ರುಂಡ ತುಂಡರಿಸಲಾಗಿದೆ…ಕೈ ಕತ್ತರಿಸಲಾಗಿದೆ…ಕಾಲುಗಳು ಹಿಂದಕ್ಕೆ ಬಾಗಿವೆ…ಹೃದಯಕ್ಕೆ 3 ಬಾರಿ ಇರಿತ : ಗಂಡನ ಕ್ರೂರವಾಗಿ ಕೊಂದ ಪತ್ನಿ-ಪ್ರಿಯಕರ..!

ನವದೆಹಲಿ: ಮರ್ಚೆಂಟ್ ನೇವಿ ಅಧಿಕಾರಿ ಸೌರಭ ರಜಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರನ್ನು ಎಷ್ಟು ಕ್ರೂರವಾಗಿ ಕೊಲ್ಲಲಾಗಿದೆ ಮತ್ತು ಅವರ ದೇಹವನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಹೇಗೆ ತುಂಡುಗಳಾಗಿ ಕತ್ತರಿಸಿದ್ದಾರೆ ಎಂಬ ವಿವರಗಳನ್ನು ಬಹಿರಂಗಪಡಿಸಿದೆ. ಇಬ್ಬರನ್ನೂ ಈಗ ಬಂಧಿಸಲಾಗಿದೆ.
ಇಬ್ಬರೂ ಆರೋಪಿಗಳು ಮಾರ್ಚ್ 4 ರಂದು ಸೌರಭ ಸಾಯುವ ವರೆಗೂ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಮೊದಲು ತಿಳಿಸಿದ್ದರು. ಸೌರಭಗೆ ಮಾದಕ ದ್ರವ್ಯ ನೀಡಿದ ಪತ್ನಿ ಮುಸ್ಕಾನ್ ನಂತರ ಆಕೆ ಹಾಗೂ ಪ್ರಿಯಕರ ಆತನನ್ನು ಇರಿದು ಕೊಂದಿದ್ದಾರೆ ಎನ್ನಲಾಗಿದೆ. ಇಬ್ಬರು ಸೇರಿ ಸೌರಭ ಅವರ ದೇಹವನ್ನು ಕತ್ತರಿಸಿದರು ಮತ್ತು ಕತ್ತರಿಸಿದ ತುಂಡುಗಳನ್ನು ಡ್ರಮ್ಮಿನೊಳಗೆ ಸಿಮೆಂಟ್‌ ತುಂಬಿ ಮುಚ್ಚಿದ್ದರು. ಅದೇ ರಾತ್ರಿ ಅವರು ಕ್ಯಾಬ್ ಬುಕ್ ಮಾಡಿ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೊರಟರು. ಅವರು ಸೌರಭ್ ಫೋನ್‌ನಿಂದ ಸಂದೇಶಗಳನ್ನು ಕಳುಹಿಸುವ ಮೂಲಕ ತಮ್ಮ ಹಾಗೂ ಆತನ ಕುಟುಂಬದವರ ದಾರಿ ತಪ್ಪಿಸಿದರು.ಮಾರ್ಚ್ 18 ರಂದು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ತತ್ತರ ; ಬುಲ್ಡೋಜರ್‌ ನಲ್ಲಿ ಪರಿಸ್ಥಿತಿ ವೀಕ್ಷಿಸಿದ ಶಾಸಕ

ಶವಪರೀಕ್ಷೆ ವರದಿಯ ವಿವರಗಳು
29 ವರ್ಷದ ಸೌರಭ ತಲೆಯನ್ನು ಅವರ ದೇಹದಿಂದ ಬೇರ್ಪಡಿಸಲಾಗಿದೆ, ಎರಡೂ ಕೈಗಳನ್ನು ಮಣಿಕಟ್ಟಿನ ಬಳಿ ಕತ್ತರಿಸಲಾಗಿದೆ. ಶವಪರೀಕ್ಷೆ ವರದಿಯ ಪ್ರಕಾರ, ಅವರ ಕಾಲುಗಳು ಸಹ ಹಿಂದಕ್ಕೆ ಬಾಗಿದ್ದವು, ಇಬ್ಬರೂ ದೇಹವನ್ನು ಡ್ರಮ್‌ನಲ್ಲಿ ಅದುಮಿಡಲು ಪ್ರಯತ್ನಿಸಿದ್ದಾರೆ ಎಂದು ಸೂಚಿಸುತ್ತದೆ. ಆಘಾತ ಮತ್ತು ಅತಿಯಾದ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಸೌರಭ ಹೃದಯಕ್ಕೆ ಮೂರು ಬಾರಿ ಬಲವಾಗಿ ಇರಿದಿದ್ದಾರೆ ಎಂದು ಹೇಳಿದ್ದಾರೆ. “ತೀಕ್ಷ್ಣವಾದ ಚಾಕುವಿನ ಹೊಡೆತಗಳು ಹೃದಯದೊಳಗೆ ಆಳವಾಗಿ ಚುಚ್ಚಿದ್ದವು” ಎಂದು ವೈದ್ಯರಲ್ಲಿ ಒಬ್ಬರು ಹೇಳಿದ್ದಾರೆ.

ಪೊಲೀಸ್ ಅಧೀಕ್ಷಕ (ನಗರ) ಆಯುಷ್ ವಿಕ್ರಮ್ ಸಿಂಗ್ ವರದಿಯಲ್ಲಿನ ಸಂಗತಿಗಳನ್ನು ದೃಢಪಡಿಸಿದ್ದಾರೆ ಮತ್ತು “ಮುಸ್ಕಾನ್ ತನ್ನ ಪತಿ ಸೌರಭ ಅವರ ಹೃದಯಕ್ಕೆ ಕ್ರೂರವಾಗಿ ಇರಿದಿದ್ದಾಳೆ. ಆತನ ಕುತ್ತಿಗೆಯನ್ನು ಕತ್ತರಿಸಲಾಯಿತು ಮತ್ತು ಎರಡೂ ಅಂಗೈಗಳನ್ನು ಕತ್ತರಿಸಲಾಯಿತು. ದೇಹವನ್ನು ಡ್ರಮ್ಮಿನಲ್ಲಿ ತುಂಬಲು ನಾಲ್ಕು ತುಂಡುಗಳಾಗಿ ಕತ್ತರಿಸಲಾಯಿತು ಎಂದು ವರದಿ ಹೇಳಿದೆ. ಶವವನ್ನು ಡ್ರಮ್‌ನಲ್ಲಿ ಬಚ್ಚಿಡುವ ಅಮಾನುಷ ಯತ್ನವನ್ನು ವೈದ್ಯಕೀಯ ತಂಡ ಬಹಿರಂಗಪಡಿಸಿದ್ದು, ಡ್ರಮ್‌ನಲ್ಲಿ ಧೂಳು ಮತ್ತು ಸಿಮೆಂಟ್ ತುಂಬಿತ್ತು ಎಂದು ಹೇಳಿದ್ದಾರೆ.
“ದೇಹವು ಸಿಮೆಂಟ್‌ನಲ್ಲಿ ಗಟ್ಟಿಯಾಗುತ್ತದೆ ಮತ್ತು ಗಾಳಿಯ ಕೊರತೆಯಿಂದಾಗಿ ಕೊಳೆಯಲಿಲ್ಲ. ವಾಸನೆಯು ಅತ್ಯಂತ ದುರ್ವಾಸನೆಯಾಗಿರಲಿಲ್ಲ” ಎಂದು ಮರಣೋತ್ತರ ಪರೀಕ್ಷೆ ತಂಡದ ಸದಸ್ಯರೊಬ್ಬರು ಹೇಳಿದರು.
ದೇಹದ ಭಾಗಗಳನ್ನುತೆಗೆಯಲು ಡ್ರಮ್ ಅನ್ನು ತೆರೆದು ಗಟ್ಟಿಯಾದ ಸಿಮೆಂಟ್ ತೆಗೆಯಬೇಕಾಯಿತು.
ಮುಸ್ಕಾನ್ ಮತ್ತು ಸೌರಭ್ 2016 ರಲ್ಲಿ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. ಇವರಿಬ್ಬರಿಗೆ ಆರು ವರ್ಷದ ಮಗಳಿದ್ದಾಳೆ. ಮುಸ್ಕಾನ್ ಮತ್ತು ಸಾಹಿಲ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಪರಸ್ಪರ ಪರಿಚಿತರು ಮತ್ತು ಅವರು 2019 ರಲ್ಲಿ ವಾಟ್ಸಾಪ್ ಗುಂಪಿನಲ್ಲಿ ಪುನಃ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement