ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಡಾ.ಎ.ವಿ. ಬಾಳಿಗಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ನಡೆಯುತ್ತಿದ್ದು ಮಕ್ಕಳ ಪ್ರತಿಭೆ ಅನಾವರಣ ಗೊಂಡಿದೆ.
ಪ್ರಾಥಮಿಕ ಶಾಲಾ ಮಕ್ಕಳಿಂದ ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಭಾಷಾ ಜ್ಞಾನದ ಮೇಲೆ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವೈಜ್ಞಾನಿಕ ವಿಷಯದ ಮೇಲೆನ ವಸ್ತು ಪ್ರದರ್ಶನ ಮಾಡಿದ್ದಾರೆ. ಸಾಂಪ್ರದಾಯಿಕ ಮತ್ತು ಆಧುನಿಕ ವಸ್ತುಗಳನ್ನು ಬಳಸಿಕೊಂಡು ಮಾದರಿಗಳನ್ನು ತಯಾರಿಸಲಾಗಿದೆ. ವಸ್ತು ಪ್ರದರ್ಶದಲ್ಲಿ ಮಾನವನ ಎಲುಬಿನ ರಚನೆ, ಸೋಲಾರ್ ಸಿಸ್ಟಮ್, ಸಾಂಪ್ರದಾಯಿಕ ಬೀಸುವಕಲ್ಲು, ತಾಜಮಹಲ್, ಹಂಪಿಯ ಅರಮನೆ, ರಥ, ಮೈಸೂರು ಅರಮನೆ ಇತ್ಯಾದಿಗಳು ಹೆಚ್ಚು ಆಕರ್ಷಕ ವಾಗಿದ್ದವು.
ವಿದ್ಯಾರ್ಥಿಗಳ ಪ್ರತಿಭೆಗೆ ಶಿಕ್ಷಣಾಧಿ ಕಾರಿ ಆರ್. ಎಲ್. ಭಟ್ಟ, ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ಡಿ. ಎಂ. ಕಾಮತ ಮತ್ತು ಕಾರ್ಯಧ್ಯಕ್ಷರಾದ ಹನುಮಂತ ಶಾನಭಾಗ ಶ್ಲಾಘಿಸಿದ್ದಾರೆ.
ವಸ್ತು ಪ್ರದರ್ಶನದಲ್ಲಿ ರಾಸಾಯನ ಶಾಸ್ತ್ರ, ಭೌತ ಶಾಸ್ತ್ರ ಮತ್ತು ಗಣಿತದ ಮೇಲೆ ಸಂಶೋಧನಾತ್ಮಕ ಮಾದರಿಗಳಲ್ಲಿ ಕಂಡುಬರುವ ಮುಂದಿನ ಪೀಳಿಗೆಯ ದೃಷ್ಟಿಕೋನವು ಬೆರಗುಗೊಳಿಸುವಂತಿದೆ.
ಸತತವಾಗಿ 8 ದಿನಗಳ ಕಾಲ ನಡೆಯುವ ಈ ವಸ್ತು ಪ್ರದರ್ಶನ ವೀಕ್ಷಿಸಿದ ತಾಲೂಕಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಇದೊಂದು ಅಪರೂಪದ ವೈಜ್ಞಾನಿಕ ವಸ್ತು ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಸ್ತು ಪ್ರದರ್ಶನವನ್ನು ಬಾಳಿಗಾ ವಿದ್ಯಾಲಯದ ಮುಖ್ಯದ್ಯಾಪಾಕಿ ಶ್ರೀಮತಿ ಜಯಲಕ್ಷ್ಮೀ ಮತ್ತು ಶಿಕ್ಷಕ ವೃಂದದವರು ಸಂಘಟಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ