ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣುತ್ತದೆ..? ಫೊಟೋ ಬಿಡುಗಡೆ ಮಾಡಿದ ಇಸ್ರೋ

ಪ್ರಯಾಗರಾಜ್: ಭಾರತದ ಬಾಹ್ಯಾಕಾಶ ಸಂಸ್ಥೆ (ISRO), ಭಾರತೀಯ ಉಪಗ್ರಹಗಳನ್ನು ಬಳಸಿ, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಏಕೈಕ ದೊಡ್ಡ ಧಾರ್ಮಿಕ ಮೇಳದ ಚಿತ್ರಗಳನ್ನು ಬೀಮ್ ಮಾಡಿದೆ.
ಇಸ್ರೋ (ISRO)ದ ಚಿತ್ರಗಳು ಮೇಳದಲ್ಲಿ ಮಾಡಿದ ಬೃಹತ್ ಮೂಲಸೌಕರ್ಯವನ್ನು ತೋರಿಸುತ್ತವೆ, ಕುಂಭಮೇಳದ 45 ದಿನಗಳ ಅವಧಿಯಲ್ಲಿ ಸುಮಾರು 40 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಭಾರತದ ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳು ಮತ್ತು ಹಗಲು ರಾತ್ರಿ ನೋಡುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್ ಅನ್ನು ಬಳಸಿಕೊಂಡು, ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಮಹಾಕುಂಭಮೇಳದಲ್ಲಿನ ಬೃಹತ್ ಮೂಲಸೌಕರ್ಯಗಳ ರಚನೆಯನ್ನು ತೋರಿಸುವ ಚಿತ್ರಗಳನ್ನು ಸೆರೆ ಹಿಡಿದಿದೆ.
ಮೇಳದಲ್ಲಿ ಅನಾಹುತಗಳು ಮತ್ತು ಕಾಲ್ತುಳಿತಗಳನ್ನು ತಗ್ಗಿಸಲು ಉತ್ತರ ಪ್ರದೇಶದ ಆಡಳಿತವು ಈ ಚಿತ್ರಗಳನ್ನು ಬಳಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್, ಪ್ರಯಾಗ್‌ರಾಜ್ (Prayagraj) ಮೇಲೆ ಆವರಿಸಿರುವ ಕ್ಲೌಡ್ ಬ್ಯಾಂಡ್ ಮೂಲಕ ಪ್ರದೇಶವನ್ನು ಚಿತ್ರಿಸಲು ಸಾಧ್ಯವಾಗುವಂತೆ ರಾಡಾರ್‌ಸ್ಯಾಟ್‌ನ್ನು ಬಳಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 6, 2024 ರಂದು ಮಹಾಕುಂಭ ಪ್ರಾರಂಭವಾಗುವ ಮೊದಲು ತೆಗೆದ ಈ ಸಮಯದ ಸರಣಿಯ ಫೋಟೋಗಳಲ್ಲಿ ಪ್ರಯಾಗರಾಜ್ ಪರೇಡ್ ಮೈದಾನವನ್ನು ನೋಡಬಹುದು, ನಂತರ ಡಿಸೆಂಬರ್ 22, 2024 ರಂದು ತೆಗೆಯಲಾಗಿದೆ. ಜನವರಿ 10, 2025 ರಂದು ತೆಗೆದ ಫೋಟವು ಜನಸ್ತೋಮವು ಜನ ಸೇರುವುದನ್ನು ತೋರಿಸುತ್ತದೆ.
ಈ ಬಾರಿ ಉಪಗ್ರಹ ತೆಗೆದ ಚಿತ್ರಗಳಲ್ಲಿ ಹೊಸ ಶಿವಾಲಯ, ಉದ್ಯಾನವನ ಸೆರೆಯಾಗಿದೆ. ಇನ್ನೂ 2024ರ ಏ.6ರ ಚಿತ್ರವು ಸ್ಪಷ್ಟವಾದ ಮೈದಾನವನ್ನು ತೋರಿಸುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ತೆಗೆದ ಚಿತ್ರದಲ್ಲಿ ಮಹಾ ಕುಂಭಮೇಳದ ಸಿದ್ಧತೆಗಳನ್ನು ನೋಡಬಹುದಾಗಿದೆ.
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಆಚರಿಸಲಾಗುವ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳಕ್ಕಾಗಿ ಉತ್ತರ ಪ್ರದೇಶದಲ್ಲಿ ಹೊಸ ಜಿಲ್ಲೆ ಮಹಾಕುಂಭ ನಗರವನ್ನು ನಿರ್ಮಿಸಲಾಗಿದೆ.
ಈ ವರ್ಷ, ಮಹಾ ಕುಂಭಮೇಳಕ್ಕೆ ಭೇಟಿ ನೀಡುವವರಿಗೆ ನೆಲೆಸಲು ಸುಮಾರು 1,50,000 ಟೆಂಟ್‌ಗಳನ್ನು ನಿರ್ಮಿಸಲಾಗಿದೆ ಮತ್ತು 3,000 ಅಡುಗೆ ಮನೆಗಳು, 1,45,000 ವಿಶ್ರಾಂತಿ ಕೊಠಡಿಗಳು ಮತ್ತು 99 ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.

ಪ್ರಮುಖ ಸುದ್ದಿ :-   ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಸ್ಪತ್ರೆಗೆ ದಾಖಲು

ಮಹಾ ಕುಂಭಮೇಳ 2025
ಕುಂಭಮೇಳವನ್ನು 12 ವರ್ಷಗಳಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ ಮತ್ತು ಭಾರತದಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ರೊಟೇಟ್‌ ಆಗುತ್ತದೆ. ಹರಿದ್ವಾರ (ಉತ್ತರಾಖಂಡ) ಗಂಗಾ ತೀರದಲ್ಲಿ, ಉಜ್ಜಯಿನಿ (ಮಧ್ಯಪ್ರದೇಶ) ಶಿಪ್ರಾದ ಉದ್ದಕ್ಕೂ, ನಾಸಿಕ್ (ಮಹಾರಾಷ್ಟ್ರ) ಗೋದಾವರಿ ಮತ್ತು ಪ್ರಯಾಗ್ರಾಜ್ ಸಂಗಮದಲ್ಲಿ. ಗಂಗಾ, ಯಮುನಾ ಮತ್ತು ಸರಸ್ವತಿ.
ಮಹಾಕುಂಭ ಮೇಳವು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಯಾತ್ರಿಕರು ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಅಮೃತ ಸ್ನಾನ ಎಂದು ಕರೆಯಲ್ಪಡುವ ಈ ಪವಿತ್ರ ಸ್ನಾನ ಭಕ್ತರ ಆತ್ಮವನ್ನು ಶುದ್ಧೀಕರಿಸುತ್ತದೆ. ಅವರ ಪಾಪಗಳನ್ನು ತೊಳೆಯುತ್ತವೆ ಎಂದು ನಂಬಲಾಗಿದೆ. ಮಹಾಕುಂಭ ಮೇಳವು ಪ್ರಯಾಗರಾಜ್‌ನಲ್ಲಿ ಜನವರಿ 13 ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement