90 ರ ದಶಕದ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ತಮ್ಮ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಮುಂದಾಗಿದ್ದಾರೆಯೇ..? ಹೀಗೆಂದು ಕೆಲವು ವರದಿಗಳು ಹೇಳಿವೆ. ಆದರೆ ದಂಪತಿ ಸುದ್ದಿಯನ್ನು ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ.
ಆದರೆ ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಸುನೀತಾ ಅಹುಜಾ ಇತ್ತೀಚೆಗೆ ಮಾಧ್ಯಮವೊಂದರ ಮುಂದೆ, ಗೋವಿಂದ ಅವರು ಸಭೆಗಳು ಮತ್ತು ಔತಣಕೂಟಗಳ ನಂತರ ತಡವಾಗಿ ಬರುವುದರಿಂದ ಹೆಚ್ಚಾಗಿ ಪ್ರತ್ಯೇಕವಾಗಿ ವಾಸಿಸುತ್ತಾರೆ ಎಂದು ಹೇಳಿಕೊಂಡಿದ್ದರು. ನಮಗೆ ಎರಡು ಮನೆಗಳಿವೆ, ನಮ್ಮ ಅಪಾರ್ಟ್ಮೆಂಟ್ ಹಾಗೂ ಅದರ ಎದುರು ನಮ್ಮ ಬಂಗಲೆ ಇದೆ. ನಾನು ಮಕ್ಕಳು ಫ್ಲಾಟ್‌ನಲ್ಲಿ ವಾಸಿಸುತ್ತೇವೆ, ಗೋವಿಂದ ಬಂಗಲೆಯಲ್ಲಿ ವಾಸಿಸುತ್ತಾರೆ ಎಂದು ಹೇಳಿದ್ದರು.
ಪರಿಶೀಲಿಸದ ಮೂಲಗಳ ಪ್ರಕಾರ, ಕೆಲವೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿಭಿನ್ನ ಜೀವನಶೈಲಿಯು ಅವರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಗಿದೆ. ಸುನೀತಾ ಇತ್ತೀಚೆಗೆ ಹಲವಾರು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಗೋವಿಂದ ಗೈರುಹಾಜರಾಗಿದ್ದಾರೆ. ದಿ ನೌ ಇಂಡಿಯಾದ ವರದಿಯು ಅವರ ದಾಂಪತ್ಯವು ವಿಚ್ಛೇದನದ ಸನಿಹದಲ್ಲಿದೆ ಎಂದು ಹೇಳಿದೆ. ಆದರೆ ಗೋವಿಂದ ಹಾಗೂ ಸನಿತಾ ಅಹುಜಾ ಅವರಿಂದ ಇದಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ.
ಆದರೆ, ನಟ ಗೋವಿಂದ ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಪ್ರತಿಕ್ರಿಯಿಸಿ, ಕುಟುಂಬದ ಕೆಲವು ಸದಸ್ಯರು ನೀಡಿದ ಕೆಲವು ಹೇಳಿಕೆಗಳಿಂದಾಗಿ ದಂಪತಿಗಳ ನಡುವೆ ಸಮಸ್ಯೆಗಳಿವೆ. ಆದರೆ ಅಂತಹ ಸಮಸ್ಯೆ ಇಲ್ಲ ಮತ್ತು ಗೋವಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ವಿವಾಹವಾಗಿದ್ದರು
ನಿಮ್ಮ ಕಾಮೆಂಟ್ ಬರೆಯಿರಿ