ರೆಪೋ ದರ ಇಳಿಕೆ ಮಾಡಿದ ಆರ್ ಬಿಐ ; ಕಡಿಮೆ ಆಗಲಿದೆಯೇ ಸಾಲದ ಇಎಂಐ..?

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo Rate )ದಲ್ಲಿ ಇಳಿಕೆ ಮಾಡಿದೆ. ಕೋವಿಡ್ ಸಮಯದ ನಂತರ (ಮೇ 2020) ಇದು ಮೊದಲ ಬಡ್ಡಿದರ ಕಡಿತವಾಗಿದೆ. ನಂತರ ರೆಪೋ ದರದಲ್ಲಿ ಇಳಿಕೆಯಾಗಿದ್ದು, ಇದು ಮಧ್ಯಮ ವರ್ಗದ ಜನರಿಗೆ ನೆಮ್ಮದಿ ನೀಡಿದೆ. ಆರ್ ಬಿಐ ರೆಪೋ ದರವನ್ನು ಶೇಕಡಾ 0.25 ಪಾಯಿಂಟ್‌ಗಳಷ್ಟು ಇಳಿಕೆ ಮಾಡಿದ್ದು, ರೆಪೋ ದರ 6.50ರಿಂದ 6.25ಕ್ಕೆ ಇಳಿದಿದೆ. ಇದರಿಂದಾಗಿ ಶೀಘ್ರವೇ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಬ್ಯಾಂಕ್ ಬಡ್ಡಿ ದರ ಇಳಿಕೆಯಾದರೆ ವೈಯಕ್ತಿಕ ಸಾಲ, ಗೃಹ ಸಾಲ, ಕಾರ್ ಸಾಲದ ಇಎಂಐ ಸಹ ಕಡಿಮೆಯಾಗಲಿದೆ.
ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ಅವಿರೋಧವಾಗಿ ರೆಪೋ ದರವನ್ನು 25 ಬಿಪಿಎಸ್‌ ಪಾಯಿಂಟ್ಸ್‌ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಸಂಜಯ ಮಲ್ಹೋತ್ರಾ ಅವರು ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ ಶುಕ್ರವಾರ ಹೇಳಿದರು.
ಆರ್‌ಬಿಐನ ಮೂವರು ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಎಂಪಿಸಿ (MPC), ಕೊನೆಯದಾಗಿ ಮೇ 2020 ರಲ್ಲಿ ರೆಪೋ ದರವನ್ನು ಕಡಿಮೆ ಮಾಡಿತ್ತು ಮತ್ತು ನಂತರ 11 ನೀತಿ ಸಭೆಗಳಲ್ಲಿ ಅದನ್ನು ಬದಲಾಯಿಸದೆ ಇರಿಸಿತ್ತು. ಜಾಗತಿಕ ಆರ್ಥಿಕತೆಯು ಐತಿಹಾಸಿಕ ಸರಾಸರಿಗಿಂತ ಕಡಿಮೆ ಬೆಳವಣಿಗೆಯಲ್ಲಿದ್ದು, ಜಾಗತಿಕ ಆರ್ಥಿಕ ಹಿನ್ನೆಲೆಯು ಸವಾಲಿನಿಂದ ಕೂಡಿದೆ ಎಂದು ಮಲ್ಹೋತ್ರಾ ಹೇಳಿದರು.
ಆರ್ ಬಿಐ ರೆಪೋ ದರದಲ್ಲಿ ಇಳಿಕೆ ಮಾಡಿದೆ. ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಶೀಘ್ರವೇ ಕಡಿಮೆ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement