ಶ್ರೀಮಂತ ವಲಸಿಗರಿಗೆ ಅಮೆರಿಕ ಪೌರತ್ವಕ್ಕೆ ನೀಡಲು ‘ಗೋಲ್ಡ್ ಕಾರ್ಡ್’ ಯೋಜನೆ ಪ್ರಕಟಿಸಿದ ಅಧ್ಯಕ್ಷ ಟ್ರಂಪ್‌; ಇದರ ಬೆಲೆ ಕೇಳಿದ್ರೆ….!

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುತ್ತಿರುವ ಬೆನ್ನಲ್ಲೇ ಹೊಸದೊಂದು ನೀತಿ ಜಾರಿಗೊಳಿಸಲು ಮುಂದಾಗಿದ್ದು, ಶ್ರೀಮಂತ ವಲಸಿಗರಿಗೆ ಅಮೆರಿಕದ ಪೌರತ್ವ ನೀಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಭಾರೀ ಮೊತ್ತದ ಹಣವನ್ನು ತೆರಬೇಕಿದೆ.
ಟ್ರಂಪ್‌ ಅವರು ಗೋಲ್ಡ್‌ ಕಾರ್ಡ್‌(Gold Cards) ಪೌರತ್ವ ನೀತಿ ಜಾರಿಗೆ ತರಲು ಮುಂದಾಗಿದ್ದು, ಆದರೆ ಇದನ್ನು ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಶ್ರೀಮಂತ ವಲಸಿಗರು ಅಮೆರಿಕ ಪೌರತ್ವ ಪಡೆಯಲು ಈ ಗೋಲ್ಡ್‌ ಕಾರ್ಡ್‌ಗೆ $5 ಮಿಲಿಯನ್‌(43.5 ಕೋಟಿ ರೂ). ಹಣ ನೀಡಬೇಕಾಗುತ್ತದೆ. ಅಮೆರಿಕ ಪೌರತ್ವ ಪಡೆಯಲು‌ ವಿದೇಶಿಗರಿಗೆಇದು ಒಂದು ಅವಕಾಶ ಎಂದು ಹೇಳಿರುವ ಟ್ರಂಪ್, ಮುಂಬರುವ ದಿನಗಳಲ್ಲಿ 10 ಲಕ್ಷ ಕಾರ್ಡ್‌ಗಳು ಮಾರಾಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಕ್ರಮದಿಂದ ದೇಶದ ಸಾಲವನ್ನು ತ್ವರಿತವಾಗಿ ಪಾವತಿಸಬಹುದು ಎಂದು ಹೇಳಿರುವ ಟ್ರಂಪ್‌ ವಿದೇಶಿ ಹೂಡಿಕೆದಾರರು ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ “ಇಬಿ-5” ವಲಸೆ ಹೂಡಿಕೆದಾರರ ವೀಸಾವನ್ನು ರದ್ದುಗೊಳಿಸಿ ಅದರ ಬದಲು ಗೋಲ್ಡ್ ಕಾರ್ಡ್‌ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇಬಿ-5 ಯೋಜನೆಯು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತಿದೆ. ಇದೀಗ ನಾವು ಪರಿಚಯಿಸುತ್ತಿರುವ ಗೋಲ್ಡ್‌ ಕಾರ್ಡ್‌ಗೆ ಸುಮಾರು 43.5 ಕೋಟಿ ರೂ. ಬೆಲೆಯನ್ನು ನಾವು ನಿಗದಿಪಡಿಸಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡಲಿದೆ. ಹಾಗೂ ಪೌರತ್ವಕ್ಕೆ ಒಂದು ಮಾರ್ಗವಾಗಲಿದೆ ಮತ್ತು ಶ್ರೀಮಂತರು ಈ ಕಾರ್ಡ್ ಖರೀದಿಸುವ ಮೂಲಕ ನಮ್ಮ ದೇಶಕ್ಕೆ ಬರುತ್ತಾರೆ ಅವರು ಶ್ರೀಮಂತರಾಗುತ್ತಾರೆ ಮತ್ತು ಅವರು ಯಶಸ್ವಿಯಾಗುತ್ತಾರೆ ಮತ್ತು ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಸಾಕಷ್ಟು ತೆರಿಗೆಗಳನ್ನು ಪಾವತಿಸುತ್ತಾರೆ ಮತ್ತು ಬಹಳಷ್ಟು ಜನರಿಗೆ ಉದ್ಯೋಗ ನೀಡುತ್ತಾರೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಅಲ್ಲದೆ, ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳು ಎರಡು ವಾರಗಳಲ್ಲಿ ಹೊರಬರುತ್ತವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement