ಚಿನ್ನ ಕಳ್ಳಸಾಗಣೆ ಪ್ರಕರಣ : ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ, 10-15 ಬಾರಿ ಕಪಾಳಮೋಕ್ಷ ; ರನ್ಯಾ ರಾವ್ ಆರೋಪ

ಬೆಂಗಳೂರು: ತನಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಮತ್ತು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ನಟಿ ರನ್ಯಾ ರಾವ್ ಹೇಳಿದ್ದಾರೆ.
ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಯ ಹೆಚ್ಚುವರಿ ಮಹಾನಿರ್ದೇಶಕರಿಗೆ (ಎಡಿಜಿ) ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ರನ್ಯಾ ರಾವ್ ಅವರು, ಅಧಿಕೃತವಾಗಿ ಹೇಳಿದಂತೆ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಅಲ್ಲ, ವಿಮಾನದಿಂದ ನೇರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಯಿತು. ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಯಿತು ಮತ್ತು ಅಧಿಕಾರಿಗಳು 10 ರಿಂದ 15 ಬಾರಿ ಕಪಾಳಮೋಕ್ಷ ಮಾಡಿದರು ಎಂದು ಆರೋಪಿಸಿದ್ದಾರೆ. ಆಹಾರ ಸೇವಿಸಲು ಮತ್ತು ನಿದ್ದೆ ಮಾಡಲು ಅವಕಾಶ ನೀಡಲಿಲ್ಲ. ಬಲವಂತವಾಗಿ ಖಾಲಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
ಆದರೆ ಈ ಪತ್ರದ ಕುರಿತು ಕಾರಾಗೃಹ ಇಲಾಖೆ ಅಧಿಕಾರಿಗಳು ಖಚಿತಪಡಿಸಿಲ್ಲ. ಬೆಂಗಳೂರಿನ ವಿಶೇಷ ನ್ಯಾಯಾಲಯ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಒಂದು ದಿನದ ನಂತರ ಆಕೆಯ ಆರೋಪ ಹೊರಬಿದ್ದಿದೆ. ಕಾನೂನು ಜಾರಿ ಅಧಿಕಾರಿಗಳಿಂದ ಸಂಭವನೀಯ ಲೋಪಗಳ ಬಗ್ಗೆ ಕರ್ನಾಟಕ ಸರ್ಕಾರಿ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ದುಬೈನಿಂದ 14 ಕೆಜಿಗೂ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಬಂಧಿಸಿತ್ತು. ಆದಾಗ್ಯೂ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಆಕೆ ಬರೆದ ಪತ್ರದಲ್ಲಿ, ಅಧಿಕೃತ ವರದಿಗಳಿಗೆ ವ್ಯತಿರಿಕ್ತವಾಗಿ ಲ್ಯಾಂಡ್‌ ಆಗುವ ಮೊದಲು ತನ್ನನ್ನು ವಿಮಾನದೊಳಗೆ ಬಂಧಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ತನಗೆ ಅನೇಕ ಬಾರಿ ಕಪಾಳಮೋಕ್ಷ ಮಾಡಲಾಗಿದೆ, ತನ್ನ ತಂದೆಯ ಗುರುತನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲಾಗಿದೆ ಮತ್ತು ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ರನ್ಯಾ ಹೇಳಿದ್ದಾರೆ.
ಆದರೆ ಈ ಆರೋಪ ಪ್ರಶ್ನಾರ್ಹವಾಗಿದೆ. ರನ್ಯಾ ರಾವ್ ಮಾರ್ಚ್ 6 ರಂದು ಪತ್ರ ಬರೆದಿದ್ದಾರೆ. ಮಾರ್ಚ್ 9 ರಂದು ಅವರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶರು ಅವರಿಗೆ ಮೂರು ಬಾರಿ ಕಸ್ಟಡಿಯಲ್ಲಿ ಚಿತ್ರಹಿಂಸೆ ಇದೆಯೇ ಎಂದು ಕೇಳಿದ್ದಾರೆ ಮತ್ತು ಅವರು ಅದನ್ನು ಮೂರು ಬಾರಿಯೂ ನಿರಾಕರಿಸಿದ್ದಾರೆ. ಆಕೆಯ ವಕೀಲರು ಯಾವುದೇ ಚಿತ್ರಹಿಂಸೆ ಆರೋಪಗಳನ್ನು ಪ್ರಸ್ತಾಪಿಸಲಿಲ್ಲ. ಶುಕ್ರವಾರ, ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ರನ್ಯಾ ರಾವ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement