ಜೋಹಾನ್ಸ್‌ಬರ್ಗ್: ಭೂಮಿಯ ದಕ್ಷಿಣ ಗೋಳಾರ್ಧದಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣವನ್ನು ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ ಅನಾವರಣಗೊಳಿಸಲಾಯಿತು.
ದಕ್ಷಿಣ ಆಫ್ರಿಕಾದವರಲ್ಲಿ ಶೇಕಡಾ ಎರಡಕ್ಕಿಂತ ಕಡಿಮೆ ಜನರು ಹಿಂದೂ ಎಂದು ಗುರುತಿಸಿಕೊಂಡಿದ್ದರೂ, ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯದಲ್ಲಿ ಹಿಂದೂ ಧರ್ಮ ಹೆಚ್ಚು ಅನುಸರಿಸುವ ಧರ್ಮವಾಗಿದೆ.
ಈ ಸಂದರ್ಭಕ್ಕಾಗಿ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಬಂದಿರುವ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (BAPS) ಪಂಗಡದ ಆಧ್ಯಾತ್ಮಿಕ ಗುರು ಮಹಂತ ಸ್ವಾಮಿ ಮಹಾರಾಜ (92) ನೇತೃತ್ವದ ಸಮರ್ಪಣಾ ವಿಧಿಗಳಲ್ಲಿ ಪಾಲ್ಗೊಳ್ಳಲು ಭಕ್ತರು ಸೂರ್ಯ ಉದಯಸುವುದಕ್ಕಿಂತ ಮೊದಲೇ ಆಗಮಿಸಿದ್ದರು.
ಬಾಪ್ಸ್ (BAPS) ತನ್ನ ಫೇಸ್‌ಬುಕ್ ಪುಟದಲ್ಲಿ ಈ ದೇವಾಲಯವನ್ನು ಭೂಮಿಯ “ದಕ್ಷಿಣ ಗೋಳಾರ್ಧದ ಅತಿದೊಡ್ಡ ಹಿಂದೂ ಸಾಂಸ್ಕೃತಿಕ ಸಂಕೀರ್ಣ” ಎಂದು ವಿವರಿಸಿದೆ. ಉದ್ಘಾಟನೆಗೆ ಮುಂಚಿತವಾಗಿ, ಜೋಹಾನ್ಸ್‌ಬರ್ಗ್‌ನಲ್ಲಿ ಶನಿವಾರದಂದು ಸನ್ಯಾಸಿಗಳು ನಗರ ಯಾತ್ರಾ ಮೆರವಣಿಗೆ ನೇತೃತ್ವ ವಹಿಸಿದ್ದರು. ಮೆರವಣಿಗೆ ಬ್ಯಾಂಡ್‌ಗಳು ಮತ್ತು ನೃತ್ಯ ಹಾಗೂ ಭಕ್ತಿ ಸಂಗೀತವನ್ನು ಒಳಗೊಂಡಿತ್ತು.
ದೇವಾಲಯವು ಕಲೆ, ನೃತ್ಯ, ಭಾಷೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಮುದಾಯವು ಮಾತನಾಡುವ ಹಲವಾರು ಭಾಷೆಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಆಯೋಜಿಸುತ್ತದೆ, ಜೊತೆಗೆ ಬಾಪ್ಸ್ (BAPS) ದತ್ತಿಗಳನ್ನು ಹೊಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ