ವೀಡಿಯೊ | ವಿಶ್ವದ ಅತಿ ಎತ್ತರದ ಸೇತುವೆಯಲ್ಲಿ ಯಶಸ್ವಿಯಾಗಿ ಓಡಿದ ವಂದೇ ಭಾರತ ರೈಲು..!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರೈಲು ಸಂಪರ್ಕಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿನ ಮೊದಲ ಪ್ರಾಯೋಗಿಕ ಚಾಲನೆಯನ್ನು ಭಾರತೀಯ ರೈಲ್ವೆಯು ಶನಿವಾರ ಯಶಸ್ವಿಯಾಗಿ ನಡೆಸಿದೆ.
ಶ್ರೀ ಮಾತಾ ವೈಷ್ಣೋದೇವಿ ಕತ್ರಾ (SVDK) ರೈಲು ನಿಲ್ದಾಣದಿಂದ ಶ್ರೀನಗರ ರೈಲು ನಿಲ್ದಾಣಕ್ಕೆ ಪ್ರಯಾಣಿಸಿದ ರೈಲು, ವಿಶ್ವದ ಅತಿ ಎತ್ತರದ ರೈಲು ಸೇತುವೆಯಾದ ಚೆನಾಬ್ ಸೇತುವೆಯ ಮೂಲಕ ಹಾದುಹೋಗಿರುವುದು ವಿಶೇಷವಾಗಿದೆ.ಇದು ಅಂಜಿ ಖಾಡ್ ಸೇತುವೆಯ ಮೂಲಕವೂ ಸಾಗಿತು. ಇದು ಭಾರತದ ಮೊದಲ ಕೇಬಲ್ ರೈಲ್ವೆ ಸೇತುವೆಯಾಗಿದೆ.
ಶನಿವಾರ ಪೂರ್ವಾಹ್ನ 11:30 ರ ಸುಮಾರಿಗೆ ಜಮ್ಮುವಿನಲ್ಲಿ ರೈಲು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು, ಅಲ್ಲಿ ಅದನ್ನು ಸ್ವಾಗತಿಸಲಾಯಿತು. ನಂತರ ಅದರ ಪ್ರಾಯೋಗಿಕ ಓಡಾಟವನ್ನು ಪೂರ್ಣಗೊಳಿಸಲು ಮುಂದಿನ ಬುದ್ಗಾಮ್ ನಿಲ್ದಾಣಕ್ಕೆ ಅದು ಚಲಿಸಿತು.
ರೈಲಿನ ವಾಣಿಜ್ಯ ಕಾರ್ಯಾಚರಣೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ, ಪ್ರಧಾನಿ ನರೇಂದ್ರ ಮೋದಿ ಕತ್ರಾದಿಂದ ಮೊದಲ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸುವ ನಿರೀಕ್ಷೆಯಿದೆ. ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ರೈಲಿನ ವಿಶೇಷತೆಗಳು
ವಂದೇ ಭಾರತ ರೈಲನ್ನು ಜಮ್ಮು ಮತ್ತು ಕಾಶ್ಮೀರದ ಚಳಿಗಾಲದ ಸವಾಲಿನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಿಶೇಷ ಹವಾಮಾನ ಸಂಬಂಧಿ ವೈಶಿಷ್ಟ್ಯಗಳನ್ನು ಹೊಂದಿದೆ. ದೇಶದ ವಿವಿಧ ಭಾಗಗಳಲ್ಲಿ ಓಡುತ್ತಿರುವ ಇತರ ವಂದೇ ಭಾರತ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ, ಈ ರೈಲು ಕಾರ್ಯಾಚರಣೆಯ ಸವಾಲುಗಳು ಮತ್ತು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಹಲವಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸುಧಾರಿತ ತಾಪಮಾನ ನಿಯಂತ್ರಣ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದು ನೀರು ಮತ್ತು ಜೈವಿಕ-ಶೌಚಾಲಯ ಟ್ಯಾಂಕ್‌ಗಳು ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ನಿರ್ವಾತ ವ್ಯವಸ್ಥೆಗೆ ಬೆಚ್ಚಗಿನ ಗಾಳಿಯನ್ನು ಒದಗಿಸುತ್ತದೆ ಮತ್ತು ತೀರ ಕಡಿಮೆ ತಾಪಮಾನದಲ್ಲಿಯೂ ಸಹ ಸುಗಮ ಕಾರ್ಯಾಚರಣೆಗಾಗಿ ಏರ್-ಬ್ರೇಕ್ ಸಿಸ್ಟಂ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುವಂತೆ ತಯಾರಿಸಲಾಗಿದೆ.

ಪ್ರಮುಖ ಸುದ್ದಿ :-   ನಲ್ಲಿ ನೀರು ವಿವಾದ: ಕೇಂದ್ರ ಸಚಿವರ ಇಬ್ಬರು ಸೋದರಳಿಯಂದಿರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

https://x.com/i/status/1883046327069946165

ರೈಲು ಚಾಲಕನ ಮುಂಭಾಗದ ಲುಕ್‌ಔಟ್ ಗ್ಲಾಸ್ ಅನ್ನು ಸ್ವಯಂಚಾಲಿತವಾಗಿ ಡಿಫ್ರಾಸ್ಟ್ ಮಾಡಲು ವಿಂಡ್‌ಶೀಲ್ಡ್‌ನಲ್ಲಿ ಎಂಬೆಡೆಡ್ ಹೀಟಿಂಗ್ ಎಲಿಮೆಂಟ್‌ ಇರಲಿದೆ. ಇದು ಭಾರಿ ಚಳಿಗಾಲದ ಪರಿಸ್ಥಿತಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ.
ಇವುಗಳ ಹೊರತಾಗಿ, ರೈಲು ಸಂಪೂರ್ಣ ಹವಾನಿಯಂತ್ರಿತ ಕೋಚ್‌ಗಳು, ಸ್ವಯಂಚಾಲಿತ ಬಾಗಿಲು ತೆರೆಯುವಿಕೆ ಮತ್ತು ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಳನ್ನು ವಂದೇ ಭಾರತ ರೈಲುಗಳ ಇತರ ಸೌಕರ್ಯಗಳನ್ನೂ ಒಳಗೊಂಡಿದೆ.
ಈ ರೈಲು 272-ಕಿಮೀ ಯುಎಸ್‌ಬಿಆರ್‌ಎಲ್ (ಉದಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ) ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಲ್ಲದೆ, ಇದು ಕಾಶ್ಮೀರ ಕಣಿವೆಯನ್ನು ವಿಶಾಲವಾದ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement