ಇವರು ಭಾರತದ ಅತಿ ಎತ್ತರದ ದಂಪತಿ, ಕುಟುಂಬದ ನಾಲ್ವರ ಸಂಯೋಜಿತ ಎತ್ತರ 26 ಅಡಿ…! ವಿಶ್ವ ದಾಖಲೆ ಸ್ಥಾಪಿಸುತ್ತಾರೆಯೇ..?

ತಮ್ಮ ಸಂಯೋಜಿತ (ಒಟ್ಟು ಸೇರಿ) ಎತ್ತರದಲ್ಲಿ ಭಾರತದ ಅತಿ ಎತ್ತರದ ಕುಟುಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಕುಟುಂಬದ ಶರದ್ ಕುಲಕರ್ಣಿ (52) ಅವರು 7 ಅಡಿ 1.5 ಇಂಚು ಎತ್ತರವಿದ್ದಾರೆ. ಮತ್ತು ಅವರ ಪತ್ನಿ ಸಂಜೋತ್ (46) ಅವರು 6 ಅಡಿ 2.6 ಇಂಚು ಎತ್ತರವಿದ್ದಾರೆ. ಈ ದಂಪತಿಯ ಪುತ್ರಿಯರಾದ 22 ವರ್ಷದ ಮೃಗಾ ಮತ್ತು 16 ವರ್ಷದ ಸಾನ್ಯಾ ಕ್ರಮವಾಗಿ 6 ​​ಅಡಿ 1 ಇಂಚು ಮತ್ತು 6 ಅಡಿ 4 ಇಂಚು ಎತ್ತರವಿದ್ದಾರೆ. ಕುಟುಂಬದ ಒಟ್ಟು ಎತ್ತರವು 26 ಅಡಿಗಳು. ಕುಲಕರ್ಣಿಗಳು. ಇವರು ಪುಣೆ ನಗರದಲ್ಲಿ ವಾಸವಾಗಿದ್ದಾರೆ.
1989 ರಲ್ಲಿ ವಿವಾಹವಾದ ಶರದ್‌ ಕುಲಕರ್ಣಿ ಮತ್ತು ಅವರ ಪತ್ನಿ, ಭಾರತದ ಅತಿ ಎತ್ತರದ ದಂಪತಿ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಲ್ಲಿ ಸೇರ್ಪಡೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ನಿಂದ ವೇಯ್ನ್ ಮತ್ತು ಲಾರಿ ಹಾಲ್‌ಕ್ವಿಸ್ಟ್ ದಂಪತಿ ಒಟ್ಟು ಎತ್ತರ 13 ಅಡಿ 4 ಇಂಚು. ಶರದ್‌ ಹಾಗೂ ಸಂಜೋತಾ ದಂಪತಿಯ ಒಟ್ಟು ಎತ್ತರ 13 ಅಡಿ 3.11 ಇಂಚು ಎತ್ತರವಾಗಿದೆ.
ಶರದ್‌ ಕುಲಕರ್ಣಿ ಹದಿಹರೆಯದಲ್ಲಿ 7 ಅಡಿ ಎತ್ತರವನ್ನು ದಾಟಿದಾಗ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಅವರು ದೇಶದ ಪರವಾಗಿ ಬ್ಯಾಸ್ಕೆಟ್‌ಬಾಲ್ ಆಡಿದ್ದಾರೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ಕುಲಕರ್ಣಿಯವರ ಮದುವೆಯ ಕತೆ…
ಕುಲಕರ್ಣಿಯವರು ಒಂದು ಸಂಜೆ ಮುಂಬೈನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಯಸ್ಸಾದ ಮಹಿಳೆಯೊಬ್ಬರು ತನ್ನ ಬಳಿಗೆ ಬಂದರು. ‘ಈ ವಯಸ್ಸಾದ ಮಹಿಳೆ ನನ್ನ ಬಳಿಗೆ ಬಂದು ನಾನು ಮದುವೆಯಾಗಿದ್ದೇನೆಯೇ ಅಥವಾ ಒಂಟಿಯಾಗಿದ್ದೇನೆಯೇ ಎಂದು ಪ್ರಶ್ನಿಸಿದರು. ತಾನು ಒಂಟಿಯಾಗಿದ್ದೇನೆ ಎಂದು ಹೇಳಿದಾಗ 6 ಅಡಿಗಿಂತ ಹೆಚ್ಚು ಎತ್ತರ ಇರುವ ಅವರ ಮೊಮ್ಮಗಳನ್ನು ಭೇಟಿಯಾಗುತ್ತೀರಾ ಎಂದು ಕೇಳಿದರು ಎಂದು ಶರದ್‌ ಕುಲಕರ್ಣಿ ಡೈಲಿಮೇಲ್‌ಗೆ ಹೇಳಿದ್ದಾರೆ. ‘ನಾನು ಮೊದಲು ಅವಳ ಮಾತನ್ನು ನಂಬಲಿಲ್ಲ, ಹಾಗಾಗಿ ನಾನು ನಿರಾಕರಿಸಿದೆ. ಆದರೆ ನನ್ನ ಸ್ನೇಹಿತರು ಅಜ್ಜಿಯ ದೂರವಾಣಿ ನಂಬರ್‌ ತೆಗೆದುಕೊಳ್ಳಲು ಮನವೊಲಿಸಿದರು ಎಂದು ಹೇಳಿದ್ದಾರೆ.
ಕೆಲವು ವಾರಗಳ ನಂತರ, ಕುಲಕರ್ಣಿ ಅವರ ಪೋಷಕರು ಅಜ್ಜಿ ನೀಡಿದ ದೂರವಾಣಿ ಸಂಖ್ಯೆಯನ್ನು ಡಯಲ್ ಮಾಡಿದರು. ನಂತರ ಭಾರತೀಯ ಸಂಪ್ರದಾಯದಂತೆ ಎರಡು ಕುಟುಂಬದವರು ಮಾತುಕತೆ ನಡೆಸಿದರು. ‘ಅನೇಕ ಮಹಿಳೆಯರು ತಾವು 6 ಅಡಿ ಎಂದು ಹೇಳಿಕೊಂಡಿದ್ದಾರೆ ಆದರೆ, ನಾವು ಭೇಟಿಯಾದಾಗ ಅವರು ಕೇವಲ 5 ಅಡಿ 10 ಇಂಚುಗಳು ಇರುತ್ತಿದ್ದರು. ನನ್ನ ಮುಂದೆ ಅವರು ಕುಳ್ಳಗೆ ಕಾಣುತ್ತಿದ್ದರು. ಆದರೆ ನಾನು ಸಂಜೋತ್‌ ಅವಳನ್ನು ಭೇಟಿಯಾದಾಗ ಅವಳು 6 ಅಡಿಗಿಂತ ಹೆಚ್ಚು ಎತ್ತರದಲ್ಲಿದ್ದಳು ಎಂದು ತಿಳಿದು ನನಗೆ ಸಂತೋಷವಾಯಿತು ಎಂದು ಅವರು ಡೈಲಿಮೇಲ್‌ಗೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

ದಂಪತಿ ಡಿಸೆಂಬರ್ 1988 ರಲ್ಲಿ ವಿವಾಹವಾದರು. ಒಂದು ವರ್ಷದ ನಂತರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಈ ದಂಪತಿಯನ್ನು ಭಾರತದ ಅತಿ ಎತ್ತರದ ವಿವಾಹಿತ ಜೋಡಿ ಎಂದು ಘೋಷಿಸಿತು.
ಅವರ ಮನೆಯನ್ನು ಅವರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲಾಗಿದೆ, ಎಲ್ಲಾ ಬಾಗಿಲು ಚೌಕಟ್ಟುಗಳನ್ನು 6 ಅಡಿ ಇದ್ದಿದ್ದನ್ನು 8 ಅಡಿಗಳಿಗೆ ಎತ್ತರಿಸಲಾಗಿದೆ. ಹಾಸಿಗೆಗಳು, ವಾರ್ಡ್‌ರೋಬ್‌ಗಳು, ಅಡುಗೆಮನೆಯ ಕಪಾಟುಗಳು ಮತ್ತು ಶೌಚಾಲಯದ ಎತ್ತರ ಒಳಗೊಂಡಂತೆ ಅವರು ತಮ್ಮ ಪೀಠೋಪಕರಣಗಳನ್ನು ಕಸ್ಟಮೈಸ್ ಮಾಡಿದ್ದಾರೆ. ಆದಾಗ್ಯೂ, ಅವರು ಸಾರ್ವಜನಿಕ ಸಾರಿಗೆಯಲ್ಲಿ ಹೋಗುವುದಿಲ್ಲ. ಬದಲಿಗೆ ಸ್ಕೂಟರ್‌ ನಲ್ಲಿ ಹೋಗುತ್ತಾರೆ. ವಿಮಾನ ಪ್ರಯಾಣ ಮಾಡುವ ಅಗತ್ಯವಿದ್ದಾಗ, ಅವರು ಅಲ್ಲಿ ಮುಂಭಾಗದ ಆಸನ ಅಥವಾ ತುರ್ತು ನಿರ್ಗಮನ ಸಾಲನ್ನು ನೀಡುವಂತೆ ವಿನಂತಿಸುತ್ತಾರೆ.ಯಾಕೆಂದರೆ ಅವರಿಬ್ಬರ ಎತ್ತರ.
ಈಗ, ಅವರು ತಮ್ಮ ಇಬ್ಬರು ಬೆಳೆದ ಹೆಣ್ಣುಮಕ್ಕಳಾದ ಮೃಗಾ ಮತ್ತು ಸಾನ್ಯಾ ಜೊತೆಗೆ ವಿಶ್ವದ ಅತಿ ಎತ್ತರದ ಕುಟುಂಬವಾಗುವ ಅವಕಾಶ ಸಿಗುವ ಬಗ್ಗೆ ಆಶಿಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement