ವೀಡಿಯೊ…| ಬಾಲಿವುಡ್ ಸಿನೆಮಾ ಶೈಲಿಯಲ್ಲಿ ನೂತನ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅಭಿನಂದಿಸಿದ ಅಮೆರಿಕ ಶ್ವೇತಭವನದ ಉಪಮುಖ್ಯಸ್ಥ…!

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗ ಹಾಗೂ ಭಾರತೀಯ ಮೂಲದ ಕಶ್ಯಪ (ಕಾಶ್) ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರಾಗಿದ್ದಾರೆ. ರಿಪಬ್ಲಿಕನ್ ನಿಯಂತ್ರಿತ ಅಮೆರಿಕದ ಸೆನೆಟ್ ಗುರುವಾರ 51-49 ಮತಗಳಿಂದ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಅನುಮೋದಿಸಿತು. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ ಡಾನ್ ಸ್ಕ್ಯಾವಿನೊ ಅವರು ಎಫ್‌ಬಿಐ ನಿರ್ದೇಶಕರಾಗಿ ನೇಮಕಗೊಂಡ ಕಾಶ್ ಪಟೇಲ್‌ ಅವರಿಗೆಗೆ ಬಾಲಿವುಡ್ ಶೈಲಿಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಾಯಕ ಮತ್ತು ಶ್ವೇತಭವನದ ಉಪ ಮುಖ್ಯಸ್ಥರಾದ ಡಾನ್ ಸ್ಕ್ಯಾವಿನೋ ಅವರು ನಟ ರಣವೀರ್ ಸಿಂಗ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಹಾಡನ್ನು ಎಕ್ಸ್‌ನಲ್ಲಿ ಡ್ಯಾನ್ಸ್ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

ಈ ಕ್ಲಿಪ್‌ ನಲ್ಲಿ ನಟ ರಣವೀರ್‌ ಸಿಂಗ್ ಅವರ ಮುಖದ ಬದಲಿಗೆ  ಕಾಶ್ಪ‌ ಟೇಲ್ ಅವರ ಮುಖವನ್ನು ಜೋಡಿಸಲಾಗಿದೆ. “ಎಫ್‌ಬಿಐ ನ ಹೊಸ ನಿರ್ದೇಶಕ ಕಾಶ್‌ ಪಟೇಲ್ ಅವರಿಗೆ ಅಭಿನಂದನೆಗಳು” ಎಂದು‌ ಸ್ಕಾವಿನೋ ಅವರು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. 47 ಸೆಕೆಂಡುಗಳ ಕ್ಲಿಪ್ 35 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಹಾಗೂ 20 ಸಾವಿರಕ್ಕೂ ಹೆಚ್ಚು ಜನರು ಮರುಟ್ವೀಟ್ ಮಾಡಿದ್ದಾರೆ.
ರಿಪಬ್ಲಿಕನ್ ನೇತೃತ್ವದ ಯುಎಸ್ ಸೆನೆಟ್ ಪಟೇಲ್ ಅವರನ್ನು 51-49 ರ ಮತಗಳಲ್ಲಿ ಅವರ ನಾಮನಿರ್ದೇಶನವನ್ನು ದೃಢಪಡಿಸಿತು, ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳಾದ ಲಿಸಾ ಮುರ್ಕೋವ್ಸ್ಕಿ ಮತ್ತು ಸುಸಾನ್ ಕಾಲಿನ್ಸ್ ಾವರು ಡೆಮಾಕ್ರಟ್‌ಗಳಂತೆಯೇ ಟ್ರಂಪ್ ಅವರ ನಾಮನಿರ್ದೇಶನದ ವಿರುದ್ಧ ಮತ ಚಲಾಯಿಸಿದರು.

ದೃಢೀಕರಣದ ಸ್ವಲ್ಪ ಸಮಯದ ನಂತರ, ಪಟೇಲ್ ಅವರು ಅಧ್ಯಕ್ಷ ಟ್ರಂಪ್ ಮತ್ತು ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಗುಜರಾತಿ ದಂಪತಿಗೆ 1980 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದ ಕಶ್ಯಪ ಪಟೇಲ್ ಪೂರ್ವ ಆಫ್ರಿಕಾದಲ್ಲಿ ಬೆಳೆದರು. ಅವರು ಲಾಂಗ್ ಐಲ್ಯಾಂಡ್‌ನ ಗಾರ್ಡನ್ ಸಿಟಿ ಹೈಸ್ಕೂಲ್‌ನಿಂದ ಪದವಿ ಪಡೆದರು. ಅವರು ಯುನೈಟೆಡ್ ಕಿಂಗ್‌ಡಮ್‌ನ ಯೂನಿವರ್ಸಿಟಿ ಕಾಲೇಜ್ ಲಂಡನ್ ಫ್ಯಾಕಲ್ಟಿ ಆಫ್ ಲಾ ನಿಂದ ಕಾನೂನು ಪದವಿ ಪಡೆದರು.
ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ಹೌಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿ ಆನ್ ಇಂಟೆಲಿಜೆನ್ಸ್ (HPSCI) ಯ ಹಿರಿಯ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement