ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಉಚಿತ ಟಿವಿ ವೀಕ್ಷಣೆ ಸೌಲಭ್ಯ ; 450 ಚಾನೆಲ್‌ ಗಳು ಲಭ್ಯ…!

 ಮುಂಬೈ : ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ (ಬಿಎಸ್‌ಎನ್‌ಎಲ್‌) ತನ್ನ ಚಂದಾದಾರರಿಗೆ ಅನಿಯಮಿತ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ‘ಒಟಿಟಿಪ್ಲೇ’ ಜೊತೆ ಸೇರಿ ಇಂಟರ್ನೆಟ್‌ ಆಧಾರಿತ ‘ಬಿಐಟಿವಿ’ ಎಂಬ ಪ್ಲಾಟ್‌ಫಾರಂ ಸೇವೆ ಆರಂಭಿಸಿದೆ. ಈ ಸೇವೆಯು ಭಾರತದಾದ್ಯಂತ ಬಿಎಸ್‌ಎನ್‌ಎಲ್‌ (BSNL) ಮೊಬೈಲ್ ಬಳಕೆದಾರರಿಗೆ ಪ್ರೀಮಿಯಂ ಚಾನೆಲ್‌ಗಳು ಸೇರಿದಂತೆ 450+ ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಪಾಂಡಿಚೇರಿಯಲ್ಲಿ ಈ ಪೈಲಟ್ ಯೋಜನೆಯ ಪ್ರಾರಂಭಿಸಿದ ನಂತರ, ಬಿಎಸ್‌ಎನ್‌ಎಲ್‌ (BSNL) ತನ್ನ ಬಳಕೆದಾರರಿಗೆ ವಿಶ್ವ ದರ್ಜೆಯ ಮನರಂಜನೆಯನ್ನು ಒದಗಿಸುವ ಭಾಗವಾಗಿ ಈಗ ದೇಶಾದ್ಯಂತ ‘ಬಿಐಟಿವಿ’ (BiTV) ಪ್ರಾರಂಭಿಸುತ್ತಿದೆ. ‘ಬಿಐಟಿವಿಯ ಪ್ರಾಯೋಗಿಕ ಪರೀಕ್ಷೆ ಪುದುಚೇರಿಯಲ್ಲಿ ನಡೆದಿದೆ. ಇದು ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಗೆ ಅವಕಾಶ ನೀಡುವ ವೇದಿಕೆಯಾಗಿದೆ. ಒಟಿಟಿ ಕಾರ್ಯಕ್ರಮಗಳಾದ ಭಕ್ತಿ ಫ್ಲಿಕ್ಸ್‌, ಶಾರ್ಟ್‌ ಫಂಡ್ಲಿ, ಕಚ್ಚಾ ಲಂಕಾ, ಸ್ಟೇಜ್‌, ಓಂ ಟಿವಿ, ಪ್ಲೇ ಫ್ಲಿಕ್ಸ್‌, ಫ್ಯಾನ್‌ಕೋಡ್‌, ಡಿಸ್ಟೊರ, ಹಬ್‌ಹಾಪರ್‌ ಹಾಗೂ ರನ್‌ ಟಿವಿ ಒಳಗೊಂಡಂತೆ ನೇರ ಪ್ರಸಾರ, ಬ್ಲಾಕ್‌ ಬಸ್ಟರ್‌ ಸಿನಿಮಾಗಳು, ವೆಬ್‌ ಸರಣಿಗಳನ್ನು ವೀಕ್ಷಿಸಬಹುದು, ವಿವಿಧ ಚಾನೆಲ್‌ಗಳನ್ನು ವೀಕ್ಷಿಸಬಹುದು,” ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್‌ ಜೆ. ರವಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   26/11 ಮುಂಬೈ ಭಯೋತ್ಪಾದಕ ದಾಳಿ ಸಂಚುಕೋರ ತಹವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಒಪ್ಪಿಗೆ ; ಪ್ರಧಾನಿ ಮೋದಿ ಸಮ್ಮುಖದಲ್ಲಿ ಟ್ರಂಪ್‌ ಘೋಷಣೆ

ಯಾವುದೇ ಪ್ಲಾನ್‌ನವರು ಕೂಡ ಈ ಸೌಲಭ್ಯ ಪಡೆದುಕೊಳ್ಳಬಹುದು. ಇದರಲ್ಲಿ ಎಲ್ಲಾ ಭಾಷೆಗಳ ಚಾನೆಲ್‌ಗಳನ್ನೂ ವೀಕ್ಷಿಸಬಹುದು,” ಎಂದು ಒಟಿಟಿಪ್ಲೇ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಅವಿನಾಶ ಮೊದಲಿಯಾರ್‌ ತಿಳಿಸಿದ್ದಾರೆ.
ಬಳಸುವುದು ಹೇಗೆ?
ಗೂಗಲ್‌ ಪ್ಲೇಸ್ಟೋರ್‌ನಿಂದ ಒಟಿಟಿಪ್ಲೇ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಅಥವಾ ಅಧಿಕೃತ ಜಾಲತಾಣಕ್ಕೆ ಲಾಗಿನ್‌ ಆಗಿ ಬಿಎಸ್‌ಎನ್‌ಎಲ್‌ ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿ, ಬರುವ ಒಟಿಪಿ ನಮೂದಿಸಬೇಕು. ಗೂಗಲ್‌ ಪ್ಲೇಸ್ಟೋರ್‌ ಮೂಲಕವೂ ಇದನ್ನು ಡೌನ್‌ಲೋಡ್‌ ಮಾಡಬಹುದು. ಅಲ್ಲಿ 450ಕ್ಕೂ ಹೆಚ್ಚು ಚಾನೆಲ್‌ ವೀಕ್ಷಿಸಬಹುದು. ತಡೆರಹಿತ ಹಾಗೂ ಉತ್ತಮ ಗುಣಮಟ್ಟದ ವಿಡಿಯೊ ಇಲ್ಲಿ ಪ್ರಸಾರವಾಗಲಿದೆ. ಅಲ್ಲದೆ, ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಕಾರ್ಯಕ್ರಮಗಳ ಮಾಹಿತಿ ನೀಡಲು ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗಿದೆ.
ಇಂಟರ್‌ಟೈನ್‌ಮೆಂಟ್‌ನೊಂದಿಗೆ, ಅದರ ಗ್ರಾಹಕರು ಭಕ್ತಿಫ್ಲಿಕ್ಸ್, ಶಾರ್ಟ್‌ಫಂಡ್ಲಿ, ಕಾಂಚಾ ಲಂಕ, STAGE, OM ಟಿವಿ, ಪ್ಲೇಫ್ಲಿಕ್ಸ್, ಫ್ಯಾನ್‌ಕೋಡ್, ಡಿಸ್ಟ್ರೋ, ಹಬ್‌ಹಾಪರ್ ಮತ್ತು ರನ್ನ್ ಟಿವಿಯಂತಹ OTT ಗಳನ್ನು 450+ ಲೈವ್ ಟಿವಿ ಚಾನೆಲ್‌ಗಳು, ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಮತ್ತು ವೆಬ್ ಸರಣಿ ಪ್ರವೇಶಿಸಬಹುದು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement