ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ 17 ವರ್ಷದ ಹುಡುಗಿಯೊಬ್ಬಳು “ಸಾವಿನ ನಂತರ ಏನಾಗುತ್ತದೆ” ಎಂದು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಹುಡುಗಿ, ಖಾಸಗಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿ ಮತ್ತು ನಾಗ್ಪುರದ ಆರ್‌ಬಿಐನಲ್ಲಿ ಪ್ರಾದೇಶಿಕ ನಿರ್ದೇಶಕರ ಏಕೈಕ ಮಗಳು. ಕುಟುಂಬವು ನಾಗ್ಪುರದ ಛತ್ರಪತಿ ನಗರ ಪ್ರದೇಶದಲ್ಲಿ ವಾಸವಾಗಿತ್ತು. ಈಕೆ ಸಾವು ಮತ್ತು ವಿದೇಶಿ ಸಂಸ್ಕೃತಿಗಳ ಬಗ್ಗೆ ಆಗಾಗ್ಗೆ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಅವಳು ಮೊದಲು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಳು, ನಂತರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಂಡಿದ್ದ ‘ಸ್ಟೋನ್ ಬ್ಲೇಡ್ ಚಾಕು’ವಿನಿಂದ ಅಡ್ಡಲಾಗಿ ಗುರುತುಗಳನ್ನು ಮಾಡಿದಳು ಮತ್ತು ನಂತರ ತನ್ನ ಜೀವನವನ್ನು ಕೊನೆಗೊಳಿಸಲು ತನ್ನ ಕತ್ತು ಸೀಳಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹಿಣಿಯಾಗಿರುವ ಆಕೆಯ ತಾಯಿ ಸೋಮವಾರ ಮುಂಜಾನೆ 5:45 ರ ಸುಮಾರಿಗೆ ತಮ್ಮ ಮನೆಯಲ್ಲಿ ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಪೊಲೀಸರು ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ತೆಗೆದುಕೊಂಡರು ಮತ್ತು ಅದನ್ನು ಪರಿಶೀಲಿಸಿದಾಗ, “ಸಾವಿನ ನಂತರ ಏನಾಗುತ್ತದೆ” ಎಂಬ ಮಾಹಿತಿಗಾಗಿ ಅವಳು ಗೂಗಲ್‌ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದಳು ಎಂದು ಧಂತೋಳಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಡುಗಿ ಯುರೋಪಿಯನ್ ಸಂಸ್ಕೃತಿ ಬಗ್ಗೆ ಆನ್‌ಲೈನ್ ಹುಡುಕಾಟ ನಡೆಸಿದ್ದಳು ಮತ್ತು ಸಾವಿನ ಬಗ್ಗೆಯೂ ಹುಡುಕಾಟ ನಡೆಸಿದ್ದಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದು ಆಕೆ ಹಲವು ವಾರಗಳಿಂದ ಆತ್ಮಹತ್ಯೆಗೆ ಯೋಜನೆ ರೂಪಿಸಿದ್ದನ್ನು ಸೂಚಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತದೇಹವನ್ನು ಪರಿಶೀಲಿಸಿದಾಗ, ಬಾಲಕಿಯ ಮಣಿಕಟ್ಟಿನ ಮೇಲೆ ಎರಡು ಅಡ್ಡ ಗುರುತುಗಳು ಸೇರಿದಂತೆ ಐದು ಕಡೆ ಕಟ್ ಮಾಡಿಕೊಂಡಿರುವುದು ಕಂಡುಬಂದಿದೆ ಗಮನಿಸಿದರು ಮತ್ತು ಆಕೆ ತನ್ನ ಕತ್ತನ್ನು ತಾನೇ ಸೀಳಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಹುಡುಗಿ ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದಳು ಎಂದು ತನಿಖೆಗಳು ಸೂಚಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಕೆ ತನ್ನ ಜೀವನವನ್ನು ಅಂತ್ಯಗೊಳಿಸಲು ಬಳಸಿದ ಕಲ್ಲಿನ ಬ್ಲೇಡ್ ಮತ್ತು ಮರದ ಹಿಡಿಕೆಯ ಚಾಕು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಆಕೆ ಆನ್‌ಲೈನ್‌ನಲ್ಲಿ ಚಾಕುವನ್ನು ಆರ್ಡರ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಅಧಿಕಾರಿಗಳು ಅವಳ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾಲಕಿ ತನ್ನ ಪೋಷಕರೊಂದಿಗೆ ಅವರ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದಳು, ಮೊದಲ ಮಹಡಿಯಲ್ಲಿ ಅವಳ ಚಿಕ್ಕಪ್ಪನ ಕುಟುಂಬ ಮತ್ತು ಅಜ್ಜಿ ವಾಸಿಸುತ್ತಿದ್ದರು.
ಧಾಂತೋಳಿ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ