ಶಿರಸಿ : ಅಡಕೆ ಕೊನೆ ಕೊಯ್ಯುವ ಕೊನೆಗೌಡರಿಗೆ ಇನ್ಸುರೆನ್ಸ್ ಗ್ರೂಪ್ ಅಕ್ಸಿಡೆಂಟ್ ಗಾರ್ಡ್ ಪಾಲಿಸಿಯ ಒಂದು ವರ್ಷದ ಕಂತನ್ನು ತುಂಬಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿರ್ಧಾರಿಸಿದ್ದು, ಈ ಹಿನ್ನೆಲೆಯಲ್ಲಿ ಅದು ಶಿರಸಿಯ ಎಪಿಎಂಸಿ ಆವರಣದಲ್ಲಿರುವ ಟಿಆರ್‌ಸಿ ಸಭಾಂಗಣದಲ್ಲಿ ಜನವರಿ 29ರಂದು ಕಾರ್ಯಕ್ರಮ ಆಯೋಜಿಸಿದೆ.
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನವರಿ ೨೯ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕೊನೆಗೌಡರಿಗೆ ಪ್ರಾಣಾಪಾಯ ಸಂಭವಿಸಿದರೆ 10 ಲಕ್ಷ ರೂಪಾಯಿ ಹಣ ಅವರ ಕುಟುಂಬಕ್ಕೆ ಸಿಗುವ ಹಾಗೂ ಶಸ್ತ್ರ ಚಿಕಿತ್ಸೆಗೆ 60,000 ರೂ. ವರೆಗೆ ಸಹಾಯ ಸಿಗುವ ಪೋಸ್ಟ್ ಆಫೀಸ್ ಯೋಜನೆಯಾದ ಇನ್ಸುರೆನ್ಸ್ ಗ್ರೂಪ್ ಅಕ್ಸಿಡೆಂಟ್ ಗಾರ್ಡ್ ಪಾಲಿಸಿಯ 1 ವರ್ಷದ ಅವಧಿಗೆ ವಿಮಾ ಕಂತನ್ನು ತುಂಬಿಕೊಡಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿರ್ಧಾರ ಮಾಡಿದೆ, ಇದನ್ನು ಕೊನೆಗೌಡರು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಆಸಕ್ತ ಕೊನೆಗೌಡರು ಬರುವಾಗ ಆಧಾರ ಕಾರ್ಡ್ ಹಾಗೂ ಮೊಬೈಲ್ ಕಡ್ಡಾಯವಾಗಿ ತರಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಜಿ. ಜಿ . ಹೆಗಡೆ 9740673262 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ