ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ಆರೋಗ್ಯದಲ್ಲಿ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೆದುಳು ರಕ್ತಸ್ರಾವವಾಗಿದ್ದು, ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ.
ಅವರ ಆರೋಗ್ಯ ಹದಗೆಟ್ಟ ನಂತರ, ಅಧಿಕ ರಕ್ತದೊತ್ತಡದ ಕಾರಣ ದಾಸ್ ಅವರನ್ನು ತಕ್ಷಣವೇ ಅಯೋಧ್ಯೆಯ ಶ್ರೀ ರಾಮ ಆಸ್ಪತ್ರೆಗೆ ರಾತ್ರಿ 7 ರ ಸುಮಾರಿಗೆ ದಾಖಲಿಸಲಾಯಿತು, ಅಲ್ಲಿಂದ ಅವರನ್ನು ಮೊದಲು ಟ್ರಾಮಾ ಸೆಂಟರ್‌ಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಸಿಟಿ ನ್ಯೂರೋ ಕೇರ್ ಆಸ್ಪತ್ರೆಗೆ ಕಳುಹಿಸಲಾಯಿತು.
ವೈದ್ಯರು ಏನು ಹೇಳಿದರು.
ಆಚಾರ್ಯ ದಾಸ್ ಅವರನ್ನು ಗಂಭೀರ ಸ್ಥಿತಿಯಲ್ಲಿ ತರಲಾಗಿದೆ ಎಂದು ಅಯೋಧ್ಯೆಯ ನ್ಯೂರೋ ಸೆಂಟರ್‌ನ ವೈದ್ಯ ಡಾ.ಅರುಣಕುಮಾರ ಸಿಂಗ್ ಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಅವರ ಸ್ಥಿತಿ ಗಂಭೀರವಾದ ಕಾರಣ, ಹೆಚ್ಚಿನ ಆರೈಕೆಗಾಗಿ ಅವರನ್ನು ಲಕ್ನೋಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ಆರೋಗ್ಯ ಮತ್ತು ಚೇತರಿಕೆಗಾಗಿ ಅಯೋಧ್ಯೆಯ ಸಂತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಸತ್ಯೇಂದ್ರ ದಾಸ್ ಅವರು ಏಪ್ರಿಲ್ 1992 ರಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕರಾದರು. ಅವರು ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸದ ನಂತರ ಡೇರೆಯಲ್ಲಿ ರಾಮಲಲ್ಲಾನ ಪೂಜೆಯನ್ನು ನಿರ್ವಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಮಲಲ್ಲಾನನ್ನು ಡೇರೆಯಿಂದ 2020 ರಲ್ಲಿ ತಾತ್ಕಾಲಿಕ ದೇವಸ್ಥಾನಕ್ಕೆ ಸ್ಥಳಾಂತರಿಸಿದಾಗ , ಆಚಾರ್ಯ ದಾಸ್ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ, ಅವರು ಅಯೋಧ್ಯೆಯ ರಾಮಮಂದಿರದಲ್ಲಿ ಮುಖ್ಯ ಅರ್ಚಕರಾಗಿದ್ದಾರೆ.
ಅಕ್ಟೋಬರ್ 2024 ರಲ್ಲಿ ಅವರ ಆರೋಗ್ಯವು ಹದಗೆಟ್ಟಿತು ಮತ್ತು ನಂತರ ಅವರನ್ನು ಸಂಜಯ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಪಿಜಿಐ) ಗೆ ದಾಖಲಿಸಲಾಯಿತು. ಪಿಜಿಐನ ನ್ಯೂರಾಲಜಿ ವಿಭಾಗದ ಖಾಸಗಿ ಕೊಠಡಿಯಲ್ಲಿ ಡಾ.ಪ್ರಕಾಶಚಂದ್ರ ಪಾಂಡೆ ಅವರ ಮೇಲ್ವಿಚಾರಣೆಯಲ್ಲಿ ಆಚಾರ್ಯ ದಾಸ್ ಅವರಿಗೆ ಚಿಕಿತ್ಸೆ ನೀಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ