ಜೈಪುರ: ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಅವರ ಸಮ್ಮುಖದಲ್ಲಿ ಬಿಜೆಪಿಯ ಇಬ್ಬರು ನಾಯಕರು ಹೊಡೆದಾಡಿಕೊಂಡಿದ್ದು, ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುರುವಾರ ನಡೆದಿದೆ.
ಬಿಜೆಪಿ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ಇಬ್ಬರು ಬಿಜೆಪಿ ನಾಯಕರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಇಬ್ಬರು ನಾಯಕರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಇಬ್ಬರ ನಡುವೆ ಜಗಳ ನಡೆಯುತ್ತಿದ್ದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸಬೇಕಾಯಿತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಭೆ ಆರಂಭಕ್ಕೂ ಮುನ್ನ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ವೇದಿಕೆ ಏರಲು ಜಗಳ
ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಮದನ್ ರಾಥೋಡ್ ಸಭೆಗೆ ಆಗಮಿಸುತ್ತಿದ್ದಂತೆ, ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ನಾಯಕ ಜಾಕಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ವೇದಿಕೆಗೆ ಕರೆದೊಯ್ದರು. ಆದಾಗ್ಯೂ, ಜಾಕಿ ವೇದಿಕೆಯತ್ತ ಹೆಜ್ಜೆ ಹಾಕಲು ಪ್ರಯತ್ನಿಸಿದಾಗ, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾವೇದ್ ಖುರೇಷಿ ಅವರನ್ನು ತಡೆದರು.
ಇದರಿಂದ ಕೋಪಗೊಂಡ ಜಾಕಿ ಅವರು ಜಾವೇದ್ ಅವರಿಗೆ ಕಪಾಳಮೋಕ್ಷ ಮಾಡಿದರು. ಇಬ್ಬರು ನಾಯಕರಾದ ಜಾವೇದ್ ಖುರೇಷಿ ಮತ್ತು ಜಾಕಿ ಎಲ್ಲಾ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಕೊರಳಪಟ್ಟಿಗಳನ್ನು ಹಿಡಿದುಕೊಂಡು ಎಳೆದಾಡಿಕೊಂಡರು ಪರಸ್ಪರ ಕಪಾಳಮೋಕ್ಷ ಮಾಡಿದರು. ನಂತರ ಬಿಜೆಪಿಯ ಇತರ ನಾಯಕರು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸುವ ಮೊದಲು ಇಬ್ಬರೂ ಸುಮಾರು 30 ರಿಂದ 40 ಸೆಕೆಂಡುಗಳ ಕಾಲ ಜಗಳವಾಡಿದರು. ಮತ್ತು ತಲೆಯಿಂದ ಹೊಡೆದರು. ರಾಜ್ಯ ಮಟ್ಟದ ಸಭೆಯಲ್ಲಿ ಉಭಯ ನಾಯಕರು ಘರ್ಷಣೆ ಮಾಡುವುದನ್ನು ಇತರರು ಆಘಾತದಿಂದ ವೀಕ್ಷಿಸಿದರು.
ವೀಡಿಯೊ ಏನು ತೋರಿಸುತ್ತದೆ..?
ಇಬ್ಬರು ನಾಯಕರಾದ ಜಾವೇದ್ ಖುರೇಷಿ ಮತ್ತು ಜಾಕಿ ಪರಸ್ಪರ ತಲೆಯಿಂದ ಡಿಚ್ಚಿ ಹೊಡೆದುಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ. ಇದಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ರಾಜ್ಯ ಮಟ್ಟದ ಬಿಜೆಪಿ ಕಾರ್ಯಕ್ರಮದ ವೇಳೆ ಈ ಘಟನೆ ನಡೆದ ನಂತರ ಬಿಜೆಪಿ ನಾಯಕರು ಒಮ್ಮೆಗೇ ಅವಾಕ್ಕಾಗಿದ್ದು, ನಂತರ ಇಬ್ಬರು ನಾಯಕರನ್ನು ಪ್ರತ್ಯೇಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ