ವಾಸುದೇವನ್‌ ನಾಯರ್‌, ಸುಶೀಲಕುಮಾರ ಮೋದಿ, ಸಿನೆಮಾ ನಟ ಅನಂತ ನಾಗ್‌, ಕ್ರಿಕೆಟರ್‌ ಅಶ್ವಿನ್‌ ಸೇರಿ 139 ಸಾಧಕರಿಗೆ ಪದ್ಮ ಪ್ರಶಸ್ತಿಗಳು ಪ್ರಕಟ; ಪೂರ್ಣಪಟ್ಟಿ…

ನವದೆಹಲಿ: ಗವದೆಹಲಿ: ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ 137 ವ್ಯಕ್ತಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಾಗಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ಏಳು ಮಂದಿಗೆ ಪದ್ಮವಿಭೂಷಣ ಹಾಗೂ 19 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
. ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ, ಇದನ್ನು ವಾರ್ಷಿಕವಾಗಿ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ.
ಕನ್ನಡದ ಖ್ಯಾತ ಸಿನೆಮಾ ನಟ ಅನಂತ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಹಾಗೂ ಕರ್ನಾಟಕದ ಜಾನಪಾದ ಗಾಯಕ ವೆಂಕಪ್ಪ ಅಂಬಾಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ವೈದ್ಯಕೀಯ, ಸಾಮಾಜಿಕ ಕಾರ್ಯ, ಸಂಗೀತ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳಿಗಾಗಿ ಕ್ರಮವಾಗಿ ಡಾ. ನೀರಜಾ ಭಟ್ಲಾ, ಭೀಮ್ ಸಿಂಗ್ ಭವೇಶ್, ಪಿ. ದಚ್ಚನಮೂರ್ತಿ ಮತ್ತು ಎಲ್ ಹ್ಯಾಂಗ್ಥಿಂಗ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ತೆರೆಮರೆಯ 30 ಸಾಧಕರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಸಾರ್ವಜನಿಕ ಸೇವೆಯ ಅಂಶವನ್ನು ಒಳಗೊಂಡಿರುವ ಚಟುವಟಿಕೆ ಅಥವಾ ವಿಭಾಗಗಳ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಲು ಪ್ರಶಸ್ತಿ ನೀಡಲಾಗುತ್ತದೆ.. ಪದ್ಮ ಪ್ರಶಸ್ತಿಗಳನ್ನು ಪ್ರತಿ ವರ್ಷ ಪ್ರಧಾನ ಮಂತ್ರಿಗಳು ರಚಿಸುವ ಪದ್ಮ ಪ್ರಶಸ್ತಿ ಸಮಿತಿಯ ಶಿಫಾರಸುಗಳ ಮೇಲೆ ನೀಡಲಾಗುತ್ತದೆ.

ಪದ್ಮ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
ಪದ್ಮವಿಭೂಷಣ
ದುವ್ವೂರು ನಾಗೇಶ್ವರ ರೆಡ್ಡಿ – ಔಷಧ
ನ್ಯಾಯಮೂರ್ತಿ (ನಿವೃತ್ತ) ಜಗದೀಶ ಸಿಂಗ್ ಖೇಹರ್ – ಸಾರ್ವಜನಿಕ ವ್ಯವಹಾರಗಳು
ಕುಮುದಿನಿ ರಜನಿಕಾಂತ ಲಖಿಯಾ – ಕಲೆ
ಲಕ್ಷ್ಮೀನಾರಾಯಣ ಸುಬ್ರಮಣ್ಯಂ -ಸಂಗೀತ
ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) – ಸಾಹಿತ್ಯ ಮತ್ತು ಶಿಕ್ಷಣ
ಒಸಾಮು ಸುಜುಕಿ (ಮರಣೋತ್ತರ) – ವ್ಯಾಪಾರ ಮತ್ತು ಕೈಗಾರಿಕೆ
ಶಾರದಾ ಸಿನ್ಹಾ (ಮರಣೋತ್ತರ) – ಕಲೆ
ಪದ್ಮಭೂಷಣ
ಎ ಸೂರ್ಯ ಪ್ರಕಾಶ – ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ
ಅನಂತ ನಾಗ್ – ಕಲೆ (ಸಿನೆಮಾ)
ಬಿಬೇಕ ದೆಬ್ರಾಯ್ (ಮರಣೋತ್ತರ) – ಸಾಹಿತ್ಯ ಮತ್ತು ಶಿಕ್ಷಣ
ಜತಿನ್ ಗೋಸ್ವಾಮಿ – ಕಲೆ
ಜೋಸ್ ಚಾಕೊ ಪೆರಿಯಪ್ಪುರಂ – ಔಷಧ
ಕೈಲಾಶನಾಥ ದೀಕ್ಷಿತ್ – ಇತರರು – ಪುರಾತತ್ತ್ವ ಶಾಸ್ತ್ರ
ಮನೋಹರ ಜೋಶಿ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ನಳ್ಳಿ ಕುಪ್ಪುಸ್ವಾಮಿ ಚೆಟ್ಟಿ – ವ್ಯಾಪಾರ ಮತ್ತು ಕೈಗಾರಿಕೆ
ನಂದಮೂರಿ ಬಾಲಕೃಷ್ಣ – ಕಲೆ (ಸಿನೆಮಾ)
ಪಿಆರ್ ಶ್ರೀಜೇಶ – ಕ್ರೀಡೆ
ಪಂಕಜ ಪಟೇಲ್ – ವ್ಯಾಪಾರ ಮತ್ತು ಕೈಗಾರಿಕೆ
ಪಂಕಜ್ ಉದಾಸ್ (ಮರಣೋತ್ತರ) – ಕಲೆ (ಗಜಲ್‌)
ರಾಮಬಹದ್ದೂರ್ ರೈ – ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ
ಸಾಧ್ವಿ ಋತಂಭರಾ – ಸಮಾಜಕಾರ್ಯ
ಎಸ್ ಅಜಿತಕುಮಾರ – ಕಲೆ (ಸಿನೆಮಾ)
ಶೇಖರ್ ಕಪೂರ್ – ಕಲೆ (ಸಿನೆಮಾ)
ಶೋಬನಾ ಚಂದ್ರಕುಮಾರ – ಕಲೆ (ಸಿನೆಮಾ, ಭರತ ನಾಟ್ಯ)
ಸುಶೀಲಕುಮಾರ ಮೋದಿ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ವಿನೋದ ಧಾಮ್ – ವಿಜ್ಞಾನ ಮತ್ತು ಎಂಜಿನಿಯರಿಂಗ್

ಪದ್ಮಶ್ರೀ
ಅದ್ವೈತ ಚರಣ ಗಡನಾಯಕ್ – ಕಲೆ
ಅಚ್ಯುತ್ ರಾಮಚಂದ್ರ ಪಲಾವ್ – ಕಲೆ
ಅಜಯ ವಿ ಭಟ್ – ವಿಜ್ಞಾನ ಮತ್ತು ಎಂಜಿನಿಯರಿಂಗ್
ಅನಿಲಕುಮಾರ ಬೋರೋ – ಸಾಹಿತ್ಯ ಮತ್ತು ಶಿಕ್ಷಣ
ಅರಿಜಿತ್ ಸಿಂಗ್ – ಕಲೆ (ಹಿನ್ನೆಲೆ ಗಾಯನ)
ಅರುಂಧತಿ ಭಟ್ಟಾಚಾರ್ಯ – ವ್ಯಾಪಾರ ಮತ್ತು ಕೈಗಾರಿಕೆ
ಅರುಣೋದಯ ಸಹಾ – ಸಾಹಿತ್ಯ ಮತ್ತು ಶಿಕ್ಷಣ
ಅರವಿಂದ ಶರ್ಮಾ – ಸಾಹಿತ್ಯ ಮತ್ತು ಶಿಕ್ಷಣ
ಅಶೋಕಕುಮಾರ ಮಹಾಪಾತ್ರ – ಔಷಧ
ಅಶೋಕ ಲಕ್ಷ್ಮಣ ಸರಾಫ್ – ಕಲೆ
ಅಶುತೋಷ್ ಶರ್ಮಾ – ವಿಜ್ಞಾನ ಮತ್ತು ಎಂಜಿನಿಯರಿಂಗ್
ಅಶ್ವಿನಿ ಭಿಡೆ ದೇಶಪಾಂಡೆ – ಕಲೆ (ಹಿಂದೂಸ್ಥಾನೀ ಗಾಯನ)
ಬೈಜನಾಥ ಮಹಾರಾಜ – ಇತರರು – ಆಧ್ಯಾತ್ಮಿಕತೆ
ಬ್ಯಾರಿ ಗಾಡ್ಫ್ರೇ ಜಾನ್ – ಕಲೆ
ಬೇಗಂ ಬಟೂಲ್ – ಕಲೆ
ಭರತ ಗುಪ್ತ – ಕಲೆ
ಭೇರು ಸಿಂಗ್ ಚೌಹಾಣ – ಕಲೆ
ಭೀಮ್ ಸಿಂಗ್ ಭಾವೇಶ್ – ಸಮಾಜಕಾರ್ಯ
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ – ಕಲೆ
ಬುಧೇಂದ್ರಕುಮಾರ ಜೈನ್ – ಔಷಧ
ಸಿ ಎಸ್ ವೈದ್ಯನಾಥನ್ – ಸಾರ್ವಜನಿಕ ವ್ಯವಹಾರಗಳು
ಚೈತ್ರಂ ದೇವಚಂದ ಪವಾರ್ – ಸಮಾಜಕಾರ್ಯ
ಚಂದ್ರಕಾಂತ ಶೇಠ್ (ಮರಣೋತ್ತರ) – ಸಾಹಿತ್ಯ ಮತ್ತು ಶಿಕ್ಷಣ
ಚಂದ್ರಕಾಂತ ಸೋಂಪುರ – ಇತರರು – ವಾಸ್ತುಶಿಲ್ಪ
ಚೇತನ ಇ ಚಿಟ್ನಿಸ್ – ವಿಜ್ಞಾನ ಮತ್ತು ಎಂಜಿನಿಯರಿಂಗ್
ಡೇವಿಡ್ ಆರ್ ಸೈಮ್ಲೀಹ್ – ಸಾಹಿತ್ಯ ಮತ್ತು ಶಿಕ್ಷಣ
ದುರ್ಗಾಚರಣ ರಣಬೀರ್ – ಕಲೆ
ಫಾರೂಕ್ ಅಹ್ಮದ್ ಮಿರ್ – ಕಲೆ
ಗಣೇಶ್ವರ ಶಾಸ್ತ್ರಿ ದ್ರಾವಿಡ್ – ಸಾಹಿತ್ಯ ಮತ್ತು ಶಿಕ್ಷಣ
ಗೀತಾ ಉಪಾಧ್ಯಾಯ – ಸಾಹಿತ್ಯ ಮತ್ತು ಶಿಕ್ಷಣ
ಗೋಕುಲಚಂದ್ರ ದಾಸ್ – ಕಲೆ
ಗುರುವಾಯೂರ್ ದೊರೈ – ಕಲೆ
ಹರಚಂದನ್ ಸಿಂಗ್ ಭಟ್ಟಿ – ಕಲೆ
ಹರಿಮಾನ ಶರ್ಮಾ ಇತರರು – ಕೃಷಿ
ಹರ್ಜಿಂದರ ಸಿಂಗ್ ಶ್ರೀನಗರವಾಲೆ – ಕಲೆ
ಹರ್ವಿಂದರ ಸಿಂಗ್ – ಕ್ರೀಡೆ
ಹಾಸನ ರಘು – ಕಲೆ (ಸಾಹಸ)
ಹೇಮಂತಕುಮಾರ – ಔಷಧ
ಹೃದಯ ನಾರಾಯಣ ದೀಕ್ಷಿತ್ – ಸಾಹಿತ್ಯ ಮತ್ತು ಶಿಕ್ಷಣ
ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ (ಮರಣೋತ್ತರ) (ದ್ವಯ)* – ಸಾಹಿತ್ಯ ಮತ್ತು ಶಿಕ್ಷಣ
ಇನಿವಾಳಪ್ಪಿಲ್ ಮಣಿ ವಿಜಯನ್ – ಕ್ರೀಡೆ (ಫುಟ್ಬಾಲ್‌)
ಜಗದೀಶ ಜೋಶಿಲ – ಸಾಹಿತ್ಯ ಮತ್ತು ಶಿಕ್ಷಣ
ಜಸ್ಪಿಂದರ್ ನರುಲಾ -ಆರ್ಟ್ ಮಹಾರಾಷ್ಟ್ರ
ಜೋನಸ್ ಮಾಸೆಟ್ಟಿ – ಇತರರು – ಆಧ್ಯಾತ್ಮಿಕತೆ
ಜೋಯ್ನಾಚರಣ ಬತಾರಿ – ಕಲೆ
ಜುಮ್ಡೆ ಯೊಮ್ಗಮ್ ಗ್ಯಾಮ್ಲಿನ್ – ಸಮಾಜಕಾರ್ಯ
ಕೆ. ದಾಮೋದರನ್ ಇತರರು – ಪಾಕಶಾಲೆ
ಕೆ ಎಲ್ ಕೃಷ್ಣ – ಸಾಹಿತ್ಯ ಮತ್ತು ಶಿಕ್ಷಣ
ಕೆ ಓಮನಕುಟ್ಟಿ ಅಮ್ಮ – ಕಲೆ
ಕಿಶೋರ ಕುನಾಲ್ (ಮರಣೋತ್ತರ) – ನಾಗರಿಕ ಸೇವೆ
ಎಲ್ ಹ್ಯಾಂಗ್ಥಿಂಗ್ – ಇತರರು – ಕೃಷಿ
ಲಕ್ಷ್ಮೀಪತಿ ರಾಮಸುಬ್ಬಯ್ಯರ್ – ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ
ಲಲಿತಕುಮಾರ ಮಂಗೋತ್ರ – ಸಾಹಿತ್ಯ ಮತ್ತು ಶಿಕ್ಷಣ ಜೆ
ಲಾಮಾ ಲೋಬ್ಜಾಂಗ್ (ಮರಣೋತ್ತರ) – ಇತರರು – ಆಧ್ಯಾತ್ಮಿಕತೆ
ಲಿಬಿಯಾ ಲೋಬೋ ಸರ್ದೇಸಾಯಿ – ಸಮಾಜಕಾರ್ಯ
ಎಂಡಿ ಶ್ರೀನಿವಾಸ – ವಿಜ್ಞಾನ ಮತ್ತು ಎಂಜಿನಿಯರಿಂಗ್
ಮಡುಗುಳ ನಾಗಫಣಿ ಶರ್ಮ – ಕಲೆ
ಮಹಾಬೀರ ನಾಯಕ್ – ಕಲೆ
ಮಮತಾ ಶಂಕರ – ಕಲೆ
ಮಂದ ಕೃಷ್ಣ ಮಾದಿಗ – ಸಾರ್ವಜನಿಕ ವ್ಯವಹಾರಗಳು
ಮಾರುತಿ ಭುಜಂಗರಾವ್ ಚಿತ್ತಂಪಲ್ಲಿ – ಸಾಹಿತ್ಯ ಮತ್ತು ಶಿಕ್ಷಣ
ಮಿರಿಯಾಲ ಅಪ್ಪಾರಾವ್ (ಮರಣೋತ್ತರ) – ಕಲೆ ಆಂಧ್ರಪ್ರದೇಶ
ನಾಗೇಂದ್ರ ನಾಥ ರಾಯ್ – ಸಾಹಿತ್ಯ ಮತ್ತು ಶಿಕ್ಷಣ
ನಾರಾಯಣ (ಭುಲೈ ಭಾಯಿ) (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ನರೇನ್ ಗುರುಂಗ್ – ಕಲೆ ಸಿಕ್ಕಿಂ
ನೀರ್ಜಾ ಭಟ್ಲ – ಔಷಧ
ನಿರ್ಮಲಾ ದೇವಿ – ಕಲೆ
ನಿತಿನ್ ನೊಹ್ರಿಯಾ – ಸಾಹಿತ್ಯ ಮತ್ತು ಶಿಕ್ಷಣ
ಓಂಕಾರ್ ಸಿಂಗ್ ಪಹ್ವಾ – ವ್ಯಾಪಾರ ಮತ್ತು ಕೈಗಾರಿಕೆ
ಪಿ ದಚ್ಚನಮೂರ್ತಿ – ಕಲೆ
ಪಾಂಡಿ ರಾಮ ಮಾಂಡವಿ – ಕಲೆ
ಪರ್ಮಾರ ಲವ್ಜಿಭಾಯಿ ನಾಗ್ಜಿಭಾಯ್ – ಕಲೆ
ಪವನ್ ಗೋಯೆಂಕಾ – ವ್ಯಾಪಾರ ಮತ್ತು ಕೈಗಾರಿಕೆ
ಪ್ರಶಾಂತ ಪ್ರಕಾಶ – ವ್ಯಾಪಾರ ಮತ್ತು ಕೈಗಾರಿಕೆ
ಪ್ರತಿಭಾ ಸತ್ಪತಿ – ಸಾಹಿತ್ಯ ಮತ್ತು ಶಿಕ್ಷಣ
ಪುರಿಸೈ ಕಣ್ಣಪ್ಪ ಸಂಬಂಧನ್ – ಕಲೆ
ಆರ್ ಅಶ್ವಿನ್ – ಕ್ರೀಡೆ (ಕ್ರಿಕೆಟ್‌)
ಆರ್ ಜಿ ಚಂದ್ರಮೋಗನ್ – ವ್ಯಾಪಾರ ಮತ್ತು ಕೈಗಾರಿಕೆ
ರಾಧಾ ಬಹಿನ್ ಭಟ್ – ಸಮಾಜಕಾರ್ಯ
ರಾಧಾಕೃಷ್ಣನ್ ದೇವಸೇನಾಪತಿ – ಕಲೆ
ರಾಮದರಶ ಮಿಶ್ರಾ – ಸಾಹಿತ್ಯ ಮತ್ತು ಶಿಕ್ಷಣ
ರಣೇಂದ್ರ ಭಾನು ಮಜುಂದಾರ್ – ಕಲೆ
ರತನಕುಮಾರ ಪರಿಮೂ – ಕಲೆ
ರೆಬಾ ಕಾಂತಾ ಮಹಂತ – ಕಲೆ
ರೆಂತ್ಲೀ ಲಾಲ್ರಾವ್ನಾ -ಸಾಹಿತ್ಯ ಮತ್ತು ಶಿಕ್ಷಣ ಮಿಜೋರಾಂ
ರಿಕಿ ಜ್ಞಾನ್ ಕೇಜ್ – ಕಲೆ
ಸಜ್ಜನ್ ಭಜಂಕಾ – ವ್ಯಾಪಾರ ಮತ್ತು ಕೈಗಾರಿಕೆ
ಸಾಲಿ ಹೋಳ್ಕರ್ – ವ್ಯಾಪಾರ ಮತ್ತು ಕೈಗಾರಿಕೆ
ಸಂತ ರಾಮ ದೇಸ್ವಾಲ್ – ಸಾಹಿತ್ಯ ಮತ್ತು ಶಿಕ್ಷಣ
ಸತ್ಯಪಾಲ್ ಸಿಂಗ್ – ಕ್ರೀಡೆ
ಸೀನಿ ವಿಶ್ವನಾಥನ್ – ಸಾಹಿತ್ಯ ಮತ್ತು ಶಿಕ್ಷಣ
ಸೇತುರಾಮನ್ ಪಂಚನಾಥನ್ – ವಿಜ್ಞಾನ ಮತ್ತು ಎಂಜಿನಿಯರಿಂಗ್
ಶೇಖಾ ಶೈಖಾ ಅಲಿ ಅಲ್-ಜಾಬರ್ ಅಲ್-ಸಬಾಹ್ – ಔಷಧ
ಶೀನ್ ಕಾಫ್ ನಿಜಾಮ್ (ಶಿವ ಕಿಶನ್ ಬಿಸ್ಸಾ) – ಸಾಹಿತ್ಯ ಮತ್ತು ಶಿಕ್ಷಣ
ಶ್ಯಾಮ್ ಬಿಹಾರಿ ಅಗರವಾಲ್ – ಕಲೆ
ಸೋನಿಯಾ ನಿತ್ಯಾನಂದ – ಔಷಧ
ಸ್ಟೀಫನ್ ನ್ಯಾಪ್ – ಸಾಹಿತ್ಯ ಮತ್ತು ಶಿಕ್ಷಣ
ಸುಭಾಷ ಖೇತುಲಾಲ ಶರ್ಮಾ – ಇತರರು – ಕೃಷಿ ಮಹಾರಾಷ್ಟ್ರ
ಸುರೇಶ ಹರಿಲಾಲ ಸೋನಿ – ಸಮಾಜ ಕಾರ್ಯ
ಸುರಿಂದರಕುಮಾರ ವಾಸಲ್ – ವಿಜ್ಞಾನ ಮತ್ತು ಎಂಜಿನಿಯರಿಂಗ್ ದೆಹಲಿ
ಸ್ವಾಮಿ ಪ್ರದೀಪ್ತಾನಂದ (ಕಾರ್ತಿಕ ಮಹಾರಾಜ್) – ಇತರರು – ಆಧ್ಯಾತ್ಮಿಕತೆ
ಸೈಯದ್ ಐನುಲ್ ಹಸನ್ – ಸಾಹಿತ್ಯ ಮತ್ತು ಶಿಕ್ಷಣ
ತೇಜೇಂದ್ರ ನಾರಾಯಣ ಮಜುಂದಾರ್ – ಕಲೆ
ಥಿಯಂ ಸೂರ್ಯಮುಖಿ ದೇವಿ – ಕಲೆ
ತುಷಾರ್ ದುರ್ಗೇಶಭಾಯ ಶುಕ್ಲಾ – ಸಾಹಿತ್ಯ ಮತ್ತು ಶಿಕ್ಷಣ
ವಾದಿರಾಜ ರಾಘವೇಂದ್ರಾಚಾರ್ಯ ಪಂಚಮುಖಿ – ಸಾಹಿತ್ಯ ಮತ್ತು ಶಿಕ್ಷಣ
ವಾಸುದೇವ ಕಾಮತ್ – ಕಲೆ
ವೇಲು ಆಸಾನ್ – ಕಲೆ
ವೆಂಕಪ್ಪ ಅಂಬಾಜಿ ಸುಗಟೇಕರ್ – ಕಲೆ
ವಿಜಯ ನಿತ್ಯಾನಂದ ಸುರೀಶ್ವರ್ ಜಿ ಮಹಾರಾಜ್ – ಇತರರು – ಆಧ್ಯಾತ್ಮಿಕತೆ
ವಿಜಯಲಕ್ಷ್ಮಿ ದೇಶಮಾನೆ – ಔಷಧ
ವಿಲಾಸ ಡಾಂಗ್ರೆ – ಔಷಧ
ವಿನಾಯಕ್ ಲೋಹಾನಿ – ಸಮಾಜಕಾರ್ಯ

ಪ್ರಮುಖ ಸುದ್ದಿ :-   ಛತ್ತೀಸ​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್​ ; 22 ನಕ್ಸಲರ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement