ಜಸ್ಟಿನ್ ಟ್ರುಡೊ ಬದಲಿಗೆ ಕೆನಡಾದ ಪ್ರಧಾನಿ ಹುದ್ದೆಗೆ ಮಾರ್ಕ್ ಕಾರ್ನಿ ಆಯ್ಕೆ ಮಾಡಿದ ಲಿಬರಲ್ ಪಕ್ಷ

ಒಟ್ಟಾವಾ (ಕೆನಡಾ) : ಕೆನಡಾದ ಲಿಬರಲ್ ಪಕ್ಷವು ಭಾನುವಾರ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಮಾರ್ಕ್ ಕಾರ್ನಿ ಅವರನ್ನು ಆಯ್ಕೆ ಮಾಡಿದೆ. ಅಂತಿಮ ಲೆಕ್ಕಾಚಾರದ ಪ್ರಕಾರ ಲಿಬರಲ್ ಪಕ್ಷದ ನಾಯಕತ್ವದ ಮತದಲ್ಲಿ 59 ವರ್ಷದ ಕಾರ್ನಿ ಅವರು 85.9 ಪ್ರತಿಶತ ಮತಗಳನ್ನು ಗೆದ್ದಿದ್ದಾರೆ, .
ಕಾರ್ನಿ ಮುಂದಿನ ದಿನಗಳಲ್ಲಿ ಪ್ರಧಾನಿ ಹುದ್ದೆ ತ್ಯಜಿಸಲಿರುವ ಪಕ್ಷದ ನಾಯಕ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ಅವರ ದೀರ್ಘಕಾಲದವರೆಗೆ ಇಲ್ಲದೇ ಇರಬಹುದು. ಯಾಕೆಂದರೆ ಕೆನಡಾದಲ್ಲಿ ಅಕ್ಟೋಬರ್‌ ವೇಳೆಗೆ ಚುನಾವಣೆ ನಡೆಯಬೇಕಿದೆ. ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾಡಿದ ತನ್ನ ವಿಜಯ ಭಾಷಣದಲ್ಲಿ, ಅಮೆರಿಕದ ಟ್ರಂಪ್ ಆಡಳಿತವು ಕೆನಡಾದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತದೆ. ವನ್ನು ಈ ಪ್ರಯತ್ನವನ್ನು ಸೋಲಿಸಬೇಕು ಎಂದು ಕಾರ್ನಿ ಹೇಳಿದ್ದಾರೆ.
“ಅಮೆರಿಕವು ನಮ್ಮ ಸಂಪನ್ಮೂಲಗಳು, ನಮ್ಮ ನೀರು, ನಮ್ಮ ಭೂಮಿ, ನಮ್ಮ ದೇಶವನ್ನು ಬಯಸುತ್ತದೆ” ಎಂದು ಪ್ರಧಾನಿ ಹುದ್ದೆಗೆ ಆಯ್ಕೆಯಾದ ನಂತರ ಕಾರ್ನೆ ಒಟ್ಟಾವಾದಲ್ಲಿ ಹೇಳಿದ್ದಾರೆ. ಟ್ರಂಪ್ “ಕೆನಡಾದ ಕೆಲಸಗಾರರು, ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ನಾವು ಅದನ್ನು ಯಶಸ್ವಿಯಾಗಲು ಬಿಡಲಾರೆವು ಎಂದು ಹೇಳಿದ್ದಾರೆ.
ಈ ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡನ್ನೂ ಕಾರ್ನಿ ಮುನ್ನಡೆಸಿದ್ದರು. ಲಿಬರಲ್ ನಾಯಕತ್ವದ ಓಟಕ್ಕೆ ಪ್ರವೇಶಿಸಿದಾಗಿನಿಂದ, ಟ್ರಂಪ್ ಅವರ ದಾಳಿಯ ವಿರುದ್ಧ ಕೆನಡಾವನ್ನು ರಕ್ಷಿಸಲು ಕಾರ್ನಿ ಅವರು ಅತ್ಯುತ್ತಮ ಅಭ್ಯರ್ಥಿ ಎಂದು ಟ್ರುಡೊ ಸಮರ್ಥಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement