
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ಭಯೋತ್ಪಾದಕರು ನಡೆಸಿದ ಶಂಕಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಜಮ್ಮು ಕಾಶ್ಮೀರದ ಭಟ್ಟಲ್ ಪ್ರದೇಶದ ಫಾರ್ವರ್ಡ್ ಪೋಸ್ಟ್ ಬಳಿ ಮಧ್ಯಾಹ್ನ 3:50ರ ಸುಮಾರಿಗೆ ಪ್ರಬಲ ಸ್ಫೋಟ ಸಂಭವಿಸಿದಾಗ ಗಸ್ತು ತಿರುಗುತ್ತಿದ್ದ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
X ನಲ್ಲಿನ ಪೋಸ್ಟ್ನಲ್ಲಿ, ಸೈನ್ಯದ ವೈಟ್ ನೈಟ್ ಕಾರ್ಪ್ಸ್ ಸಾವುನೋವುಗಳನ್ನು ದೃಢಪಡಿಸಿದೆ. “ವೈಟ್ ನೈಟ್ ಕಾರ್ಪ್ಸ್ ಇಬ್ಬರು ಧೀರ ಸೈನಿಕರ ಅತ್ಯುನ್ನತ ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ” ಎಂದು ಸೇನೆ ಹೇಳಿದೆ. ಸೈನಿಕರು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) “ಬೇಲಿ ಗಸ್ತು” ನಡೆಸುತ್ತಿದ್ದಾಗ ಐಇಡಿ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಸೇನೆ ಹೇಳಿದೆ.
ಸೋಮವಾರ, ರಜೌರಿ ಜಿಲ್ಲೆಯ ಎಲ್ಒಸಿ ಉದ್ದಕ್ಕೂ ಗುಂಡಿನ ದಾಳಿಯಿಂದ ಯೋಧ ತೀವ್ರವಾಗಿ ಗಾಯಗೊಂಡಿದ್ದರು. ನೌಶೇರಾ ಸೆಕ್ಟರ್ನ ಕಲಾಲ್ ಪ್ರದೇಶದ ಫಾರ್ವರ್ಡ್ ಪೋಸ್ಟ್ನಲ್ಲಿದ್ದ ಯೋಧನಿಗೆ ಬುಲೆಟ್ ಬಡಿದಿದೆ.



ನಿಮ್ಮ ಕಾಮೆಂಟ್ ಬರೆಯಿರಿ