ರೆಪೋ ದರ ಹೆಚ್ಚಿಸಿದ ಆರ್‌ಬಿಐ : ಹೆಚ್ಚಳಕ್ಕೆ ಕಾರಣವೇನು? ಇದರಿಂದ ಸಾಲದ ಮೇಲಿನ ಇಎಂಐ ಹೆಚ್ಚಳವಾಗುವುದೇ…?

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಶೇ.5.50ಕ್ಕೆ ನಿಗದಿಪಡಿಸಿದೆ. 2023ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಐ ತನ್ನ ಬೆಂಚ್‌ಮಾರ್ಕ್ ಬಡ್ಡಿದರವನ್ನು ಹೆಚ್ಚಿಸಿದೆ. ಇದೇ ವೇಳೆ, ಹಣಕಾಸು ನೀತಿ ಸಮಿತಿ (MPC) ತನ್ನ ನಿಲುವನ್ನು ‘ತಟಸ್ಥ’ (Neutral)ದಿಂದ ‘ಕ್ಯಾಲಿಬ್ರೇಟೆಡ್ ಟೈಟನಿಂಗ್’ (Calibrated Tightening)ಗೆ ಬದಲಿಸಿದೆ. ಇದರೊಂದಿಗೆ … Continued

ಇಂಟರ್ನೆಟ್ ಇಲ್ದಿದ್ರೂ ಯುಪಿಐನಲ್ಲಿ ಈಗ ಹಣ ಪೇಯ್ಮೆಂಟ್‌ ಮಾಡ್ಬಹುದು : ಜಸ್ಟ್‌ ಫೋನ್ ಟ್ಯಾಪ್ ಮಾಡಿದ್ರೆ ಸಾಕು; ಅದು ಹೇಗೆ ಗೊತ್ತಾ?

ನವದೆಹಲಿ: ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಯುಪಿಐ (UPI) ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆಗೆ ಇದೀಗ ಹೊಸ ರೂಪ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಯುಪಿಐ ಟ್ಯಾಪ್‌ ಆಂಡ್‌ ಪೇ (‘UPI Tap and Pay) ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದ್ದು, ಎನ್‌ಎಫ್‌ಸಿ (NFC) ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್‌ಫೋನ್ ಬಳಸಿ ಎನ್‌ಎಫ್‌ಸಿ ಸೌಲಭ್ಯವಿರುವ ಪಾಯಿಂಟ್ ಆಫ್ … Continued

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರವಾನಗಿ ರದ್ದುಗೊಳಿಸಿದ ಆರ್‌ ಬಿಐ

ನವದೆಹಲಿ: ಪ್ರಮುಖ ನಿಯಂತ್ರಕ ಕ್ರಮವೊಂದರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ (Paytm Payments Bank) ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿದೆ. ಅಧಿಕೃತ ಹೇಳಿಕೆಯ ಮೂಲಕ ಈ ನಿರ್ಧಾರವನ್ನು ಖಚಿತಪಡಿಸಿರುವ ರಿಸರ್ವ್‌ ಬ್ಯಾಂಕ್, ಇನ್ನು ಮುಂದೆ ಪೇಟಿಎಂ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ. ನಿಯಂತ್ರಕ ಅನುಸರಣೆಗಳಲ್ಲಿನ ಗಂಭೀರ … Continued

ಆರ್‌ ಬಿಐನಿಂದ ರೆಪೋ ದರ ಕಡಿತ: ಗೃಹ ಸಾಲದ ಇಎಂಐ ಇಳಿಕೆ ನಿರೀಕ್ಷೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಬಡ್ಡಿ ದರವಾದ ರೆಪೋ ದರವನ್ನು 25 ಮೂಲಾಂಶಗಳಷ್ಟು (Basis Points) ಕಡಿತಗೊಳಿಸಿದೆ. ಇದರೊಂದಿಗೆ, ರೆಪೋ ದರವು ಶೇ. 5.5 ರಿಂದ ಶೇ. 5.25ಕ್ಕೆ ಇಳಿದಿದೆ ಎಂದು ಕೇಂದ್ರ ಬ್ಯಾಂಕ್‌ನ ಗವರ್ನರ್ ಸಂಜಯ ಮಲ್ಹೋತ್ರಾ ಅವರು ಇಂದು, ಶುಕ್ರವಾರ ಬೆಳಗ್ಗೆ ಪ್ರಕಟಿಸಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ … Continued

ದಾಖಲೆಯ 100 ಶತಕೋಟಿ ಡಾಲರ್ ಗಡಿ ದಾಟಿದ ಆರ್‌ ಬಿಐ ಕಾಯ್ದಿಟ್ಟ ಚಿನ್ನ…!

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಚಿನ್ನದ ಮೀಸಲು ಅಥವಾ ಕಾಯ್ದಿಟ್ಟ ಚಿನ್ನ ಮೊದಲ ಬಾರಿಗೆ 100 ಶತಕೋಟಿ ಡಾಲರ್ (ಸುಮಾರು $102.365 ಬಿಲಿಯನ್) ಗಡಿಯನ್ನು ದಾಟಿದೆ. ಇತ್ತೀಚಿನ ಆರ್‌ಬಿಐ ದತ್ತಾಂಶದ ಪ್ರಕಾರ, ಅಕ್ಟೋಬರ್ 10 ರಂದು ಕೊನೆಗೊಂಡ ವಾರದಲ್ಲಿ ದೇಶದ ಒಟ್ಟಾರೆ ವಿದೇಶಿ ವಿನಿಮಯ ಮೀಸಲು (Forex Reserves) $697.784 ಶತಕೋಟಿ … Continued

ಮೇ 1ರಿಂದ ಎಟಿಎಂನಿಂದ ಹಣ ವಿಥ್‌ ಡ್ರಾ ದುಬಾರಿ

ಮುಂಬೈ : ಬ್ಯಾಂಕುಗಳು ನಿಗದಿಪಡಿಸಿದ ಮಾಸಿಕ ಉಚಿತ ವಹಿವಾಟುಗಳ ಮಿತಿಗಳನ್ನು ಮೀರಿದ ಎಟಿಎಂ ನಗದು ಹಿಂಪಡೆಯುವಿಕೆಗೆ ಪ್ರತಿ ವಹಿವಾಟಿಗೆ ₹23 ವರೆಗಿನ ವರ್ಧಿತ ಶುಲ್ಕವನ್ನು ವಿಧಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಅನುಮತಿ ನೀಡಿದೆ. ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳನ್ನು ಒಳಗೊಂಡಂತೆ) … Continued

ರೆಪೋ ದರ ಇಳಿಕೆ ಮಾಡಿದ ಆರ್ ಬಿಐ ; ಕಡಿಮೆ ಆಗಲಿದೆಯೇ ಸಾಲದ ಇಎಂಐ..?

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo Rate )ದಲ್ಲಿ ಇಳಿಕೆ ಮಾಡಿದೆ. ಕೋವಿಡ್ ಸಮಯದ ನಂತರ (ಮೇ 2020) ಇದು ಮೊದಲ ಬಡ್ಡಿದರ ಕಡಿತವಾಗಿದೆ. ನಂತರ ರೆಪೋ ದರದಲ್ಲಿ ಇಳಿಕೆಯಾಗಿದ್ದು, ಇದು ಮಧ್ಯಮ ವರ್ಗದ ಜನರಿಗೆ ನೆಮ್ಮದಿ ನೀಡಿದೆ. ಆರ್ ಬಿಐ ರೆಪೋ ದರವನ್ನು ಶೇಕಡಾ 0.25 ಪಾಯಿಂಟ್‌ಗಳಷ್ಟು ಇಳಿಕೆ … Continued

ರೈತರಿಗೆ ಅಡಮಾನ ರಹಿತ ಕೃಷಿ ಸಾಲದ ಮೊತ್ತ ₹2ಲಕ್ಷಕ್ಕೆ ಹೆಚ್ಚಿಸಿದ ಆರ್‌ಬಿಐ ; ಜ.1ರಿಂದಲೇ ಜಾರಿ

ನವದೆಹಲಿ : ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದು ಮುಂಬರುವ ಜನವರಿಂದಲೇ 1ರಿಂದಲೇ ಜಾರಿಗೆ ಬರಲಿದೆ. ಈ ಮೊದಲು ಅಡಮಾನವಿಲ್ಲದೇ 1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ರಿಸರ್ವ್ ಬ್ಯಾಂಕ್‌ ಹೊಸ ನಿರ್ದೇಶನದ ಮೂಲಕ, ರಾಷ್ಟ್ರವ್ಯಾಪಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪಡೆಯುವ … Continued

ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

ಮುಂಬೈ : ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಆನ್‌ಲೈನ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ನಿರ್ಬಂಧ ಹೇರಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುವಂತೆ ಪದೇ ಪದೇ ಸೂಚಿಸಿದರೂ ಅದನ್ನು ಪಾಲಿಸದಿರುವುದಕ್ಕೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಕೋಟಕ್‌ ಮಹೀಂದ್ರಾ … Continued

ಶೀಘ್ರವೇ ಬ್ಯಾಂಕ್ ನೌಕರರ ವೇತನ ಶೇ.17ರಷ್ಟು ಹೆಚ್ಚಳ, ವಾರದಲ್ಲಿ 5 ದಿನ ಕೆಲಸಕ್ಕೆ ಒಪ್ಪಿಗೆ ಸಾಧ್ಯತೆ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರದ ಮೋದಿ ಸರ್ಕಾರ ಒಪ್ಪಿಗೆ ನೀಡಿದ ಒಂದು ದಿನದ ನಂತರ, ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು (Indian Banks’ Association and bank employee unions) ಶುಕ್ರವಾರ ಶೇ.17ರಷ್ಟು ವಾರ್ಷಿಕ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿವೆ. ಈ ಕ್ರಮದಿಂದ … Continued