ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚೂರಿ ಇರಿತ ಪ್ರಕರಣದ ಆರೋಪಿ ಮೊಹಮ್ಮದ್ ಷರೀಫುಲ್ ಇಸ್ಲಾಂ ಅಪರಾಧದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿಯೇ ಎಂದು ಮುಖ ಗುರುತಿಸುವಿಕೆ ತಂತ್ರಜ್ಞಾನವು ದೃಢಪಡಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಆರೋಪಿಯ ಮುಖ ಗುರುತಿಸುವಿಕೆ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಅದು ಸೈಫ್ ಅಲಿ ಖಾನ್ ನಿವಾಸದಿಂದ ವಸಕ್ಕೆ ಪಡೆದ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ವ್ಯಕ್ತಿಯೊಂದಿಗೆ ಹೊಂದಿಕೆಯಾಯಿತು. ಬಂಧಿತ ವ್ಯಕ್ತಿ ಬಾಂದ್ರಾದ ಸದ್ಗುರು ಶರಣ ಕಟ್ಟಡದಿಂದ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡ ಬಂದ ಅದೇ ವ್ಯಕ್ತಿ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಜನವರಿ 16 ರ ಮುಂಜಾನೆ ಬಾಂದ್ರಾದ ಸೈಫ್ ಅವರ ಮನೆ ಕಳ್ಳತನಕ್ಕೆ ಮೊಹಮ್ಮದ್ ಷರೀಫುಲ್ ಇಸ್ಲಾಂ ಪ್ರವೇಶಿಸಿದ್ದಾನೆ. 54 ವರ್ಷದ ನಟ ಸೈಫ್ ಅಲಿ ಖಾನ್ ಅವರ ಜೊತೆ ಮುಖಾಮುಖಿಯಾದಾಗ ತಪ್ಪಿಸಿಕೊಳ್ಳುವ ಮೊದಲು ಕಳ್ಳ ಸೈಫ್ ಅಲಿ ಖಾನ್ ಅವರಿಗೆ ಆರು ಬಾರಿ ಇರಿದಿದ್ದಾನೆ.
ನಂತರ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಇರಿತದ ಒಂದು ಗಾಯವು ಅವರ ಬೆನ್ನುಹುರಿಗೆ ಸಮೀಪದಲ್ಲಿ ಆಳವಾಗಿ ಆಗಿತ್ತು. ಇದರಿಂದಾಗಿ ಬೆನ್ನುಮೂಳೆಯ ದ್ರವ ಸೋರಿಕೆಯಾಯಿತು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದ ಐದು ದಿನಗಳ ನಂತರ, ಅವರನ್ನು ಬಿಡುಗಡೆ ಮಾಡಲಾಯಿತು. ಬಾಂಗ್ಲಾದೇಶದ ಪ್ರಜೆ ಇಸ್ಲಾಂನನ್ನು ಜನವರಿ 19 ರಂದು ಥಾಣೆಯಲ್ಲಿ ಬಂಧಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ