ಚಾಂಪಿಯನ್ಸ್‌ ಟ್ರೋಫಿ ಭಾರತ-ನ್ಯೂಜಿಲೆಂಡ್ ಫೈನಲ್‌ ; 5,000 ಕೋಟಿ ರೂ. ಬೆಟ್ಟಿಂಗ್‌, ಭೂಗತ ಜಗತ್ತಿನೊಂದಿಗೆ ನಂಟು

ನವದೆಹಲಿ: ಭಾನುವಾರ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ 5,000 ಕೋಟಿ ರೂಪಾಯಿಗಳ ಬೆಟ್ಟಿಂಗ್ ಕಟ್ಟಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಯೊಂದು ಹೇಳಿದೆ.
ಭಾರತವು ಅಂತಾರಾಷ್ಟ್ರೀಯ ಬುಕ್ಕಿಗಳ ನೆಚ್ಚಿನ ತಂಡವಾಗಿದೆ, ಅನೇಕ ಬುಕ್ಕಿಗಳು ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.
ಪ್ರತಿ ದೊಡ್ಡ ಪಂದ್ಯದ ಸಮಯದಲ್ಲಿ ದುಬೈನಲ್ಲಿ ದೊಡ್ಡ ಬುಕ್ಕಿಗಳು ಸೇರುತ್ತಾರೆ. ದಾವೂದ್ ಇಬ್ರಾಹಿಂನ ‘ಡಿ ಕಂಪನಿ’ ಗ್ಯಾಂಗ್ ದುಬೈನಲ್ಲಿ ನಡೆಯುವ ದೊಡ್ಡ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿ ವೇಳೆ ದೆಹಲಿ ಪೊಲೀಸರ ಅಪರಾಧ ವಿಭಾಗದಿಂದ ಕನಿಷ್ಠ ಐವರು ದೊಡ್ಡ ಬುಕ್ಕಿಗಳನ್ನು ಬಂಧಿಸಲಾಗಿದೆ. ಅವರು ಸೆಮಿಫೈನಲ್‌ನಲ್ಲಿ ಪಂದ್ಯಗಳ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದರು. ಒಂದು ಪ್ರಕರಣದಲ್ಲಿ, ಭಾರತ-ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬೆಟ್ಟಿಂಗ್ ಮಾಡಿದ ಇಬ್ಬರು ಬುಕ್ಕಿಗಳನ್ನು ಪರ್ವೀನ್ ಕೊಚಾರ್ ಮತ್ತು ಸಂಜಯಕುಮಾರ ಎಂದು ಗುರುತಿಸಲಾಗಿದೆ.

ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಲೈವ್ ಬೆಟ್ಟಿಂಗ್‌ಗಳಲ್ಲಿ ತೊಡಗಿಕೊಂಡಿದ್ದಾಗ ಇಬ್ಬರೂ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬೆಟ್ಟಿಂಗ್‌ಗೆ ಬಳಸುತ್ತಿದ್ದ ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರ್ವೀನ್ ಕೊಚ್ಚಾರ್‌ ಅವರು ಲಕ್ಕಿ ಡಾಟ್ ಕಾಮ್ ಎಂಬ ಬೆಟ್ಟಿಂಗ್ ವೆಬ್‌ಸೈಟ್‌ನಿಂದ ಮಾಸ್ಟರ್ ಐಡಿಯನ್ನು ಖರೀದಿಸಿದ್ದ. ಅದನ್ನು ಬಳಸಿ ಬೆಟ್ಟಿಂಗ್ ಐಡಿಗಳನ್ನು ರಚಿಸಿದ್ದ ಮತ್ತು ಅವುಗಳನ್ನು ಪಂಟರ್‌ಗಳಿಗೆ ಮಾರಾಟ ಮಾಡಿದ್ದ. ಸಿಂಡಿಕೇಟ್ ಪ್ರತಿ ವಹಿವಾಟಿನ ಮೇಲೆ 3 ಪ್ರತಿಶತ ಕಮಿಷನ್ ವಿಧಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆಫ್‌ಲೈನ್ ಬೆಟ್ಟಿಂಗ್‌ಗಾಗಿ, ಆರೋಪಿಗಳು ಫೋನ್ ಕರೆಗಳನ್ನು ಬಳಸುತ್ತಿದ್ದರು ಮತ್ತು ಬೆಟ್ಟಿಂಗ್ ದರಗಳನ್ನು ಅವಲಂಬಿಸಿ ನೋಟ್‌ಪ್ಯಾಡ್‌ನಲ್ಲಿ ನಮೂದುಗಳನ್ನು ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಟ್ಟಿಂಗ್ ದಂಧೆ ನಡೆಸಲು ಪರ್ವೀನ್ ಕೊಚ್ಚಾರ್‌ ತಿಂಗಳಿಗೆ 35,000 ರೂ.ಗಳಿಗೆ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಎಂದು ಮೂಲಗಳು ತಿಳಿಸಿವೆ. ಪ್ರತಿ ಪಂದ್ಯದ ದಿನ 40,000 ರೂ.ಗಳ ಲಾಭ ಗಳಿಸಿದ್ದ. ವಿಚಾರಣೆಯ ಸಮಯದಲ್ಲಿ, ಈ ಸಂಪೂರ್ಣ ನೆಟ್ವರ್ಕ್ ಅನ್ನು ದುಬೈನಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದ್ದಾನೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಬೆಟ್ಟಿಂಗ್ ಸಿಂಡಿಕೇಟ್‌ಗಳ ಮೇಲೆ ಕಡಿವಾಣ ದೆಹಲಿ ಪೊಲೀಸರ ಅಪರಾಧ ವಿಭಾಗವು ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಐವರು ಪ್ರಮುಖ ಬುಕ್ಕಿಗಳನ್ನು ಈಗಾಗಲೇ ಬಂಧಿಸಿದೆ, ಸೆಮಿಫೈನಲ್ ಪಂದ್ಯಗಳಲ್ಲಿ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದೆ. ಅವರ ವಿಚಾರಣೆಯು ತನಿಖಾಧಿಕಾರಿಗಳನ್ನು ದುಬೈಗೆ ಕರೆದೊಯ್ದಿತು, ಅಲ್ಲಿ ದೊಡ್ಡ ಜಾಲವು ಕಾರ್ಯನಿರ್ವಹಿಸುತ್ತದೆ. ದೆಹಲಿಯಿಂದ ಬಂಧಿತರಾದವರಲ್ಲಿ ಮೂವರು ದುಬೈನೊಂದಿಗೆ ಸಂಪರ್ಕ ಹೊಂದಿದ್ದಾರೆ. ಇವರಿಂದ ₹22 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement