ಮಧುರೈ (ತಮಿಳುನಾಡು): ಸೋಮವಾರ ಮುಂಜಾನೆ ಮಧುರೈ ನಗರದ ಸೆಲ್ಲೂರ್ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಿ ಮೂರು ಆಟೋ ರಿಕ್ಷಾಗಳು, ಹಲವಾರು ಮೋಟಾರ್‌ಸೈಕಲ್‌ಗಳು, ಕಾರು ಸೇರಿದಂತೆ ಸುಮಾರು 25 ವಾಹನಗಳು, ಸೈನ್‌ಬೋರ್ಡ್‌ಗಳು ಮತ್ತು ಕಟ್ಟಡದ ಒಂದು ಭಾಗವನ್ನು ಜಖಂಗೊಳಿಸಿರುವ ವಿಲಕ್ಷಣ ಘಟನೆ ನಡೆದಿದೆ.
ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಲು ಆರಂಭಿಸಿದ ಬಾಲಕ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು, ಕಟ್ಟಡವೊಂದರ ಒಂದು ಭಾಗ ಮತ್ತು ಕೆಲವು ಸೂಚನಾ ಫಲಕಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಧ ಗಂಟೆ ಕಾಲ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಬಾಲಕನನ್ನು ಕೆಲ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೋಮವಾರ ಮುಂಜಾನ 2:30 ರ ಸುಮಾರಿಗೆ, ಬಾಲಕ ಜೆಸಿಬಿ ಚಲಾಯಿಸಲು ಪ್ರಾರಂಭಿಸಿದ್ದಾನೆ ಮತ್ತು 50 ಅಡಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ಆಟೋ ರಿಕ್ಷಾಗಳು, ಬೈಕುಗಳು, ಗೂಡ್ಸ್ ರಿಕ್ಷಾಗಳು ಮತ್ತು ಕಾರು ಸೇರಿದಂತೆ ಅನೇಕ ನಿಲುಗಡೆ ವಾಹನಗಳಿಗೆ ಡಿಕ್ಕೆ ಹೊಡೆಸಿದ್ದಾನೆ.
ಈತನ ವಿಧ್ವಂಸಕ ಹುನ್ನಾರ ಅಲ್ಲಿಗೇ ನಿಲ್ಲಲಿಲ್ಲ; ಆತ ಕಟ್ಟಡದ ಒಂದು ಭಾಗವನ್ನು ಮತ್ತು ಕೆಲವು ಸೈನ್‌ಬೋರ್ಡ್‌ಗಳಿಗೂ ಹಾನಿಗೊಳಿಸಿದ್ದಾನೆ ಮತ್ತು ಭದ್ರತಾ ಸಿಬ್ಬಂದಿಗೂ ಗಾಯವಾಗಿದೆ. ಅದೃಷ್ಟವಶಾತ್ ಸ್ಥಳೀಯರು ಮಧ್ಯ ಪ್ರವೇಶಿಸಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಹಿಂಸಾತ್ಮಕ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಬಾಲಕ ಮದ್ಯ ಸೇವನೆ ಮಾಡಿದ್ದನೇ ಅಥವಾ ಮಾದಕ ವ್ಯಸನಿಯಾಗಿದ್ದನೇ ಎಂದು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ