್ವಾದ ನಡೆಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಕೋಪದಲ್ಲಿ ರಾಜೇಂದರ ಅವರು ಬ್ರೋಕರ್‌ಗೆ ಕಪಾಳಮೋಕ್ಷ ಮಾಡಿದರು, ಕಾನೂನು ವಿಫಲವಾದಾಗಲೆಲ್ಲಾ ಮಧ್ಯಪ್ರವೇಶಿಸುವುದು ಅವರ ಕರ್ತವ್ಯ ಎಂದು ಹೇಳಿದರು.
ವಿಫಲವಾಗುತ್ತದೋ ಅಲ್ಲಿ ನಾನಿರಬೇಕು,” ಎಂದರು.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement