ತಿರುವನಂತಪುರಂ: ವ್ಯಕ್ತಿಯೊಬ್ಬ ಪಕ್ಕದ ಮನೆಯ ಹುಂಜವೊಂದು ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಅದರ ವಿರುದ್ಧ ಆರ್‌ಡಿಒನಲ್ಲಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್(Viral ) ಆಗುತ್ತಿದೆ.
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾಕೃಷ್ಣ ಕುರುಪ್ ಎಂಬವರು ಮುಂಜಾನೆ 3 ಗಂಟೆಗೆ ಪಕ್ಕದ ಮನೆಯವರ ಹುಂಜ ಕೂಗುತ್ತಾ ಕಿರಿಕಿರಿ ಮಾಡುತ್ತಿದೆ. ಇದರಿಂದ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಇದು ತನ್ನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂದು ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್‌ಡಿಒ) ದೂರು ನೀಡಿದ್ದಾರೆ. ಆರ್‌ಡಿಒ ಅಧಿಕಾರಿಗಳು ನಂತರ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ನೆರೆಮನೆಯವನು ಹುಂಜವನ್ನು ಮನೆಯ ಮೇಲಿನ ಮಹಡಿಯಲ್ಲಿ ಇರಿಸಿದ್ದನಂತೆ. ಹೀಗಾಗಿ ಮುಂಜಾನೆ ಕೂಗಿದ ತಕ್ಷಣ ಕುರುಪ್‌ಗೆ ನಿದ್ರಾಭಂಗವಾಗುತ್ತಿತ್ತು. ಕುರುಪ್‌ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, 14 ದಿನಗಳಲ್ಲಿ ಹುಂಜವನ್ನು ಮೇಲಿನ ಮಹಡಿಯಿಂದ ಸ್ಥಳಾಂತರಿಸಬೇಕು ಕೋಳಿ ಶೆಡ್ ಅನ್ನು ಸ್ಥಳಾಂತರಿಸುವಂತೆ ನೆರೆಮನೆಯಾತನಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ