
ಬೆಳಗಾವಿ : ಬೆಳಗಾವಿ ಜಿಲ್ಲೆ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ಕುಡಿದು ಗಲಾಟೆ ಮಾಡುವ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕುಡಿದು ಬಂದು ಜಗಳವಾಡುತ್ತಿದ್ದ ಕಿರಿಯ ಮಗನನ್ನು ತಂದೆ ಹಾಗೂ ಹಿರಿಯ ಮಗನ ಜೊತೆ ಸೇರಿ ಹತ್ಯೆ ಮಾಡಿದ ಘಟನೆ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. ಮಂಜುನಾಥ ಉಳ್ಳಾಗಡ್ಡಿ (25 ) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕುಡಿದು ಬಂದು ನಿತ್ಯವೂ ತಂದೆ- ತಾಯಿ ಜೊತೆ ಮಂಜುನಾಥ ಜಗಳವಾಡುತ್ತಿದ್ದನಂತೆ. ಕೊಲೆಯಾದವನ ನಿಶ್ಚಿತಾರ್ಥ ಸಹಾ ನಡೆದಿತ್ತು ಎನ್ನಲಾಗಿದೆ. ಸೇನೆಯಲ್ಲಿದ್ದ ಮಂಜುನಾಥನ ಅಣ್ಣ ಗುರುಬಸಪ್ಪ ತಮ್ಮನ ಮದುವೆ ಮಾಡಲೆಂದು ಬಂದಿದ್ದನಂತೆ. ಆದರೆ ಶನಿವಾರ ರಾತ್ರಿಯೂ ಮಂಜುನಾಥ ಕುಡಿದು ಬಂದು ತಂದೆ-ತಾಯಿಯೊಂದಿಗೆ ಜಗಳವಾಡಿದ್ದಾನೆ. ತಂದೆ-ತಾಯಿ, ಅಣ್ಣ ಬುದ್ಧಿವಾದ ಹೇಳಿದ್ದಾರೆ. ಆಗ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಜಗಳ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಮಂಜುನಾಥನಿಗೆ ಕಲ್ಲು ಹಾಗೂ ಇಟ್ಟಿಗೆಯಿಂದ ತಂದೆ ನಾಗಪ್ಪ ಹಾಗೂ ಹಿರಿಯ ಮಗ ಗುರುಬಸಪ್ಪ ಜಜ್ಜಿದ್ದಾರೆ. ತೀವ್ರವಾಗಿ ಗಾಯಗೊಂಡ ಆತ ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದಾನೆ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
.



ನಿಮ್ಮ ಕಾಮೆಂಟ್ ಬರೆಯಿರಿ