ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ : ಅಕ್ರಮ ಬೆಟ್ಟಿಂಗ್, ಜೂಜು ಮತ್ತು ಕ್ಯಾಸಿನೊ ಆಪ್‌ಗಳನ್ನು ಉತ್ತೇಜಿಸಿ ಸಾರ್ವಜನಿಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಲ್ಲಿ ಟಾಲಿವುಡ್ ನಟರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಸೇರಿದಂತೆ 25 ಜನರ ವಿರುದ್ಧ ತೆಲಂಗಾಣದ ಸೈಬರಾಬಾದ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ 25 ಮಂದಿಯಲ್ಲಿ ಖ್ಯಾತ ತೆಲುಗು ನಟರಾದ ರಾಣಾ ದಗ್ಗುಬಾಟಿ, ಪ್ರಕಾಶರಾಜ (ಪ್ರಕಾಶ ರೈ), ವಿಜಯ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಮತ್ತು ನಿಧಿ ಅಗರ್ವಾಲ್ ಸೇರಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿ 1 ಮತ್ತು ಆರೋಪಿ 2, ರಾಣಾ ದಗ್ಗುಬಾಟಿ ಮತ್ತು ಪ್ರಕಾಶ ರಾಜ ಪಾಪ್-ಅಪ್ ಜಾಹೀರಾತುಗಳ ಮೂಲಕ ಜಂಗ್ಲಿ ರಮ್ಮಿಯನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ ದೇವರಕೊಂಡ ಅವರು A23 ರಮ್ಮಿ, ಮಂಚು ಲಕ್ಷ್ಮಿ ಯೋಲೋ 247, ಪ್ರಣೀತಾ ಫೇರ್‌ಪ್ಲೇ ಲೈವ್ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಅನ್ನು ಪಾಪ್-ಅಪ್ ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದ್ದಾರೆ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ʼವಂದೇ ಮಾತರಂ'ಗೆ ಅವಮಾನಿಸಿದರೆ ಜೈಲು ಶಿಕ್ಷೆ: ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳು 318(4) [ವಂಚನೆ] ಮತ್ತು 112 (ಸಣ್ಣ ಸಂಘಟಿತ ಅಪರಾಧ), 49 (ಪ್ರಚೋದನೆ), ತೆಲಂಗಾಣ ರಾಜ್ಯ ಗೇಮಿಂಗ್ ಆಕ್ಟ್ (TSGA) ವಿಭಾಗಗಳು 3, 3(A) ಮತ್ತು 4 (ಸಾಮಾನ್ಯ ಗೇಮಿಂಗ್ ಹೌಸ್); ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ ಸೆಕ್ಷನ್ 66(ಡಿ) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
“ಈ ಪ್ಲಾಟ್‌ಫಾರ್ಮ್‌ಗಳು ಸಾರ್ವಜನಿಕರನ್ನು, ವಿಶೇಷವಾಗಿ ಹಣದ ಅವಶ್ಯಕತೆ ಇರುವ ಜನರು, ತಮ್ಮ ಕಷ್ಟಪಟ್ಟು ಸಂಪಾದಿಸಿದ ಮತ್ತು ಕುಟುಂಬದ ಹಣವನ್ನು ಆ ಅಪ್ಲಿಕೇಶನ್‌ಗಳು/ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ನಿಧಾನವಾಗಿ ಅವುಗಳಿಗೆ ವ್ಯಸನಿಯಾಗಲು ಪ್ರೋತ್ಸಾಹಿಸುತ್ತಿವೆ, ಇದು ಸಂಪೂರ್ಣ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ” ಎಂದು ಎಫ್‌ಐಆರ್ ಹೇಳಿದೆ.
ಹಲವಾರು ಬೆಟ್ಟಿಂಗ್ ಆ್ಯಪ್‌ಗಳನ್ನು ಪಟ್ಟಿ ಮಾಡುತ್ತಾ, ಎಫ್‌ಐಆರ್‌ನಲ್ಲಿ, “ಮೇಲಿನ ಎಲ್ಲಾ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಜೂಜಿನ ಕಾನೂನುಗಳು ಮತ್ತು ನಿಬಂಧನೆಗಳನ್ನು ನೇರವಾಗಿ ಉಲ್ಲಂಘಿಸುತ್ತಿವೆ, ವಿಶೇಷವಾಗಿ 1867 ರ ಸಾರ್ವಜನಿಕ ಜೂಜಿನ ಕಾಯಿದೆ, ಈ ವ್ಯಸನಕಾರಿ ಸುಲಭ ಹಣ ಸಂಪಾದಿಸುವ ಕಾರ್ಯವಿಧಾನವನ್ನು ಪ್ರೋತ್ಸಾಹಿಸುವ ಮೂಲಕ ವ್ಯಕ್ತಿಗಳು ಮತ್ತು ಸಮಾಜಕ್ಕೆ ಹಾನಿಯನ್ನುಂಟುಮಾಡುತ್ತದೆ, ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement