ಶಿರಸಿ: ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರಿಗೆ ‘ಲಕ್ಷ್ಮೀಧರ ಅಮಾತ್ಯ’ನ ಶಾಸನ ಫಲಕದ ಸ್ಮರಣಿಕೆ ಪ್ರದಾನ

ಶಿರಸಿ : ನಗರದ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ ಅವರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗೌರವಿಸಿ ಆಪ್ತರು ಗೆಳೆಯರೆಲ್ಲ ಸೇರಿ ಭಾನುವಾರ ವಿಶ್ವಾವಸು ಸಂವತ್ಸರದ ಯುಗಾದಿಯ ಸಂದರ್ಭವನ್ನು ಬಳಸಿ ‘ಲಕ್ಷ್ಮೀಧರ ಅಮಾತ್ಯ’ನ ಶಾಸನವನ್ನುದ್ಧೃತಗೊಳಿಸಿದ ಫಲಕವನ್ನು ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ.
ಫಲಕವನ್ನು ಸಿದ್ಧಪಡಿಸಿದ ಅಶೋಕ ಹಾಸ್ಯಗಾರ ಅವರು ಈ ಸಂಬಂಧವಾಗಿ ಮಾತನಾಡಿ, ‘ ವಿಜಯನಗರ ಸಾಮ್ರಾಜ್ಯದ ಒಂದನೇ ದೇವರಾಯನ ಮಂತ್ರಿಯಾಗಿದ್ದ ಲಕ್ಷ್ಮೀಧರ ಅಮಾತ್ಯನು ಸಾ.ಶ.ವ.1410 ರಲ್ಲಿ ಬರೆಸಿದ ‘ ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ನಿರ್ಮಿಸಜ್ಜೆರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ ನೆರೆದಳ್ ತೊಟ್ಟು ಪಾಲೆರೆವೆನೆಂದು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ ‘ ಎಂಬ ಶಾಸನದಲ್ಲಿ ಬರೆದುದನ್ನು ವಿವರಿಸಿ ಇದು ಶ್ರೀನಿವಾಸ ಹೆಬ್ಬಾರರ ಬಹುಮುಖಿ ಸಮಾಜ ಸೇವೆಗೆ ಸೂಕ್ತ ಹೊಂದಾಣಿಕೆಯಾಗುತ್ತದೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್, ನಿವೃತ್ತ ಉಪನ್ಯಾಸಕ ಪ್ರೊ. ಕೆ.ವಿ.ಭಟ್, ಡಾ. ಲಕ್ಷ್ಮೀನಾರಾಯಣ ಭಟ್ ಧರ್ಮಶಾಲೆ , ವಿಶ್ವಂಭರ ಟಿ.ವಿ ಮುಖ್ಯಸ್ಥ ಅನಂತಮೂರ್ತಿ ಹೆಗಡೆ, ಡಾ.ಗೋವಿಂದ ಭಟ್, ಫೋಟೋಗ್ರಾಫರ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ, ಹೆಬ್ಬಾರರ ಪತ್ನಿ, ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement