ಆಮದಾಗುವ ಕಾರುಗಳ ಮೇಲೆ 25% ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಮೆರಿಕದಲ್ಲಿ ತಯಾರಾಗದ ಆಟೋ ಮೊಬೈಲ್‌ ಆಮದುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದಾರೆ.
ಸುಂಕವು ಏಪ್ರಿಲ್ 2 ರಿಂದ ಜಾರಿಗೆ ಬರಲಿದೆ. ಇತ್ತೀಚಿನ ಕ್ರಮವು ವಿದೇಶಿ ನಿರ್ಮಿತ ಕಾರುಗಳು ಮತ್ತು ಲಘು ಟ್ರಕ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
“ಅಮೆರಿಕದಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ 25% ಸುಂಕ ವಿಧಿಸಲಾಗುತ್ತದೆ. ಅವುಗಳು ಅಮೆರಿಕದಲ್ಲಿ ತಯಾರಾದರೆ ಅವುಗಳಿಗೆ ಸಂಪೂರ್ಣ ಸುಂಕ ವಿನಾಯತ್ತಿ ನೀಡಲಾಗುವುದು ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದರು.
ಈ ವರ್ಷದ ಜನವರಿಯಲ್ಲಿಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಈಗಾಗಲೇ ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರಾದ ಕೆನಡಾ, ಮೆಕ್ಸಿಕೊ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕವನ್ನು ವಿಧಿಸಿದ್ದಾರೆ ಮತ್ತು ಸಾರ್ವತ್ರಿಕವಾಗಿ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ 25% ಸುಂಕವನ್ನು ವಿಧಿಸಿದ್ದಾರೆ.

ಆಮದು ಮಾಡಿಕೊಂಡ ಪ್ರಯಾಣಿಕ ವಾಹನಗಳಾದ ಸೆಡಾನ್‌ಗಳು, ಎಸ್‌ಯುವಿಗಳು, ಮಿನಿವ್ಯಾನ್‌ಗಳು, ಕಾರ್ಗೋ ವ್ಯಾನ್‌ಗಳು ಮತ್ತು ಹಗುರ ಟ್ರಕ್‌ಗಳು ಮತ್ತು ಎಂಜಿನ್‌ಗಳು, ಟ್ರಾನ್ಸ್‌ಮಿಷನ್‌ಗಳು, ಪವರ್‌ಟ್ರೇನ್ ಭಾಗಗಳು ಮತ್ತು ವಿದ್ಯುತ್ ಘಟಕಗಳಂತಹ ಪ್ರಮುಖ ಆಟೋಮೊಬೈಲ್ ಭಾಗಗಳಿಗೆ 25% ಸುಂಕವನ್ನು ಅನ್ವಯಿಸಲಾಗುತ್ತದೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ. ಅಗತ್ಯಬಿದ್ದರೆ ಹೆಚ್ಚುವರಿ ಭಾಗಗಳಿಗೆ ಸುಂಕವನ್ನು ವಿಸ್ತರಿಸಬಹುದು ಎಂದು ಅದು ಹೇಳಿದೆ.
ಸುಂಕಗಳು ಸರ್ಕಾರದ ಆದಾಯವನ್ನು ಹೆಚ್ಚಿಸಲು, ಅಮೆರಿಕದ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅಮೆರಿಕ ನಿಗದಿಪಡಿಸಿದ ನಿಯಮಗಳಿಗೆ ಇತರ ರಾಷ್ಟ್ರಗಳನ್ನು ಒಳಪಡಿಸಲು ಒಂದು ಮಾರ್ಗವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ಆದಾಗ್ಯೂ, ಆಮದು ಮಾಡಲಾದ ಕಾರುಗಳ ಮೇಲೆ ಸುಂಕಗಳನ್ನು ವಿಧಿಸುವುದರಿಂದ ಅಮೆರಿಕದ ನಿಕಟ ಪಾಲುದಾರರಾದ ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಮೆಕ್ಸಿಕೋ ಮತ್ತು ಜರ್ಮನಿಯಂತಹ ದೇಶಗಳೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement