ಸಿಧಿ : ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಪತ್ನಿಯನ್ನು ಕೊಂದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗನ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿ ಅಜ್ಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಹ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭಯರಾಜಯಾದವ್ (34) ಎಂದು ಗುರುತಿಸಲಾದ ವ್ಯಕ್ತಿ ಶುಕ್ರವಾರ ತನ್ನ ಪತ್ನಿ ಸವಿತಾ ಯಾದವ್ (30) ಅವರನ್ನು ಕೊಂದ ನಂತರ ನೇಣು ಬಿಗಿದುಕೊಂಡಿದ್ದಾನೆ. ಅದೇ ದಿನ ಸಂಜೆ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಗಾಯತ್ರಿ ತಿವಾರಿ ತಿಳಿಸಿದ್ದಾರೆ.
ಮೊಮ್ಮಗ ಅಭಯರಾಜ ಸಾವು ಅವರ ಅಜ್ಜ, ರಾಮಾವತಾರ ಅವರಿಗೆ ಆಘಾತವನ್ನುಂಟು ಮಾಡಿದೆ. ಶನಿವಾರ ಬೆಳಗ್ಗೆ ಅಜಯರಾಜ ಅಂತ್ಯಕ್ರಿಯೆ ವೇಳೆ ಅಜ್ಜ ರಾಮಾವತಾರ ಕೂಡ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಅವರ ಸುಟ್ಟ ದೇಹವು ಚಿತೆಯ ಮೇಲೆ ಕಂಡುಬಂದಿದೆ ಎಂದು ಅವರು ಹೇಳಿದರು.
ಸವಿತಾ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಕೊಲೆ ಮತ್ತು ನಂತರದ ಆತ್ಮಹತ್ಯೆ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ