ವೀಡಿಯೊ..| ಕ್ರಿಕೆಟಿನಲ್ಲೊಂದು ವಿಚಿತ್ರ ಔಟ್‌-ನಾಟೌಟ್‌ : ಥರ್ಡ್ ಅಂಪೈರ್ ಔಟ್ ನೀಡಿದ್ರೂ ಬ್ಯಾಟಿಂಗ್‌ ಮುಂದುವರಿಸಿದ ಆಟಗಾರ…!

ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ಕ್ರಿಕೆಟ್‌ ನಲ್ಲಿ ಎಂಐ ಎಮಿರೇಟ್ಸ್ ಮತ್ತು ಗಲ್ಫ್ ಜೈಂಟ್ಸ್ ನಡುವಿನ ಪಂದ್ಯ ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನ 18 ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿತ್ತು. ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.
ಪಂದ್ಯದಲ್ಲಿ ಗಲ್ಫ್ ಜೈಂಟ್ಸ್ ಬ್ಯಾಟ್ಸ್‌ಮನ್ ಮಾರ್ಕ್ ಅಡೈರ್ ಅವರು ಲಾಂಗ್ ಆಫ್‌ನಲ್ಲಿ ಶಾಟ್ ಹೊಡೆದು ಒಂದು ರನ್ ಪಡೆದರು. ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಟಾಮ್ ಕರನ್ ಅವರು, ಕ್ರೀಸ್‌ಗೆ ಬಂದ ನಂತರ ಒಂದು ಸಿಂಗಲ್ ತೆಗೆದುಕೊಂಡು ಎರಡು ಬಾರಿ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ತಟ್ಟಿದರು. ಆದರೆ ಸ್ವಲ್ಪ ಸಮಯದ ನಂತರ, ಅವರು ಅಡೈರ್ ಜೊತೆ ಮಾತನಾಡಲೆಂದು ಕ್ರೀಸ್ ಬಿಟ್ಟರು. ಆಗ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಸ್ಟಂಪ್‌ ಔಟ್ ಮಾಡಿ ಅಂಪೈರ್‌ಗೆ ಮನವಿ ಮಾಡಿದರು. ಇದು ನಂತರ ಥರ್ಡ್ ಅಂಪೈರ್ ಗೆ ಹೋಯಿತು. ವೀಡಿಯೊ ಪರಿಶೀಲಿಸಿದ ನಂತರ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಆದರೆ ಈ ನಿರ್ಧಾರದಿಂದ ಗಲ್ಫ್ ಜೈಂಟ್ಸ್ ತಂಡದ ಕೋಚ್ ಆಂಡಿ ಫ್ಲವರ್ ಅಸಮಾಧಾನಗೊಂಡರು. ಅವರು ಡಗೌಟ್‌ನಿಂದ ಹೊರಬಂದು ಟಾಮ್ ಕರನ್ ಅವರಿಗೆ ಮೈದಾನದಲ್ಲಿಯೇ ಇರುವಂತೆ ಸೂಚಿಸಿದರು. ಈ ವೇಳೆ ಪೂರಾನ್ ತಮ್ಮ ಮನವಿಯನ್ನು ಹಿಂತೆಗೆದುಕೊಂಡರು. ಹೀಗಾಗಿ ಕರನ್ ಬ್ಯಾಟಿಂಗ್‌ ಮುಂದುವರೆಸಿದರು. ಎಂಐ ಎಮಿರೇಟ್ಸ್‌ನ ಈ ನಿರ್ಧಾರವನ್ನು ಗಲ್ಫ್ ಜೈಂಟ್ಸ್ ತಂಡವು ಶ್ಲಾಘಿಸಿತು.
ಪಂದ್ಯದ ನಂತರ ಘಟನೆಯ ಬಗ್ಗೆ ಮಾತನಾಡಿದ ಪೂರಾನ್, ಇದು ಕ್ರೀಡಾ ಮನೋಭಾವ. ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಓವರ್‌ ಮುಕ್ತಾಯದ ಕರೆಯನ್ನು ಕೇಳಿದಂತೆ ತೋರುತ್ತಿತ್ತು. ಆದರೆ ನನಗೆ ಕೆೇಳಿಸಿರಲಿಲ್ಲ, ಅದಕ್ಕಾಗಿಯೇ ನಾನು ಮೇಲ್ಮನವಿ ಸಲ್ಲಿಸಿದ್ದೆ ಎಂದು ಹೇಳಿದರು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement