ಬೆಳಗಾವಿ : ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಕೆಲವು ಮರಾಠಿ ಭಾಷಿಕರು ಹಲ್ಲೆ ನಡೆಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇದು ರಾಜಕೀಯ ಪ್ರೇರಿತವಾದದ್ದು, ಕೂಡಲೇ ಈ ಕೇಸನ್ನು ವಾಪಸ್ ಪಡೆಯಬೇಕೆಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ಮಾಡುತ್ತಿದೆ. ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರಕ್ಕೆ ತೆರಳುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಕೊಲ್ಲಾಪುರದಲ್ಲಿ ಶಿವಸೇನೆಯುವರು ಪ್ರತಿಭಟನೆ ನಡೆಸಿ ರಾಜ್ಯದ ಬಸ್ಸಿಗೆ ಕಪ್ಪು ಬಣ್ಣ ಬಳಿದ ನಂತರ ಈ ಮಾರ್ಗವಾಗಿ ಪ್ರತಿದಿನ ಸುಮಾರು 120 ಬಸ್‌ಗಳು ಸಂಚಾರ ಮಾಡುತ್ತಿದ್ದವು. ಭಾನುವಾರ ಸಂಜೆ ನಂತರ ಪರಿಸ್ಥಿತಿ ನೋಡಿಕೊಂಡು ಸಾರಿಗೆ ಇಲಾಖೆ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಪೊಲೀಸರ ಸೂಚನೆ ಮೇರೆಗೆ ಕರ್ನಾಟಕ ಗಡಿವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. .
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಎಲ್ಲ ಬಸ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಚಿತ್ರದುರ್ಗದ ಬಳಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್ ತಡೆದು ಬಸ್ ಹಾಗೂ ಚಾಲಕನ ಮುಖಕ್ಕೆ ಮಸಿ ಬಳಿದ ಆರೋಪಗಳು ಕೇಳಿಬಂದ ನಂತರ ಮಹಾರಾಷ್ಟ್ರವು ಕರ್ನಾಟಕಕ್ಕೆ ಬರುವ ಎಲ್ಲ ಬಸ್‌ಗಳನ್ನೂ ಸ್ಥಗಿತಗೊಳಿಸಿದೆ. ಕೊಲ್ಲಾಪುರ ಮಾರ್ಗವಾಗಿ ದಿನವೂ ಮಹಾರಾಷ್ಟ್ರ ಸಾರಿಗೆಯ 30 ಬಸ್‌ಗಳ ರಾಜ್ಯಕ್ಕೆ ಬರುತ್ತಿದ್ದವು.ಅ
ನಿಮ್ಮ ಕಾಮೆಂಟ್ ಬರೆಯಿರಿ