ಶೀಶ್ ಮಹಲ್ ವಿವಾದ : ಅರವಿಂದ ಕೇಜ್ರಿವಾಲ್ ಹಿಂದಿನ ಬಂಗಲೆ ನವೀಕರಣ ಪ್ರಕರಣದ ತನಿಖೆಗೆ ಸಿವಿಸಿ ಆದೇಶ

ನವದೆಹಲಿ: ಸಿಪಿಡಬ್ಲ್ಯುಡಿ ಸಲ್ಲಿಸಿದ ವಾಸ್ತವ ವರದಿಯ ಆಧಾರದ ಮೇಲೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ, 6 ಫ್ಲಾಗ್‌ಸ್ಟಾಫ್ ಬಂಗಲೆಯ ನವೀಕರಣದ ಕುರಿತು ಕೇಂದ್ರ ಜಾಗೃತ ಆಯೋಗ(Central Vigilance Commission)ವು ತನಿಖೆಗೆ ಆದೇಶಿಸಿದೆ.
6 ಫ್ಲಾಗ್‌ಸ್ಟಾಫ್ ಬಂಗಲೆಯ ಬಂಗಲೆ ನವೀಕರಣದ ತನಿಖೆಗೆ ಫೆಬ್ರವರಿ 13 ರಂದು ಆದೇಶ ನೀಡಲಾಯಿತು. ಕೇಂದ್ರ ಲೋಕೋಪಯೋಗಿ ಇಲಾಖೆ (CPWD) “40,000 ಚದರ ಮೀಟರುಗಳ (8 ಎಕರೆ) ವಿಸ್ತೀರ್ಣದಲ್ಲಿ ಅದ್ದೂರಿ ಭವನವನ್ನು ನಿರ್ಮಿಸಲು ಕಟ್ಟಡದ ನಿಯಮಗಳನ್ನು ಉಲ್ಲಂಘಿಸಲಾಗಿದೆ” ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿತು ಮತ್ತು ಕೇಂದ್ರ ಜಾಗೃತ ಆಯೋಗ(CVC)ಕ್ಕೆ ವಾಸ್ತವ ವರದಿಯನ್ನು ಸಲ್ಲಿಸಿತು.
ನವೀಕರಿಸಿದ ಬಂಗಲೆಯು ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸವಾಗಿತ್ತು, ಅವರು 2015 ರಿಂದ ಅಕ್ಟೋಬರ್ 2024 ರವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಲಿದ್ದರು. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಭವನವನ್ನು ಖಾಲಿ ಮಾಡಿದರು.

ಬಿಜೆಪಿಯು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ನಾಲ್ಕು ಆಸ್ತಿಗಳನ್ನು ‘ಶೀಶ್ ಮಹಲ್’ ಜೊತೆ ವಿಲೀನಗೊಳಿಸುವುದನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ ಕೆಲವೇ ದಿನಗಳಲ್ಲಿ ಇದು ಬಂದಿದೆ.
ಕೇಜ್ರಿವಾಲ್ ಅವರ ನಿವಾಸ ‘ಶೀಶ್ ಮಹಲ್’ ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಭ್ರಷ್ಟಾಚಾರದ ವಿಷಯಗಳ ಕುರಿತು ಆಪ್ ಮತ್ತು ಅವರ ಮುಖ್ಯಸ್ಥರ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್‌ ಬಳಸಿದ ಪ್ರಮುಖ ರಾಜಕೀಯ ಅಸ್ತ್ರವಾಗಿತ್ತು.
ಹೊಸ ಚುನಾಯಿತ ಬಿಜೆಪಿ ಶಾಸಕ ವಿಜೇಂದರ ಗುಪ್ತಾ ಅವರು ನಾಲ್ಕು ಸರ್ಕಾರಿ ಆಸ್ತಿಗಳನ್ನು ವಿಲೀನಗೊಳಿಸುವ ಮೂಲಕ ಬಂಗಲೆಯನ್ನು ವಿಸ್ತರಿಸುತ್ತಿದ್ದಾರೆ ಎಂದು ಹೇಳಿದರು, ಅದನ್ನು ರದ್ದುಗೊಳಿಸುವಂತೆ ಎಲ್‌ಜಿಗೆ ಪತ್ರ ಬರೆದಿದ್ದಾರೆ.
ಎಎಪಿ ಮುಖ್ಯಸ್ಥರು ಪಕ್ಕದ ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಬಂಗಲೆಯನ್ನು “ಅತಿ ಐಷಾರಾಮಿ ‘ಶೀಶ್ ಮಹಲ್’ ಆಗಿ ಪರಿವರ್ತಿಸಿದ್ದಾರೆ ಎಂದು ಗುಪ್ತಾ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
” ಪ್ರಮಾಣಿತ ಅಧಿಕೃತ ನಿವಾಸವನ್ನು 50,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತಾರವಾದ ಅದ್ದೂರಿ ಸಂಕೀರ್ಣವಾಗಿ ಪರಿವರ್ತಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement