ಮೈ ಜುಂ ಎನ್ನುವ ವೀಡಿಯೊ…| ಕುಸಿದ ಸುರಂಗದ ಒಳಗೆ ಸಿಕ್ಕಿಬಿದ್ದ 8 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿ

ಹೈದರಾಬಾದ್: ತೆಲಂಗಾಣದಲ್ಲಿ ಶನಿವಾರ ಕುಸಿದು ಬಿದ್ದ ಸುರಂಗದ ಒಂದು ಭಾಗದದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದು, ರಕ್ಷಣಾ ಕಾರ್ಯಕರ್ತರು ಸುರಂಗದೊಳಗೆ ಹೋಗಿ ಸಿಕ್ಕಿಬಿದ್ದ ಕಾರ್ಮಿಕರ ಹೆಸರನ್ನು ಕರೆಯುತ್ತಿರುವ ದೃಶ್ಯಾವಳಿಗಳ ವೀಡಿಯೊ ಹೊರಹೊಮ್ಮಿದೆ. ನಾಗರ್‌ಕರ್ನೂಲ್‌ನಲ್ಲಿ ಸುರಂಗ ಶನಿವಾರ ಕುಸಿದಿದ್ದು, ಕನಿಷ್ಠ ಎಂಟು ಕಾರ್ಮಿಕರು ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಉನ್ನತ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಸುರಂಗ ಕೊರೆಯುವ ಯಂತ್ರವನ್ನು ತರಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಯ ತಂಡವು ಕುಸಿತಕ್ಕೆ ಸುರಂಗದ ಪ್ರವೇಶ ಬಂದ್‌ ಆಗಿದ್ದರಿಂದ ಮ್ಯಾಂಗಲ್ಡ್ ರಚನೆಯಿಂದ ಆಚೆಗೆ ದಾರಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು, ರಕ್ಷಣಾ ತಂಡವು ಶನಿವಾರ ರಾತ್ರಿ ಸುರಂಗದೊಳಗೆ ಹೋಗಿದ್ದು, ಇಂಜಿನ್‌ನಲ್ಲಿ 11 ಕಿಮೀ ಮತ್ತು ಬೆಲ್ಟ್‌ನಲ್ಲಿ 2 ಕಿಮೀ ಕನ್ವೇಯರ್ ಕ್ರಮಿಸಿದೆ ಎಂದು ಹೇಳಿದ್ದಾರೆ.

“ನಾವು ಸುರಂಗ ಕೊರೆಯುವ ಯಂತ್ರದ ತುದಿಯನ್ನು ತಲುಪಿದಾಗ, ನಾವು ಅವರ (ಕಾರ್ಮಿಕರ) ಹೆಸರುಗಳನ್ನು ಹಿಡಿದು ಕರೆದಿದ್ದೇವೆ, ಆದರೆ ಉತ್ತರ ಬರಲಿಲ್ಲ ಎಂದು ಅವರು ಹೇಳಿದರು. ಸುರಂಗದ ಕೊನೆಯ 2 ಕಿಮೀ ವಿಸ್ತಾರ ಪ್ರದೇಶವು ನೀರಿನಿಂದ ತುಂಬಿದೆ ಮತ್ತು ಅದನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿದ ನಂತರ ಮುಂದಿನ ಮಾರ್ಗೋಪಾಯಗಳ ಬಗ್ಗೆ ಹೆಜ್ಜೆ ಇಡಬೇಕಿದೆ ಎಂದು ಹೇಳಿದ್ದಾರೆ.
44-ಕಿಮೀ ಉದ್ದದ ಸುರಂಗವು ನಾಗರ್‌ಕರ್ನೂಲ್ ಮತ್ತು ನಲ್ಗೊಂಡ ಜಿಲ್ಲೆಗಳಿಗೆ ನೀರನ್ನು ಒದಗಿಸುವ ನೀರಾವರಿ ಯೋಜನೆಯಾದ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದ ಯೋಜನೆಯಾಗಿದೆ. ಸುರಂಗ ಕುಸಿದಾಗ, ಅನೇಕ ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಸುರಂಗ ಕೊರೆಯುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ. ನಿರ್ಮಾಣವನ್ನು ಜೇಪೀ ಅಸೋಸಿಯೇಟೆಡ್ ಗ್ರೂಪ್ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

https://x.com/i/status/1893520077208854567

ವಿಪತ್ತು ನಿರ್ವಹಣಾ ಪಡೆಗಳು ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಲ್ಲಿ ನಿರತವಾಗಿವೆ, ಆದರೆ ಸುರಂಗದಲ್ಲಿ 200-300 ಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ನೀರಿನೊಂದಿಗೆ ಕೆಸರು ಸೇರಿಕೊಂಡಿರುವುದರಿಂದ ಪ್ರಮುಖ ಸವಾಲು ಎದುರಾಗಿದೆ.
ಸುರಂಗದ ಗೋಡೆಯ ಬದಿಯಲ್ಲಿ ಮಣ್ಣು ಬಿರುಕು ಬಿಟ್ಟಿದ್ದು, ಅಲ್ಲಿಂದ ನೀರು ಹರಿದು ಬರುತ್ತಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೂ ಮುನ್ನ ನೀರು ಖಾಲಿ ಮಾಡಬೇಕಿದೆ ಎಂದು ಸರ್ಕಾರದ ವರದಿ ಹೇಳಿದೆ. ಬಂಡೆಗಳ ಸ್ಥಳಾಂತರದ ಶಬ್ದವು ಕುಸಿದ ಸ್ಥಳದಲ್ಲಿ ಛಾವಣಿಯು ಅಸ್ಥಿರವಾಗಿದೆ ಎಂದು ಸೂಚಿಸುತ್ತದೆ ಎಂದು ಅದು ಹೇಳಿದೆ.
ಎನ್‌ಡಿಆರ್‌ಎಫ್‌ನ ಕನಿಷ್ಠ ನಾಲ್ಕು ತಂಡಗಳು ತೆರಳುತ್ತಿದ್ದು, ರಾಜ್ಯ ಸಿಬ್ಬಂದಿ ತಂಡ ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಸ್ಥಿತಿಯನ್ನು ಹಗಲಿರುಳು ಗಮನಿಸಲಾಗುತ್ತಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಶನಿವಾರ ಪರಿಶೀಲನೆ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ನೀರಾವರಿ ಸಚಿವ ಎನ್ ಉತ್ತಮಕುಮಾರ ಅವರು ಸುರಂಗದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ರಾಜ್ಯ ಸಲಹೆಗಾರ (ನೀರಾವರಿ) ಆದಿತ್ಯನಾಥ ದಾಸ್ ಮತ್ತು ಮುಖ್ಯಮಂತ್ರಿಗಳ ಸಲಹೆಗಾರ ವೆಂ.ನರೇಂದ್ರ ರೆಡ್ಡಿ ಉಪಸ್ಥಿತರಿದ್ದರು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಜಾಗರೂಕರಾಗಿರಲು ಮುಖ್ಯಮಂತ್ರಿ ರೇವಂತ ರೆಡ್ಡಿ ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

ಪ್ರಧಾನಿ ಮೋದಿಯಿಂದ ಎಲ್ಲ ನೆರವಿನ ಭರವಸೆ
ತೆಲಂಗಾಣದ ಶ್ರೀಶೈಲಂ ಸುರಂಗ ಕಾಲುವೆಯಲ್ಲಿ ಸಿಲುಕಿರುವ ಎಂಟು ಕಾರ್ಮಿಕರನ್ನು ರಕ್ಷಿಸುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದು ಸಾಧ್ಯವಿರುವ ಎಲ್ಲ ಅಗತ್ಯ ನೆರವನ್ನು ನೀಡುವ ಭರವಸೆ ನೀಡಿದ್ದಾರೆ. ‘ಪ್ರಧಾನಿ ಮೋದಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಗೆ ದೂರವಾಣಿ ಕರೆ ಮಾಡಿ ಸುರಂಗದಲ್ಲಿ ಸಿಲುಕಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿದರು, ರಕ್ಷಣಾ ಕಾರ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡುವುದಾಗಿ ಭರವಸೆ ನೀಡಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement