ಪಂಜಾಬ್‌ನ ಖನ್ನಾದ ನೈ ಅಬಾದಿಯಲ್ಲಿ ಬುಧವಾರ ಬೀದಿ ನಾಯಿಗಳು ವೃದ್ಧ ಮಹಿಳೆಯ ಮೇಲೆ ದಾಳಿ ಮಾಡುತ್ತಿರುವ ಆಘಾತಕಾರಿ ವೀಡಿಯೊ ಹೊರಬಿದ್ದಿದೆ. ಮನೆಕೆಲಸದವಳಾಗಿರುವ ವೃದ್ಧೆ ಮನೆಯ ಗೇಟ್ ಕಡೆಗೆ ನುಗ್ಗಿ ಪಾರಾಗಲು ಪ್ರಯತ್ನಿಸಿದರೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಒಂದು ಬೀದಿ ನಾಯಿ ವೃಧೆಯ ಬಟೆಯನ್ನು ಹಿಡಿದೆಳೆದು ಅವಳು ಕೆಳಗೆ ಬೀಳುವಂತೆ ಮಾಡಿತು. ಇತರ ನಾಯಿಗಳು ಬೇಗನೆ ವೃದಧೆಯನ್ನು ಸುತ್ತುವರಿದವು. ಅವಳು ಅಸಹಾಯಕಳಾಗಿ ಬಿದ್ದಿದ್ದಾಗ ನಾಯಿಗಳ ಅವಳ ಮೇಲೆರಗಿ ಕೈ ಮತ್ತು ಮುಖವನ್ನು ಕಚ್ಚಿವೆ.
ಅದೃಷ್ಟವಶಾತ್, ಇನ್ನೊಬ್ಬ ಮಹಿಳೆ ನಾಯಿಗಳ ಮೇಲೆ ವಸ್ತುಗಳನ್ನು ಎಸೆಯುವ ಮೂಲಕ ನಾಯಿಯನ್ನು ಓಡಿಸಿದ್ದಾಳೆ. ಜೊತೆಗೆ ಆಕೆ ದೊಣ್ಣೆ ಹಿಡಿದು ನಾಯಿಗಳನ್ನು ಹೆದರಸಿದ್ದಾಳೆ. ನಂತರ ನಾಯಿಗಳು ಅಲ್ಲಿಂದ ಓಡಿಹೋದವು.
ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದರು, ಮತ್ತು ಗಾಯಗೊಂಡ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಯ ಪ್ರಕಾರ, ಆಕೆಯ ಗಾಯಗಳಿಗೆ ಚಿಕಿತ್ಸೆ ನೀಡಲು ಆಕೆಗೆ ಸರಿಸುಮಾರು 40 ಹೊಲಿಗೆಗಳನ್ನು ಹಾಕಲಾಯಿತು.
ಈ ಘಟನೆಯಂತೆ ಪಂಜಾಬ್‌ನಲ್ಲಿ ಇತ್ತೀಚೆಗೆ ಕೆಲವು ಪ್ರಕರಣಗಳು ವರದಿಯಾಗಿವೆ. ಬೆಳಗಿನ ವಾಕ್ ಮಾಡುವಾಗ ಬೀದಿನಾಯಿಗಳು ಮಹಿಳೆಯೊಬ್ಬರನ್ನು ಕಚ್ಚಿ ಕೆಳಗೆ ಬೀಳಿಸಿದ್ದವು. ಮತ್ತೊಂದು ಘಟನೆಯಲ್ಲಿ, ಜಿಲ್ಲೆಯ ಕೋಸಿ ಕಲಾನ್ ಪಟ್ಟಣದಲ್ಲಿ ಬುಧವಾರ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಬೀದಿನಾಯಿಗಳು ಕಚ್ಚಿ ಕೊಂದಿವೆ.
ಕುಟುಂಬಸ್ಥರು ಗಾಯಗೊಂಡ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆತನ ಗಾಯಗಳ ತೀವ್ರತೆ ನೋಡಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ