ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರುದ್ಧದ ಕ್ರಮಕೈಗೊಳ್ಳುವ ಭಾಗವಾಗಿ ಎರಡನೇ ಸುತ್ತಿನ ಗಡೀಪಾರುಗಳಲ್ಲಿ, 119 ಅಕ್ರಮ ಭಾರತೀಯ ವಲಸಿಗರು ಶನಿವಾರ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಪಂಜಾಬ್‌ನ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಸಿ-17 ಅಮೆರಿಕ ಮಿಲಿಟರಿ ವಿಮಾನವು ಪಂಜಾಬ್‌ನಿಂದ 67, ಹರಿಯಾಣದಿಂದ 33, ಗುಜರಾತ್‌ನಿಂದ ಎಂಟು, ಉತ್ತರ ಪ್ರದೇಶದ ಮೂವರು, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ತಲಾ ಇಬ್ಬರು ಮತ್ತು ಗೋವಾ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ತಲಾ ಒಬ್ಬರನ್ನು ಹೊತ್ತು ತರಲಿದೆ.
ವಿಮಾನವು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ. ಎಲ್ಲಾ ಅಕ್ರಮ ವಲಸಿಗರನ್ನು ಆಯಾ ತಾಯ್ನಾಡಿಗೆ ಹಿಂತಿರುಗಿಸದವರೆಗೆ ಗಡೀಪಾರು ಪ್ರತಿ ವಾರವೂ ಮುಂದುವರಿಯುತ್ತದೆ ಎಂದು ಸುದ್ದಿ ವರದಿಯೊಂದು ತಿಳಿಸಿದೆ.
ಕಳೆದ ವಾರ 104 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಅಮೃತಸರಕ್ಕೆ ಅಮೆರಿಕದ ಮಿಲಿಟರಿ C-17 ಸಾರಿಗೆ ವಿಮಾನದಲ್ಲಿ ಅವರನ್ನು ಕಳುಹಿಸಲಾಗಿತ್ತು.
ಅಕ್ರಮ ವಲಸೆ, ಮಾನವ ಕಳ್ಳಸಾಗಣೆ ಕುರಿತು ಪ್ರಧಾನಿ ಮೋದಿ
ಅಕ್ರಮ ವಲಸೆ ಸೇರಿದಂತೆ ಹಲವು ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಲು ಟ್ರಂಪ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕದ ಭೇಟಿಯ ನಂತರ ಈ ಗಡೀಪಾರು ಬಂದಿದೆ.
ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ತನ್ನ ಪ್ರಜೆಗಳನ್ನು ಸ್ವೀಕಾರ ಮಾಡಲು ಭಾರತ ಸಿದ್ಧವಾಗಿದೆ ಎಂದು ದೃಢಪಡಿಸಿದರು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರಲ್ಲಿ ಹೆಚ್ಚಿನವರು ಸಾಮಾನ್ಯ ಕುಟುಂಬಗಳಿಂದ ಬಂದವರು, ಸಾಮಾನ್ಯವಾಗಿ ಮಾನವ ಕಳ್ಳಸಾಗಣೆದಾರರಿಂದ ಅವರು ದಾರಿ ತಪ್ಪುತ್ತಾರೆ ಎಂದು ಅವರು ಹೇಳಿದರು.
“ಅವರಿಗೆ ದೊಡ್ಡ ಕನಸುಗಳನ್ನು ತೋರಿಸಲಾಗುತ್ತದೆ ಮತ್ತು ಅವರಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸಿ ಇಲ್ಲಿಗೆ ಕರೆತರುತ್ತಾರೆ. ಆದ್ದರಿಂದ, ನಾವು ಈ ಸಂಪೂರ್ಣ ಮಾನವ ಕಳ್ಳಸಾಗಣೆ ವ್ಯವಸ್ಥೆಯ ಮೇಲೆಯೇ ಕ್ರಮಕ್ಕೆ ಮುಂದಾಗಬೇಕು. ಒಟ್ಟಾಗಿ, ಅಂತಹ ಪರಿಸರ ವ್ಯವಸ್ಥೆಯನ್ನು ಅದರ ಮೂಲದಿಂದ ನಾಶಮಾಡಬೇಕು. ಇದು ಅಮೆರಿಕ ಮತ್ತು ಭಾರತದ ಪ್ರಯತ್ನವಾಗಬೇಕು, ಇದರಿಂದ ಮಾನವ ಕಳ್ಳಸಾಗಣೆ ಕೊನೆಗೊಳ್ಳುತ್ತದೆ … ನಮ್ಮ ದೊಡ್ಡ ಹೋರಾಟವು ಇಡೀ ಪರಿಸರ ವ್ಯವಸ್ಥೆಯ ವಿರುದ್ಧವಾಗಿದೆ, ಮತ್ತು ಇದನ್ನು ಪೂರ್ಣಗೊಳಿಸಲು ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ಸಹಕರಿಸುತ್ತಾರೆ” ಎಂದು ಹೇಳಿದರು.
ಆದಾಗ್ಯೂ, ಗಡೀಪಾರು ಮಾಡಿದ ಭಾರತೀಯರನ್ನು ನಡೆಸಿಕೊಂಡಿರುವ ರೀತಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ ನಾಯಕರು ಕೇಂದ್ರದ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಇದೇ ವೇಳೆ ಗಡೀಪಾರು ಮಾಡುವವರಿಗೆ ಕೈಕೋಳ ಮತ್ತು ಸಂಕೋಲೆ ತೊಡಿಸಿರುವುದನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಸಮರ್ಥಿಸಿಕೊಂಡಿದೆ.
ಆದಾಗ್ಯೂ, ವಿಶೇಷವಾಗಿ ವಲಸೆ ಉಲ್ಲಂಘನೆಗಳನ್ನು ಮೀರಿ ಯಾವುದೇ ಅಪರಾಧಗಳನ್ನು ಮಾಡದ ಜನರಿಗೆ ಅಂತಹ ಕ್ರಮವು ವಿಪರೀತದ ಮತ್ತು ಅಮಾನವೀಯ ಕ್ರಮವಾಗಿದೆಎಂದು ಹಲವರು ವಾದಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ